Online Desk
ಕೇಪ್ ಟೌನ್: ದಕ್ಷಿಣ ಆಫ್ರಿಕ ವಿರುದ್ದ ನಡೆಯುತ್ತಿರುವ ನಿರ್ಣಾಯಕ ಮೂರನೇ ಟೆಸ್ಟ್ ನಲ್ಲಿ ಹೀನಾಯ, ವಿಚಿತ್ರ ದಾಖಲೆಯೊಂದನ್ನು ಟೀಂ ಇಂಡಿಯಾ ನಿರ್ಮಿಸಿದೆ.
ಕೇಪ್ ಟೌನ್ ನಲ್ಲಿ ನಡೆಯುತ್ತಿರುವ 3ನೇ ಸ್ಟೆ ಪಂದ್ಯದಲ್ಲಿ ಅತ್ಯಧಿಕ ಕ್ಯಾಚ್ ನೀಡಿ ಔಟಾದ ತಂಡವಾಗಿ ಭಾರತ ದಾಖಲೆ ನಿರ್ಮಿಸಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ರಬಾಡ ಬೌಲಿಂಗ್ ನಲ್ಲಿ ಎಲ್ಗರ್ ಗೆ ಕ್ಯಾಚ್ ನೀಡಿ ಆಲೌಟ್ ಆಗುವ ಮೂಲಕ ಭಾರತ ತಂಡ ಈ ದಾಖಲೆ ನಿರ್ಮಿಸಿದೆ.
ಪ್ರಸ್ತುತ ಸರಣಿಯಲ್ಲಿ ಈವರೆಗೆ 49ಮಂದಿ ಭಾರತೀಯ ಬ್ಯಾಟರ್ ಗಳು ಕ್ಯಾಚ್ ನೀಡಿ ಔಟಾಗಿ ಪೆವಿಲಿಯನ್ ಗೆ ಹಿಂದುರುಗಿದ್ದಾರೆ. ಈ ಹಿಂದೆ ಈ ದಾಖಲೆ ಪಾಕಿಸ್ತಾನದ ಹೆಸರಿನಲ್ಲಿತ್ತು.2000/01ರಲ್ಲಿ ನ್ಯೂಜಿಲ್ಯಾಂಡ್ ನೊಂದಿಗಿನ ಸರಣಿಯಲ್ಲಿ 48 ಪಾಕ್ ಆಟಗಾರರು ಕ್ಯಾಚ್ ನೀಡಿ ಔಟಾದ ದಾಖಲೆ ಹೊಂದಿದ್ದರು. ಆದರೆ 2006ಯ07ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಸರಣಿಯಲ್ಲೂ ಕೂಡಾ 47 ಭಾರತ ಆಟಗಾರರು ಕ್ಯಾಚ್ ನೀಡಿ ಔಟ್ ಆಗಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ದದ ಅಂತಿಮ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಹೊಸ ದಾಖಲೆ!
ಎರಡೂ ಇನ್ನಿಂಗ್ಸ್ ನಲ್ಲಿ ಕ್ಯಾಚ್ ನೀಡಿ 20 ಬ್ಯಾಟರ್ ಗಳು ಔಟ್
ಇನ್ನು ಈ ಪಂದ್ಯದ ಮತ್ತೊಂದು ವಿಶೇಷತೆ ಎಂದರೆ ಎರಡೂ ಇನ್ನಿಂಗ್ಸ್ ನಲ್ಲಿ ತಂಡದ ಎಲ್ಲ ಆಟಗಾರರೂ ಕ್ಯಾಚ್ ನೀಡಿಯೇ ಔಟಾಗಿದ್ದಾರೆ. ಯಾರೂ ಕೂಡ ಎಲ್ ಬಿ ಅಥವಾ ಇತರೆ ಮಾದರಿಯಲ್ಲಿ ಔಟಾಗಿಲ್ಲ. ಟೆಸ್ಟ್ ಕ್ರಿಕೆಟ್ ನ ಸುಮಾರು 149 ವರ್ಷಗಳ ಇತಿಹಾಸದಲ್ಲಿ ಇಂತಹ ಪರಿಸ್ಥಿತಿ ಇದೇ ಮೊದಲು ಎನ್ನಲಾಗಿದೆ.
Read more…
[wpas_products keywords=”deal of the day sports items”]