Karnataka news paper

ದೇಶದ ಜನತೆಗೆ ಉತ್ತರಾಯಣ, ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ


Online Desk

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾಹರ ದೇಶದ ನಾಗರೀಕರಿಗೆ ಉತ್ತರಾಯಣ ಮತ್ತು ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಭಾರತದಾದ್ಯಂತ ಜನರು ವಿವಿಧ ಹಬ್ಬಗಳನ್ನು ಆಚರಿಸುತ್ತಿದ್ದಾರೆ, ಇದು ದೇಶದ ಸಾಂಸ್ಕøತಿಕ ವೈವಿಧ್ಯತೆಯನ್ನು ಸೂಚಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಗವಿಗಂಗಾಧರೇಶ್ವರಗೆ ನಾಳೆ ಸೂರ್ಯ ರಶ್ಮಿ ಸ್ಪರ್ಶ: ದೇವಾಲಯದಲ್ಲಿ ವಿಶೇಷ ಪೂಜೆಗೆ ಸಿದ್ಧತೆ, ಭಕ್ತರಿಗಿಲ್ಲ ದರ್ಶನಕ್ಕೆ ಅವಕಾಶ

“ಪೊಂಗಲ್ ತಮಿಳುನಾಡಿನ ಸಂಸ್ಕೃತಿ ದ್ಯೋತಕವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಮತ್ತು ವಿಶೇವಾಗಿ ಪ್ರಪಂಚದಾದ್ಯಂತ ವ್ಯಾಪಿಸಿರುವ ತಮಿಳು ಜನರಿಗೆ ನನ್ನ ಶುಭಾಶಯಗಳು. ಪ್ರಕೃತಿಯೊಂದಿಗಿನ ನಮ್ಮ ಬಾಂಧವ್ಯ ಮತ್ತು ಸಮಾಜದಲ್ಲಿ ಸಹೋದರತ್ವದ ಮನೋಭಾವವು ಗಾಢವಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವಿಟರ್‍ನಲ್ಲಿ ಹೇಳಿದ್ದಾರೆ.

“ನಿಮ್ಮೆಲ್ಲರಿಗೂ ಮಾಘ ಬಿಹು ಶುಭಾಶಯಗಳು. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ನೀಡಲಿ ಮತ್ತು ಸಮೃದ್ಧಿ ಹೆಚ್ಚಿಸಲಿ. ಹಬ್ಬವು ನಮ್ಮ ಸಮಾಜದಲ್ಲಿ ಸಂತೋಷದ ಚೈತನ್ಯವನ್ನು ಸಮೃದ್ಧಗೊಳಿಸಲಿ. ಆ ನಮ್ಮ ನಾಗರೀಕರ ಆರೋಗ್ಯ ಉತ್ತಮವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಲುವ ಮೂಲಕ ಶುಭ ಹಾರೈಸಿದ್ದಾರೆ.



Read more

[wpas_products keywords=”deal of the day”]