Karnataka news paper

ಫೆಬ್ರವರಿ ಮೊದಲ ವಾರ ಕೊರೋನಾ 3ನೇ ಅಲೆ ಗರಿಷ್ಠ ಮಟ್ಟಕ್ಕೆ ಏರಿ 3-4ನೇ ವಾರ ಕಡಿಮೆಯಾಗಬಹುದು, ಲಾಕ್ ಡೌನ್ ಇಲ್ಲ: ಡಾ ಕೆ ಸುಧಾಕರ್


Online Desk

ಬೆಂಗಳೂರು: ಕೊರೋನಾ ಮೂರನೇ ಅಲೆ, ಓಮಿಕ್ರಾನ್ ಬಗ್ಗೆ ಆಲಕ್ಷ್ಯ ಬೇಡ, ಕೆಲವರಿಗೆ ಸೋಂಕಿನ ತೀವ್ರತೆಯಿದೆ, ಯಾರೂ ಕೂಡ ನಿರ್ಲಕ್ಷ್ಯ, ಉದಾಸೀನ ಮಾಡಬೇಡಿ, ಜನರ ಮುಂದೆ ಇರುವಾಗ, ಹೊರಗೆ ಓಡಾಡುವಾಗ, ಕಚೇರಿಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಳ್ಳಿ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ಬೂಸ್ಟರ್ ಡೋಸ್ ಪಡೆಯಲು ಅರ್ಹತೆ ಇರುವವರೆಲ್ಲರೂ, ಎರಡನೇ ಡೋಸ್ ಪಡೆಯುವವರು ಕೂಡ ಕಡ್ಡಾಯವಾಗಿ ಪಡೆಯಿರಿ. ಜನರು ಆತಂಕಪಡುವ ರೀತಿಯಲ್ಲಿ ಸರ್ಕಾರದ ಪ್ರತಿನಿಧಿಗಳು ಹೇಳಿಕೆಗಳನ್ನು ನೀಡುವುದಿಲ್ಲ. ಜನರು ಸ್ವಯಂಪ್ರೇರಣಿಯಿಂದ ಕೊರೋನಾ ಹತ್ತಿಕ್ಕಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಎರಡು ವರ್ಷಗಳಾಗುತ್ತಾ ಬಂದಿರುವಾಗ ಕೊರೋನಾ ನಿಯಂತ್ರಣಕ್ಕೆ ಏನೆಲ್ಲಾ ಮಾಡಬೇಕು ಎಂದು ಪಾಠ ಕಲಿತಿದ್ದೇವೆ. 

ಲಾಕ್ ಡೌನ್ ಹೇರಿಕೆ ಸರಿಯಲ್ಲ: ಈಗಾಗಲೇ ಎರಡು ಬಾರಿ ಲಾಕ್ ಡೌನ್ ಹೇರಿಕೆ ಮಾಡಲಾಗಿತ್ತು. ಆಗ ಜನರಿಗೆ ಆಗುವ ಸಮಸ್ಯೆಗಳ ಬಗ್ಗೆ ನಮಗೆ ಅರಿವಾಗಿದೆ, ಈಗಾಗಲೇ ನಿನ್ನೆ ಪ್ರಧಾನ ಮಂತ್ರಿ ಮೋದಿಯವರು ಮುಖ್ಯಮಂತ್ರಿಗಳ ಜೊತೆ ಸಂವಾದ ಮಾಡುವ ಸಂದರ್ಭದಲ್ಲಿ ಜನರಿಗೆ ಆರ್ಥಿಕ ನಷ್ಟವಾಗದ ರೀತಿಯಲ್ಲಿ ಜಾಗೃತೆ ವಹಿಸಬೇಕೆಂದು ಹೇಳಿದ್ದಾರೆ, ಆ ನಿಟ್ಟಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಜನರೇ ಸ್ವಯಂ ನಿಯಂತ್ರಣ ಮಾಡಿಕೊಂಡು ಇನ್ನು ಒಂದೂವರೆ ತಿಂಗಳು ಸಹಕರಿಸಿದರೆ ಖಂಡಿತವಾಗಿಯೂ ಕೊರೋನಾ ನಿಯಂತ್ರಣವಾಗುತ್ತದೆ, ಲಾಕ್ ಡೌನ್ ಹೇರಿಕೆಯೊಂದೇ ಅಸ್ತ್ರವಲ್ಲ, ಎರಡು ತಿಂಗಳು ಜನರು ಕೊರೋನಾ ಮಾರ್ಗಸೂಚಿ, ನಿಯಮಗಳನ್ನು ಪಾಲಿಸಿದರೆ ಇದನ್ನು ನಿಯಂತ್ರಿಸಲು ಖಂಡಿತಾ ಸಾಧ್ಯವಿದೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ದಿನಕ್ಕೆ 2.5 ಲಕ್ಷಕ್ಕೆ ಹೆಚ್ಚಿಸಲು ನಿರ್ಧಾರ, 5T ಕಾರ್ಯತಂತ್ರ ಜಾರಿ

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೋನಾ ಸೋಂಕು ಜಾಸ್ತಿಯಾಗುತ್ತಿದೆ. ಶೇಕಡಾ 5ರಿಂದ 6ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿರುವುದು ಒಂದು ಸಮಾಧಾನದ ಸಂಗತಿ. ವೈದ್ಯರು, ದಾದಿಯರಿಗೂ ಬರುತ್ತಿರುವುದರಿಂದ ಆರೋಗ್ಯ ಸೇವೆಗೆ ವ್ಯತ್ಯಯವಾಗಬಹುದು ಎಂಬ ಆತಂಕವಿದೆ ಎಂದರು.

ಕೊರೋನಾ ನಿಯಂತ್ರಣವಾಗಲು ಕನಿಷ್ಠ 14-15 ದಿನ ಬೇಕು. ವೀಕೆಂಡ್ ಕರ್ಫ್ಯೂ, ಕೊರೋನಾ ನಿರ್ಬಂಧ ಮಾಡಿ ಎರಡು ವಾರಗಳಾಗಿವೆಯಷ್ಟೆ. ಒಂದೇ ವಾರದಲ್ಲಿ ಕೊರೋನಾ ಸೋಂಕು ಕಡಿಮೆಯಾಗುವುದಿಲ್ಲ. ಓಮಿಕ್ರಾನ್ 5ರಿಂದ 6 ಪಟ್ಟು ವೇಗವಾಗಿ ಹರಡುತ್ತದೆ. ಕೊರೋನಾ ಮೂರನೇ ಅಲೆ ಇನ್ನೂ ಗರಿಷ್ಠ ಮಟ್ಟಕ್ಕೆ ತಲುಪಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು. 

ಫೆಬ್ರವರಿ ಮೊದಲನೇ ವಾರ ಕೊರೋನಾ ಸೋಂಕು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ ಮೂರು-ನಾಲ್ಕನೇ ವಾರದಿಂದ ಸ್ವಲ್ಪ ಕಡಿಮೆಯಾಗಬಹುದು ಎಂದು ಹೇಳುತ್ತಿದ್ದಾರೆ ಎಂದು ಡಾ ಕೆ ಸುಧಾಕರ್ ಹೇಳಿದರು.





Read more

[wpas_products keywords=”deal of the day”]