Karnataka news paper

ಆಂಧ್ರಪ್ರದೇಶದ ತಾಡೇಪಲ್ಲಿ ಗೂಡೆಂನಲ್ಲಿ ಭೀಕರ ಅಪಘಾತ: ಮಗುಚಿ ಬಿದ್ದ ಲಾರಿ, ನಾಲ್ವರ ಸಾವು


Online Desk

ಗೋದಾವರಿ (ಆಂಧ್ರ ಪ್ರದೇಶ): ಆಂಧ್ರಪ್ರದೇಶ ತಾಡೇಪಲ್ಲಿ ಗೂಡೆಂನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿಯೊಂದು ಮಗುಚಿ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, ಹಲವು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. 

ಇಂದು ಮುಂಜಾನೆ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೇಪಲ್ಲಿ ಗೂಡೆಂನಲ್ಲಿ ಮೀನು ತುಂಬಿಕೊಂಡು ಹೋಗುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

ಇದನ್ನೂ ಓದಿ: ದಾವಣಗೆರೆಯಲ್ಲಿ ಭೀಕರ ರಸ್ತೆ ಅಪಘಾತ: ಡಿವೈಡರ್’ಗೆ ಕಾರು ಡಿಕ್ಕಿ, 7 ಮಂದಿ ದುರ್ಮರಣ

ಅಪಘಾತಕ್ಕೀಡಾದ ಲಾರಿ ವಿಶಾಖಪಟ್ಟಣಂ ಜಿಲ್ಲೆಯ ದುವ್ವಾಡದಿಂದ ತಾಡೆಪಲ್ಲಿಗುಡೆಂ ಬಳಿಯ ನಾರಾಯಣಪುರಕ್ಕೆ ಹೋಗುತ್ತಿತ್ತು. ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಲಾರಿಯಲ್ಲಿ ಒಬ್ಬ ಚಾಲಕ ಹಾಗೂ ಇತರೆ ಕಾರ್ಮಿಕರು ಸೇರಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ತರು ಮತ್ತು ಗಾಯಗೊಂಡವರು ಟ್ರಕ್‌ನಲ್ಲಿದ್ದಾಗ ಕ್ಯಾಬಿನ್‌ನಲ್ಲಿದ್ದ ಚಾಲಕ ಮತ್ತು ಇತರರು ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದರು.



Read more

[wpas_products keywords=”deal of the day”]