Karnataka news paper

ಬಿಪಿನ್ ರಾವತ್ ಹೆಲಿಕಾಪ್ಟರ್ ಪತನಕ್ಕೆ ಕಾರಣ ಮೋಡ: ಭಾರತೀಯ ವಾಯುಪಡೆ


The New Indian Express

ನವದೆಹಲಿ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಮಂದಿ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆ(ಐಎಎಫ್)ಯ ಹೆಲಿಕಾಪ್ಟರ್ ದುರಂತ ಪ್ರಕರಣದ ತನಿಖಾ ವರದಿ ಈಗ ಬಹಿರಂಗಗೊಂಡಿದೆ.

ಕಣಿವೆಯಲ್ಲಿನ ಹವಾಮಾನ ಪರಿಸ್ಥಿತಿಗಳಲ್ಲಿನ ಅನಿರೀಕ್ಷಿತ ಬದಲಾವಣೆಯಿಂದಾಗಿ ಹೆಲಿಕಾಪ್ಟರ್ ಮೋಡಗಳಿಗೆ ಪ್ರವೇಶಿಸಿದ ಕಾರಣ ಪತನಗೊಂಡಿದೆ ಭಾರತೀಯ ವಾಯುಪಡೆ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನು ಓದಿ: ಬಿಪಿನ್ ರಾವತ್ ಹೆಲಿಕಾಪ್ಟರ್ ಪತನ: ಯಾವುದೇ ತಾಂತ್ರಿಕ ದೋಷ ಅಥವಾ ವಿಧ್ವಂಸಕತೆ ಇಲ್ಲ, ಹವಾಮಾನ ವೈಪರಿತ್ಯ ಪ್ರಮುಖ ಕಾರಣ!

“ಕಣಿವೆಯಲ್ಲಿ ಹವಾಮಾನ ಪರಿಸ್ಥಿತಿಗಳಲ್ಲಿ ಅನಿರೀಕ್ಷಿತ ಬದಲಾವಣೆಯಿಂದಾಗಿ ಹೆಲಿಕಾಪ್ಟರ್ ಮೋಡಗಳಿಗೆ ಪ್ರವೇಶಿಸಿದ ಪರಿಣಾಮವಾಗಿ ಅಪಘಾತ ಸಂಭವಿಸಿದೆ. ಇದು ಪೈಲಟ್‌ನ ಪ್ರಾದೇಶಿಕ ದಿಗ್ಭ್ರಮೆಗೆ ಕಾರಣವಾಯಿತು. 

ಈ ಹಿಂದೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದಂತೆ, ಈಗ ಪ್ರಕರಣ ತನಿಖಾ ವರದಿಯೂ ಅಧಿಕೃತವಾಗಿ ಹೆಲಿಕಾಪ್ಟರ್ ದುರಂತಕ್ಕೆ “ಯಾಂತ್ರಿಕ ವೈಫಲ್ಯ, ವಿಧ್ವಂಸಕ ಅಥವಾ ನಿರ್ಲಕ್ಷ್ಯ ಕಾರಣವಲ್ಲ ಎಂದು ಹೇಳಿದೆ.

ಕಳೆದ ವರ್ಷ ಡಿಸೆಂಬರ್ ರಂದು Mi-17 V5 ಹೆಲಿಕಾಪ್ಟರ್ ದುರಂತದ ಬಗ್ಗೆ ತನಿಖೆ ನಡೆಸಿದ ಮೂರು ಪಡೆಗಳನ್ನು ಒಳಗೊಂಡ ತನಿಖಾ ತಂಡ ತನ್ನ ಪ್ರಾಥಮಿಕ ತನಿಖಾ ವರದಿ ಸಲ್ಲಿಸಿದೆ ಎಂದು ಭಾರತೀಯ ವಾಯುಪಡೆ ಹೇಳಿದೆ. ವಿಚಾರಣೆಯ ನೇತೃತ್ವವನ್ನು ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ವಹಿಸಿದ್ದರು. ಈ ತಂಡವು ಹೆಲಿಕಾಪ್ಟರ್​​ನಲ್ಲಿ ಸಂಭವಿಸಿರಬಹುದಾದ ಮಾನವ ದೋಷ ಅಥವಾ ಹೆಲಿಕಾಪ್ಟರ್ ಲ್ಯಾಂಡಿಂಗ್‌ ತಯಾರಿಯಲ್ಲಿ ನಡೆದಿರಬಹುದಾದ ಸಮಸ್ಯೆಯ ಸಂಭವನೀಯ ಸನ್ನಿವೇಶಗಳನ್ನು ಪರಿಶೀಲನೆ ನಡೆಸಿದೆ.

ತಮಿಳುನಾಡಿವ ಕೂನೂರ್​ ಬಳಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮತ್ತು ಇತರ 12 ಸೇನಾ ಅಧಿಕಾರಿಗಳು ಮೃತಪಟ್ಟ ಪ್ರಕರಣದ ತನಿಖಾ ವರದಿಯನ್ನು ಮೂರೂ ಪಡೆಗಳ(ಭೂಸೇನೆ, ವಾಯುಸೇನೆ, ನೌಕಾಪಡೆ) ತನಿಖಾ ತಂಡ, ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವ​​ರಿಗೆ ಸಲ್ಲಿಸಲಿದೆ ಎಂದು ಹೇಳಲಾಗಿದೆ.



Read more

[wpas_products keywords=”deal of the day”]