Karnataka news paper

ಸೋಂಕು ಹೆಚ್ಚುತ್ತಿದ್ದರೂ ನಗರದ ಜನರಲ್ಲಿ ನಿರ್ಲಕ್ಷ್ಯದ ನಡವಳಿಕೆ ಆತಂಕಕಾರಿ!


The New Indian Express

ಬೆಂಗಳೂರು: ನಗರದಲ್ಲಿ ಕೊರೋನಾ ಮೂರನೇ ಅಲೆ ಆರ್ಭಟ ಆರಂಭವಾಗಿದ್ದರೂ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಬೇಜವಾಬ್ದಾರಿಯುತ ನಡವಳಿಕೆಯನ್ನು ಪ್ರದರ್ಶಿಸುತ್ತಿದ್ದಾರೆ. ಈ ಬೆಳವಣಿಗೆಯು ಇದೀಗ ನಗರದಲ್ಲಿ ಸೋಂಕು ಹರಡುವ ಕುರಿತು ಆತಂಕ ಹೆಚ್ಚಾಗುವಂತೆ ಮಾಡಿದೆ. 

ಜನರು ಕೋವಿಡ್ ಮುಂಜಾಗ್ರತಾ ಕ್ರಮ ಅನುಸರಿಸುತ್ತಿರುವುದನ್ನು ಪರಿಶೀಲಿಸಲು ಈಗಾಗಲೇ ನಗರದ ಹಲವೆಡೆ ಮಾರ್ಷಲ್ ಗಳು, ಪೊಲೀಸರನ್ನು ನಿಯೋಜಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೂ, ಕೆಲವರು ನಿಯಮ ಪಾಲಿಸದೆ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿರುವುದು ಕಂಡು ಬರುತ್ತಿದೆ. 

ಇದನ್ನೂ ಓದಿ: ಕೊರೋನಾ ಆತಂಕ: ಅಪಾರ್ಟ್‌ಮೆಂಟ್‌ಗಳಲ್ಲಿ ಜಿಮ್‌ಗಳು, ಈಜುಕೊಳ ಬಂದ್, ಬಿಬಿಎಂಪಿಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

ನಗರದ ರಸ್ತೆಗಳಲ್ಲಿ ಓಡಾಡುವ ಜನರು, ನಾನು ಮಾಸ್ಕ್ ಮರೆತು ಬಂದು ಬಿಟ್ಟೆ… ನಾನಿರುವ ಸ್ಥಳದಲ್ಲಿ ಮಾಸ್ಕ್ ಕಡ್ಡಾಯವಿಲ್ಲ, ಈಗಷ್ಟೇ ಮಾಸ್ಕ್ ತೆಗೆದಿದ್ದೆ, ಉಗುಳು ಉಗಿಯುವ ಸಲುವಾಗಿ ಮಾಸ್ಕ್ ತೆಗೆದಿದ್ದೆ, ಸಿಗರೇಟ್ ಸೇದುವ ಸಲುವಾಗಿ ಮಾಸ್ಕ್ ತೆಗೆದಿದ್ದೆ, ನಾನು ಧರಿಸಿರುವ ಬಟ್ಟೆಗೆ ಮಾಸ್ಕ್ ಸೂಟ್ ಆಗುವುದಿಲ್ಲ, ಚೆನ್ನಾಗಿ ಕಾಣುವುದಿಲ್ಲ ಎಂದು ತೆಗೆದಿದ್ದೆ ಎಂದು ಹೇಳುತ್ತಿರುವುದು ಕಂಡು ಬಂದಿದೆ. 

ನಗರದಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಮಾಸ್ಕ್ ಪ್ರಾಮುಖ್ಯತೆ ಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಕೋವಿಡ್ ವಿರುದ್ಧ ದಿಟ್ಟ ಹೋರಾಟ ಮಾಡಲು ಪ್ರತೀಯೊಬ್ಬರೂ ಮಾಸ್ಕ್ ಧರಿಸುವುದು ಅತ್ಯಗತ್ಯವಾಗಿದೆ ಎಂದು ಬಿಬಿಎಂಪು ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ. 

ದಾಖಲೆಗಳ ಪ್ರಕಾರ, ಮಾರ್ಷಲ್‌ಗಳು ಕೋವಿಡ್ ನಡವಳಿಕೆಯನ್ನೂ ಪಾಲನೆ ಮಾಡದ ನಾಗರಿಕರಿಂದ ಈವರೆಗೂ ರೂ 2,41,250 ದಂಡವನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಮಾಸ್ಕ್ ಧರಿಸದಿದ್ದಕ್ಕಾಗಿ ರೂ 2,34,000 ಸಂಗ್ರಹಿಸಿದ್ದಾರೆ. 

ಇದನ್ನೂ ಓದಿ: ಕೋವಿಡ್ ನಿರ್ವಹಣೆಗೆ 5 ಟಿ ಸೂತ್ರ, ರಾಜ್ಯ ಸರ್ಕಾರದ ತಂತ್ರಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ: ಸಿಎಂ ಬೊಮ್ಮಾಯಿ

ಈ ಪೈಕಿ ಗರಿಷ್ಠ ಪ್ರಕರಣಗಳು ಪಶ್ಚಿಮ ವಲಯ(383)ದಲ್ಲಿ ಕಂಡು ಬಂದಿದೆ. ನಂತರದ ಸ್ಥಾನ ದಕ್ಷಿಣ ವಲಯ (188) ಮತ್ತು ಪೂರ್ವ ವಲಯ (147) ಪಡೆದುಕೊಂಡಿದೆ. ಯಲಹಂಕದಲ್ಲಿ (25) ಅತಿ ಕಡಿಮೆ ಪ್ರಕರಣಗಳು ದಾಖಲಾಗಿವೆ.

2020 ರ ಡಿಸೆಂಬರ್‌ನಲ್ಲಿ ಮಾರ್ಷಲ್‌ಗಳು ಮತ್ತು ಪೊಲೀಸರು ಗರಿಷ್ಠ 1,78,03,125 ರೂ. ದಂಡವನ್ನು ಸಂಗ್ರಹಿಸಿದ್ದರೆ, ಡಿಸೆಂಬರ್ 2021 ರಲ್ಲಿ 59,39,768 ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ನಗರದ ವಿವಿಧ ಪ್ರದೇಶಗಳಿಂದ ದಂಡವನ್ನು ಸಂಗ್ರಹಿಸಲಾಗುತ್ತಿದೆ ಎಂದು ಚೀಫ್ ಮಾರ್ಷಲ್ ಕರ್ನಲ್ ರಾಜ್‌ಬೀರ್ ಸಿಂಗ್ ಅವರು ಹೇಳಿದ್ದಾರೆ.

ಹೆಚ್ಚು ಜನನಿಬಿಡ ಪ್ರದೇಶಗಳಾದ  ಚಿಕ್ಕಪೇಟೆ, ಕೆಆರ್ ಮಾರುಕಟ್ಟೆ, ಶಾಪಿಂಗ್ ಸ್ಥಳಗಳು, ಮಾಲ್‌ಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.



Read more

[wpas_products keywords=”deal of the day”]