Karnataka news paper

‘ರೈಡರ್’ ಬಳಿಕ ಹೊಸ ಸಿನಿಮಾ ಘೋಷಣೆ ಮಾಡಿದ ನಟ ನಿಖಿಲ್ ಕುಮಾರಸ್ವಾಮಿ


ಹೈಲೈಟ್ಸ್‌:

  • ನಟ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ
  • ‘ರೈಡರ್’ ನಂತರ ನಿಖಿಲ್ ಒಪ್ಪಿಕೊಂಡ ಸಿನಿಮಾ ಕಥೆ ಏನು?
  • ಹೊಸ ಸಿನಿಮಾದಲ್ಲಿ ಯಾರು ಯಾರು ಇದ್ದಾರೆ? ನಿರ್ದೇಶಕರು ಯಾರು?

ರೈಡರ್‘ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ‘ಯುವರಾಜ’ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾದ ಶೂಟಿಂಗ್ ಅಖಾಡಕ್ಕೆ ಧುಮುಕಿದ್ದಾರೆ. ಈ ಸಿನಿಮಾವನ್ನು ಮಂಜು ಅಥರ್ವ ಎಂಬವವರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಚಿತ್ರರಂಗದಲ್ಲಿರುವ ಮಂಜು ಅಥರ್ವ, ತಮಿಳಿನ ಕದಿರನ್‌ ಜತೆ ಕೆಲಸ ಮಾಡಿದ್ದಾರೆ.

ಮಂಜು ಅಥರ್ವ ಈ ಹಿಂದೆ ಯಾವ ಸಿನಿಮಾ ಮಾಡಿದ್ದರು?
‘ಮಾಸ್ಟರ್‌ಪೀಸ್‌, ‘ಮಫ್ತಿ’ ಸಿನಿಮಾಗಳಿಗೆ ಅಸೋಸಿಯೇಟ್‌ ಆಗಿ ಮಂಜು ಕೆಲಸ ಮಾಡಿದ್ದಾರೆ. ‘ನೆನಪಿರಲಿ’ ಪ್ರೇಮ್‌ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಕೋ-ಡೈರೆಕ್ಟರ್‌ ಕೂಡ ಆಗಿದ್ದರು. ಇದೀಗ ಮಂಜು ಅಥರ್ವ, ನಿಖಿಲ್‌ ಅವರ ಸಿನಿಮಾ ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಈ ಸಿನಿಮಾ ವಿಶೇ‍ಷವೇನು?
ನಿಖಿಲ್ ಕುಮಾರಸ್ವಾಮಿ ಹಾಗೂ ಮಂಜು ಅಥರ್ವ ಕಾಂಬೋದಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾದ‌ ಮೊದಲ ಹಂತದ ಶೂಟಿಂಗ್ ಶುರುವಾಗಿದೆ. ನಿಖಿಲ್ ಅವರ ಭಾಗದ ಶೂಟಿಂಗ್ ನಡೆಯುತ್ತಿದ್ದು, ಈ ಬಗ್ಗೆ ಚಿತ್ರತಂಡ ಅಪ್ ಡೇಟ್ ನೀಡಿದೆ.‌ ಪಕ್ಕಾ ಆ್ಯಕ್ಷನ್, ಫ್ಯಾಮಿಲಿ ಎಂಟರ್‌ಟೇನರ್ ಸಿನಿಮಾವಾಗಿರುವ ಈ ಚಿತ್ರಕ್ಕೆ ಸದ್ಯಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಕೆವಿಎನ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಅದ್ದೂರಿಯಾಗಿ ಮೂಡಿ ಬರುತ್ತಿರುವ ಈ ಸಿನಿಮಾಗೆ ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ಹಣ ಹೂಡುತ್ತಿದ್ದಾರೆ.

ನಂಜನಗೂಡಲ್ಲಿ ‘ರೈಡರ್’ ರೌಂಡ್ಸ್..! ನಿಖಿಲ್ ಕುಮಾರಸ್ವಾಮಿಗೆ ಫ್ಯಾನ್ಸ್ ಜೈಕಾರ..

ಈ ಹೊಸ ಸಿನಿಮಾದ ಟೈಟಲ್ ಏನು?
ಅಜನೀಶ್ ಲೋಕನಾಥ್‌ ಸಂಗೀತ ನೀಡುತ್ತಿದ್ದು, ‘ಮಫ್ತಿ’, ‘ಮದಗಜ’ ಸಿನಿಮಾಗಳ ಸಿನಿಮಾಟೋಗ್ರಾಫರ್‌ ನವೀನ್‌ ಕ್ಯಾಮೆರಾ ಕೈ ಚಳಕ ಈ ಸಿನಿಮಾದಲ್ಲಿರಲಿದೆ. ಸದ್ಯಕ್ಕೆ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ನೀಡಿರುವ ಚಿತ್ರತಂಡ ಸದ್ಯದಲ್ಲಿಯೇ ಟೈಟಲ್ ಜೊತೆಗೆ ಉಳಿದ ತಾರಾಬಳಗದ ಬಗ್ಗೆ ಮಾಹಿತಿ‌ ನೀಡಲಿದೆ. ಈ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ನಿಖಿಲ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಭರ್ಜರಿ ಪ್ರಚಾರ ಮಾಡಿದ್ದ ನಿಖಿಲ್ ಕುಮಾರಸ್ವಾಮಿ
ನಟ ನಿಖಿಲ್ ಕುಮಾರಸ್ವಾಮಿ ‘ರೈಡರ್’ ಸಿನಿಮಾಕ್ಕೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿತ್ತು, ಸಿನಿಮಾ ಪೈರಸಿ ಆಗಿದ್ದು ಚಿತ್ರತಂಡಕ್ಕೆ ದೊಡ್ಡ ಬೇಸರ ತಂದಿತ್ತು. ನಿಖಿಲ್ ರಾಜ್ಯಾದ್ಯಂತ ಸಂಚರಿಸಿ, ಅನೇಕ ಕಡೆ ಥಿಯೇಟರ್ ವಿಸಿಟ್ ಮಾಡಿ ಸಿನಿಮಾ ಪ್ರಚಾರ ಮಾಡಿದ್ದರು. ಈ ಸಿನಿಮಾ ಹಾಡುಗಳು ಕೂಡ ಒಳ್ಳೆಯ ಮೆಚ್ಚುಗೆ ಗಳಿಸಿತ್ತು. ಕಾಶ್ಮೇರಾ ಪರದೇಶಿ ಈ ಸಿನಿಮಾದ ನಾಯಕಿಯಾಗಿದ್ದರು. ಈ ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ಚಿಲ್ಲರ್ ಮಂಜು, ಮಂಜು ಪಾವಗಡ ಮುಂತಾದವರು ನಟಿಸಿದ್ದರು.

ಚಿತ್ರರಂಗಕ್ಕೆ ಪುನೀತ್ ರಾಜ್‌ಕುಮಾರ್‌ರಂತಹ ನಟರು ಬೇಕು, ಆ ನಿಟ್ಟಿನಲ್ಲಿ ನಿಖಿಲ್ ಮುಂದುವರೆಯಲಿ: ಎಚ್ ಡಿ ಕುಮಾರಸ್ವಾಮಿ

ನಿಖಿಲ್ ‘ರೈಡರ್’ ಸಿನಿಮಾವನ್ನು ಮೆಚ್ಚಿಕೊಂಡ ಎಚ್ ಡಿ ಕುಮಾರಸ್ವಾಮಿ ಅವರು ‘ಮಗ ಸಿನಿಮಾ ಕಡೆಗೆ ಹೆಚ್ಚು ಗಮನ ಕೊಡಲಿ’ ಎಂದು ಹೇಳಿದ್ದರು. ‘ಜಾಗ್ವಾರ್’, ‘ಕುರುಕ್ಷೇತ್ರ’, ‘ಸೀತಾರಾಮ ಕಲ್ಯಾಣ’ ಸಿನಿಮಾಗಳಲ್ಲಿ ನಿಖಿಲ್ ನಟಿಸಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಕೆಲಸದ ಜೊತೆ ಜೊತೆಗೆ ಸಿನಿಮಾದಲ್ಲಿಯೂ ನಿಖಿಲ್ ಬ್ಯುಸಿಯಾಗುತ್ತಿದ್ದಾರೆ.



Read more

[wpas_products keywords=”deal of the day party wear dress for women stylish indian”]