Karnataka news paper

ಕೊಪ್ಪ ಕಾಲೇಜು ಆವರಣದಲ್ಲಿನ ಸ್ಕಾರ್ಫ್, ಕೇಸರಿ ಶಾಲು ವಿವಾದ ಶಾಂತಿಯುತವಾಗಿ ಅಂತ್ಯ!


The New Indian Express

ಚಿಕ್ಕಮಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕೋಮುಗಲಭೆ ವಿಚಾರವಾಗಿ ಭುಗಿಲೆದ್ದಿದ್ದ ವಿವಾದವೊಂದು ಶಾಂತಿಯುತವಾಗಿ ಅಂತ್ಯಗೊಂಡಿದೆ. 

ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿ ಕಾಲೇಜಿಗೆ ಬರುವುದನ್ನು ವಿರೋಧಿಸಿದ್ದ ಎಬಿವಿಪಿಗೆ ಸೇರಿದ ಕೆಲವು ಹಿಂದೂ ಯುವತಿಯರು ತಮ್ಮ ಸಮವಸ್ತ್ರದ ಮೇಲೆ ಕೇಸರಿ ಶಾಲುಗಳನ್ನು ಧರಿಸಿ ಕಾಲೇಜಿಗೆ ಹಾಜರಾಗಲು ಪ್ರಾರಂಭಿಸಿದರು. ಈ ಬೆಳವಣಿಗೆ ಕಾಲೇಜು ಆವರಣದಲ್ಲಿ ವಿವಾದವೊಂದು ಭುಗಿಲೇಳುವಂತೆ ಮಾಡಿತ್ತು. 

ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಶಾಸಕ ಟಿ.ಡಿ.ರಾಜೇಗೌಡ ಅವರು ಎರಡೂ ಸಮುದಾಯ ಪೋಷಕರನ್ನೊಳಗೊಡ ಶಾಂತಿಯುತ ಸಭೆ ನಡೆಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಸಲಹೆ ನೀಡಿದ್ದರು. 

ಇದರಂತೆ ನಿನ್ನೆ ಸಭೆ ನಡೆದಿದ್ದು, ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಪ್ರಾಂಶುಪಾಲರ ಸಮ್ಮುಖದಲ್ಲಿ ಸಮುದಾಯದ ಮುಖಂಡರ ನಡುವೆ ಇದ್ದ ಭಿನ್ನಾಭಿಪ್ರಾಯ ಬಗೆಹರಿದಿವೆ. ಇದರಿಂದ ಸಂಭವನೀಯ ಘರ್ಷಣೆಯೊಂದೂ ದೂರಾದಂತಾಗಿದೆ. 

ಪ್ರಾಂಶುಪಾಲ ಡಾ ಅನಂತ್ ಅವರು ಮಾತನಾಡಿ, 2018 ರಲ್ಲಿ ಕಾಲೇಜಿನಲ್ಲಿ ಇದೇ ರೀತಿಯ ಪರಿಸ್ಥಿತಿ ಉಂಟಾಗಿತ್ತು ಆದರೆ, ಸಾಮರಸ್ಯದ ಮೂಲಕ ಸಮಸ್ಯೆ ಪರಿಹರಿಸಲಾಗಿತ್ತು. ನಿನ್ನೆ ನಡೆದ ಸಭೆಯಲ್ಲಿ 2018 ರ ಒಪ್ಪಂದಕ್ಕೆ ಬದ್ಧವಾಗಿರಲು ಎರಡೂ ಸಮುದಾಯದ ಪೋಷಕರು ಒಪ್ಪಿಕೊಂಡಿದ್ದಾರೆ. ಮುಸ್ಲಿಂ ಯುವತಿಯರು ತಮ್ಮ ತಲೆಯ ಮೇಲೆ ಮುಸುಕುಗಳನ್ನಷ್ಟೇ ಧರಿಸುತ್ತಾರೆ. ಸಮವಸ್ತ್ರದ ಜೊತೆಗೆ ಶಾಲುಗಳನ್ನು ಧರಿಸುವುದಿಲ್ಲ ಎಂದು ಹೇಳಿದ್ದಾರೆ. ಹಿಂದೂ ಯುವತಿಯರ ಪೋಷಕರು 2018 ರ ನಿಯಮಕ್ಕೆ ಬದ್ಧವಾಗಿರುವುದಾಗಿ ಹಾಗೂ ಸಮವಸ್ತ್ರದಲ್ಲಿ ಕೇಸರಿ ಶಾಲುಗಳನ್ನು ಧರಿಸುವುದಿಲ್ಲ ಎಂದು ಹೇಳಿದ್ದಾರೆಂದು ತಿಳಿಸಿದ್ದಾರೆ. 

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ನಡೆದುಕೊಳ್ಳಬೇಕು ಮತ್ತು ಅಧ್ಯಯನಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು. 

ಕಾಲೇಜು ಆವರಣದಲ್ಲಿ ಕೋಮು ಜ್ವಾಲೆ ಎಬ್ಬಿಸುವ ಘಟನೆಗಳು ನಡೆಯಬಾರದು. ಸಭೆಯಲ್ಲಿ ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆಂದು ತಿಳಿಸಿದರು.



Read more

[wpas_products keywords=”deal of the day”]