PTI
ಬೀಜಿಂಗ್: ಭಾರತ ಮತ್ತು ಚೀನಾ ನಡುವೆ ಲಡಾಖ್ ಗಡಿ ಸಂಘರ್ಷದ ಹೊರತಾಗಿಯೂ 2021ರಲ್ಲಿ ಚೀನಾ ಪ್ರಮುಖ ವ್ಯಾಪಾರ ಪಾಲುದಾರಿಕೆ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಉಭಯ ದೇಶಗಳ ನಡುವೆ ದಾಖಲೆಯ 125 ಶತಕೋಟಿ ಡಾಲರ್ ಗಿಂತ ಹೆಚ್ಚು ದ್ವಿಪಕ್ಷೀಯ ವ್ಯವಹಾರ ನಡೆದಿದೆ.
ಶುಕ್ರವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ, ಭಾರತದ ವ್ಯಾಪಾರ ಕೊರತೆಯು 69 ಶತಕೋಟಿ ಡಾಲರ್ ಗೆ ಏರಿದೆ.
2021 ರಲ್ಲಿ ಚೀನಾ ಮತ್ತು ಭಾರತದ ನಡುವಿನ ಒಟ್ಟು ವ್ಯಾಪಾರ 125.66 ಶತಕೋಟಿ ಡಾಲರ್ ಗೆ ಹೆಚ್ಚಾಗಿದೆ. ಇದು 2020ಕ್ಕಿಂತ 43.3 ರಷ್ಟು ಹೆಚ್ಚಾಗಿದೆ ಎಂದು ಕಸ್ಟಮ್ಸ್ ಜನರಲ್ ಅಡ್ಮಿನಿಸ್ಟ್ರೇಷನ್‌ನ ಡೇಟಾವನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಇದನ್ನು ಓದಿ: ಚೀನಾದ ನಡೆಯಿಂದ ಪ್ರಾದೇಶಿಕವಾಗಿ ಅಸ್ಥಿರತೆ: ಡ್ರ್ಯಾಗನ್ ವಿರುದ್ಧ ಗುಡುಗಿದ ಅಮೆರಿಕ
ಜನವರಿಯಿಂದ ಡಿಸೆಂಬರ್‌ವರೆಗೆ ಭಾರತಕ್ಕೆ ಚೀನಾದ ರಫ್ತು ಶೇ. 46.2 ರಷ್ಟು ಏರಿಕೆಯಾಗಿ 97.52 ಶತಕೋಟಿ ಡಾಲರ್ ಗೆ ತಲುಪಿದೆ. ಆದರೆ ಚೀನಾಗೆ ಭಾರತದ ರಫ್ತು ಶೇ. 34.2 ರಷ್ಟು ಏರಿಕೆಯಾಗಿ 28.14 ಶತಕೋಟಿ ಡಾಲರ್‌ಗೆ ತಲುಪಿದೆ. ಇದರೊಂದಿಗೆ
ಭಾರತದ ವ್ಯಾಪಾರ ಕೊರತೆಯು 2021 ರಲ್ಲಿ 69.38 ಶತಕೋಟಿ ಡಾಲರ್ ಗೆ ಏರಿದೆ. ಅಂದರೆ ಚೀನಾವು ಭಾರತಕ್ಕೆ ರಫ್ತು ಮಾಡುವುದೇ ಹೆಚ್ಚು, ವಿನಾ ಭಾರತದಿಂದ ಚೀನಾಕ್ಕೆ ರಫ್ತು ಮಾಡುವುದು ಕಡಿಮೆ.
ಕಳೆದ ಒಂದು ದಶಕದಿಂದ ಚೀನಾದೊಂದಿಗೆ ಹೆಚ್ಚುತ್ತಿರುವ ವ್ಯಾಪಾರ ಕೊರತೆಯ ಬಗ್ಗೆ ಭಾರತದ ಕಳವಳವನ್ನು ಎತ್ತಿ ತೋರಿಸುತ್ತಿದೆ. ಭಾರತದ ಐಟಿ ಮತ್ತು ಔಷಧಿ ಉತ್ಪನ್ನಗಳಿಗೆ ತನ್ನ ಮಾರುಕಟ್ಟೆಗಳನ್ನು ಮುಕ್ತಗೊಳಿಸುವಂತೆ ಭಾರತ ಬೀಜಿಂಗ್‌ಗೆ ಕರೆ ನೀಡುತ್ತಿದೆ.
ಕೋವಿಡ್-19 ಎರಡನೇ ಅಲೆ ಮತ್ತು ದೇಶದಲ್ಲಿ ಮರುಕಳಿಸಿರುವ ವೈರಸ್‌ನಿಂದಾಗಿ ಭಾರತದ ವೈದ್ಯಕೀಯ ಉತ್ಪನ್ನಗಳು ಮತ್ತು ಕಚ್ಚಾ ಸಾಮಗ್ರಿಗಳ ಆಮದು ಈ ವರ್ಷ ಭಾರತಕ್ಕೆ ಚೀನಾದ ರಫ್ತು ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.
Read more
[wpas_products keywords=”deal of the day”]