Karnataka news paper

ಮಾನನಷ್ಟ ಮೊಕದ್ದಮೆ: ಸಲ್ಮಾನ್ ಖಾನ್ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ


ಹೈಲೈಟ್ಸ್‌:

  • ಮಾನನಷ್ಟ ಮೊಕದ್ದಮೆಯಲ್ಲಿ ಸಲ್ಮಾನ್ ಖಾನ್‌ಗೆ ಹಿನ್ನಡೆ
  • ಮಧ್ಯಂತರ ಆದೇಶ ನೀಡಲು ನಿರಾಕರಿಸಿದ ಕೋರ್ಟ್
  • ತಮ್ಮ ಪನ್ವೇಲ್ ಫಾರ್ಮ್‌ಹೌಸ್‌ನ ನೆರೆಹೊರೆಯವರ ವಿರುದ್ಧ ದಾವೆ ಹೂಡಿರುವ ಸಲ್ಮಾನ್ ಖಾನ್

ಮುಂಬೈನ ಹೊರವಲಯದ ಪನ್ವೇಲ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಫಾರ್ಮ್‌ಹೌಸ್‌ ಹೊಂದಿರುವುದು ಗೊತ್ತಿರುವ ವಿಷಯ. ನಟ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್ ಬಳಿಯೇ ಜಮೀನು ಹೊಂದಿರುವ ಕೇತನ್ ಕಕ್ಕಡ್ ಎಂಬುವರು ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ಆ ಸಂದರ್ಶನದಲ್ಲಿ ತಮಗೆ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸಿವಿಲ್ ಮೊಕದ್ದಮೆ ಹೂಡಿದ್ದರು. ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಪರವಾಗಿ ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡಲು ಮುಂಬೈ ಸಿಟಿ ಸಿವಿಲ್ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಉತ್ತರವನ್ನು ಸಲ್ಲಿಸುವಂತೆ ಕೇತನ್ ಕಕ್ಕಡ್ ಅವರಿಗೆ ನ್ಯಾಯಾಧೀಶ ಅನಿಲ್‌.ಹೆಚ್‌.ಲದ್ದಾಡ್ ಸೂಚಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಲಾಗಿದೆ.

ನಟ ಸಲ್ಮಾನ್ ಖಾನ್ ಅವರನ್ನು ಡಿಎಸ್‌ಕೆ ಲೀಗಲ್‌ನ ವಕೀಲರು ಪ್ರತಿನಿಧಿಸುತ್ತಿದ್ದು, ಕೇತನ್ ಕಕ್ಕಡ್‌ ಅವರು ಇನ್ಮುಂದೆ ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ಕೊಡದಂತೆ ತಮ್ಮ ಕಕ್ಷಿದಾರರ ಪರವಾಗಿ ಮಧ್ಯಂತರ ತಡೆಯಾಜ್ಞೆ ಆದೇಶ ನೀಡುವಂತೆ ಕೋರ್ಟ್‌ಗೆ ಕೋರಿದ್ದರು. ಆದರೆ ಇದಕ್ಕೆ ಕೇತನ್ ಕಕ್ಕಡ್ ಅವರ ಪರ ವಕೀಲರಾದ ಅಭಾ ಸಿಂಗ್ ಮತ್ತು ಆದಿತ್ಯ ಪ್ರತಾಪ್ ಅವರು ವಿರೋಧಿಸಿದರು. ಕೇಸ್‌ಗೆ ಸಂಬಂಧಿಸಿದ ಪೇಪರ್‌ಗಳನ್ನು ತಾವು ಗುರುವಾರ ಸಂಜೆಯಷ್ಟೇ ಸ್ವೀಕರಿಸಿದ್ದರಿಂದ ತಮಗೆ ಕಾಲಾವಕಾಶ ನೀಡಬೇಕೆಂದು ಕೇತನ್ ಕಕ್ಕಡ್ ಪರ ವಕೀಲರು ಕೋರ್ಟ್‌ಗೆ ಕೋರಿಕೆ ಸಲ್ಲಿಸಿದರು.

ಐಷಾರಾಮಿ ಕಾರು ಬಿಟ್ಟು ಆಟೋ ಓಡಿಸಿದರೂ.. ಟ್ರೋಲ್ ಆದ ಸಲ್ಮಾನ್ ಖಾನ್.! ಯಾಕೆ?
ಪ್ರಕರಣದಲ್ಲಿ ಮಧ್ಯಂತರ ಆದೇಶಕ್ಕೆ ತುರ್ತು ಅಗತ್ಯವಿಲ್ಲ, ತಮ್ಮ ಉತ್ತರವನ್ನು ಸಲ್ಲಿಸಲು ಕೇತನ್ ಕಕ್ಕಡ್ ಅವರಿಗೆ ಸ್ವಲ್ಪ ಸಮಯ ನೀಡಬೇಕು ಎಂದು ವಕೀಲರಾದ ಅಭಾ ಸಿಂಗ್ ಮನವಿ ಮಾಡಿದರು. ಹೀಗಾಗಿ, ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.

Salman Khan: ಸಲ್ಮಾನ್ ಖಾನ್ ಮದುವೆಯಾಗದಿರಲು ಕಾರಣ ‘ಈ’ ನಟಿ..!
ಏನಿದು ಪ್ರಕರಣ?
ಮುಂಬೈನ ಬಾಂದ್ರಾದಲ್ಲಿ ವಾಸಿಸುತ್ತಿರುವ ಸಲ್ಮಾನ್ ಖಾನ್, ರಾಯಗಡ ಜಿಲ್ಲೆಯ ಪನ್ವೇಲ್‌ನಲ್ಲಿ ಫಾರ್ಮ್‌ಹೌಸ್ ಹೊಂದಿದ್ದಾರೆ. ಇತ್ತ ಮುಂಬೈ ನಿವಾಸಿಯೂ ಆಗಿರುವ ಕೇತನ್ ಕಕ್ಕಡ್ ಅವರು ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್ ಪಕ್ಕ ಜಮೀನು ಹೊಂದಿದ್ದಾರೆ. ಸಲ್ಮಾನ್ ಖಾನ್ ಹೂಡಿರುವ ಮೊಕದ್ದಮೆ ಪ್ರಕಾರ, ಯೂಟ್ಯೂಬರ್‌ನೊಂದಿಗೆ ಮಾತನಾಡುವಾಗ ಕೇತನ್ ಕಕ್ಕಡ್ ಅವರು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದರು. ಅದೇ ಸಂದರ್ಶನದಲ್ಲಿ ಭಾಗವಹಿಸಿದ ಇನ್ನಿಬ್ಬರನ್ನೂ ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.

ಇನ್‌ಸೈಡ್ ವಿಡಿಯೋ: ಸೊಸೆ ಅಯಾತ್ ಜೊತೆ ಕೇಕ್ ಕತ್ತರಿಸಿದ ಸಲ್ಮಾನ್ ಖಾನ್
ತಮ್ಮ ಮೊಕದ್ದಮೆಯಲ್ಲಿ ಯೂಟ್ಯೂಬ್, ಫೇಸ್‌ಬುಕ್, ಟ್ವಿಟ್ಟರ್ ಮತ್ತು ಗೂಗಲ್‌ಅನ್ನೂ ಸಲ್ಮಾನ್ ಖಾನ್ ಸೇರಿಸಿದ್ದಾರೆ. ತಮ್ಮ ವಿರುದ್ಧದ ಮಾನಹಾನಿಕರ ವಿಷಯವನ್ನು ನಿರ್ಬಂಧಿಸಲು ಮತ್ತು ತೆಗೆದುಹಾಕಲು ಸೋಷಿಯಲ್ ಮೀಡಿಯಾ ಸೈಟ್‌ಗಳಿಗೆ ನಿರ್ದೇಶನ ನೀಡಬೇಕು ಎಂದು ಸಲ್ಮಾನ್ ಖಾನ್ ಪರ ವಕೀಲರು ಕೋರ್ಟ್‌ಗೆ ಒತ್ತಾಯಿಸಿದ್ದಾರೆ.

ಮೂರು ಬಾರಿ ಕಚ್ಚಿದ ಹಾವು: ಘಟನೆ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್
ತಮ್ಮ ವಿರುದ್ಧ ಅಥವಾ ತಮ್ಮ ಒಡೆತನದ ಫಾರ್ಮ್‌ಹೌಸ್ ಕುರಿತಾಗಿ ಮಾನಹಾನಿಕರ ವಿಷಯವನ್ನು ಪೋಸ್ಟ್ ಮಾಡದಂತೆ ಅಥವಾ ಪ್ರಕಟಿಸದಂತೆ ಕೇತನ್ ಕಕ್ಕಡ್ ಅವರನ್ನು ನಿರ್ಬಂಧಿಸುವ ಶಾಶ್ವತ ಆದೇಶವನ್ನು ನೀಡುವಂತೆ ಸಲ್ಮಾನ್ ಖಾನ್ ಪರ ವಕೀಲರು ಕೋರ್ಟ್‌ಗೆ ಕೋರಿದ್ದಾರೆ.



Read more

[wpas_products keywords=”deal of the day party wear dress for women stylish indian”]