The New Indian Express
ಶಿವಮೊಗ್ಗ: ಮೇಕೆದಾಟು ಪಾದಯಾತ್ರೆ ಮೂಲಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ಮುಂದಿನ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದರು, ಆದರೆ, ಪಾದಯಾತ್ರೆ ಮೊಟಕುಗೊಳ್ಳುವ ಮೂಲಕ ಆ ಕನಸು ಭಗ್ನಗೊಳ್ಳವಂತಾಯಿತು ಎಂದು ಆರ್‌ಡಿಪಿಆರ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಹಾರ್ ಜೈಲಿನಲ್ಲಿದ್ದು ಬಂದದ್ದ ಶಿವಕುಮಾರ್ ಅವರಿಗೆ ನ್ಯಾಯಾಂಗದ ಶಕ್ತಿ ಏನೆಂದು ಗೊತ್ತಿದೆ. ಹೀಗಾಗಿ ಪಾದಯಾತ್ರೆ ರದ್ದುಗೊಳಿಸದ್ದಾರೆಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಿಂದ ರಾಜ್ಯದಲ್ಲಿ ಕೊರೋನಾ ಹೆಚ್ಚಳ: ಆರೋಗ್ಯ ಸಚಿವ ಸುಧಾಕರ್
ಪಾದಯಾತ್ರೆ ಮೂಲಕ ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದರು. ಆದರೆ, ಕರ್ನಾಟಕ ಹೈಕೋರ್ಟ್‌ನ ನಿರ್ದೇಶನಗಳ ಬಳಿಕ ಅಂತಿಮವಾಗಿ ರ್ಯಾಲಿಯನ್ನು ರದ್ದುಗೊಳಿಸಿದ್ದಾರೆ. ಇದರಿಂದ ಇಬ್ಬ ಕನಸುಗಳು ಭಗ್ನಗೊಂಡಿವೆ. ಜನರ ಮೇಲಿನ ಕಾಳಜಿಯಿಂದಲ್ಲ, ನ್ಯಾಯಾಲಯ ಕ್ರಮ ಕೈಗೊಳ್ಳುವ ಭೀತಿಯಿಂದ ಕಾಂಗ್ರೆಸ್ ನಾಯಕರು ಪಾದಯಾತ್ರೆ ರದ್ದುಗೊಳಿಸಿದ್ದಾರೆಂದು ತಿಳಿಸಿದ್ದಾರೆ.
Read more
[wpas_products keywords=”deal of the day”]