ಹೈಲೈಟ್ಸ್:
- ಬೆಂಗಳೂರಿನಲ್ಲಿ ನಡೆಯುತ್ತಿರುವ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ.
- ಗುಜರಾತ್ ಜಯಂಟ್ಸ್ ಎದುರು ಭರ್ಜರಿ ಜಯ ದಾಖಲಿಸಿದ ಬೆಂಗಳೂರು ಬುಲ್ಸ್.
- ಮತ್ತೆ ಮಿಂಚಿನ ದಾಳಿಯೊಂದಿಗೆ 19 ಅಂಕಗಳನ್ನು ಕಲೆಹಾಕಿದ ಪವನ್ ಕುಮಾರ್.
ಇವರಿಬ್ಬರ ಭರ್ಜರಿ ದಾಳಿಗಳಿಂದ ಮಿಂಚಿದ ಮಾಜಿ ಚಾಂಪಿಯನ್ಸ್ ಬುಲ್ಸ್ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ 54ನೇ ಹಣಾಹಣಿಯಲ್ಲಿ ಗುಜರಾತ್ ಜಯಂಟ್ಸ್ ತಂಡವನ್ನು ಸೋಲಿಸಿ ಸತತ ಎರಡನೇ ಗೆಲುವು ದಾಖಲಿಸಿತು. ಇದರೊಂದಿಗೆ ಒಟ್ಟಾರೆ ಆಡಿದ 10 ಪಂದ್ಯಗಳಿಂದ 38 ಅಂಕ ಸಂಪಾದಿಸಿದ ಪವನ್ ಕುಮಾರ್ ಸೆಹ್ರಾವತ್ ಬಳಗ, 12 ತಂಡಗಳಿರುವ ಅಂಕಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನ ಅಲಂಕರಿಸಿತು.
ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಜಿದ್ದಾಜಿದ್ದಿನಿಂದ ಕೂಡಿದ ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ತಂಡ 46-37 ಅಂಕಗಳಿಂದ ಗುಜರಾತ್ ತಂಡಕ್ಕೆ ಸೋಲುಣಿಸಿತು. ಪ್ರಥಮಾರ್ಧಕ್ಕೆ 22-17ರ ಅಲ್ಪ ಮುನ್ನಡೆ ಪಡೆದ ಬುಲ್ಸ್ ಆಟಗಾರರು, ದ್ವಿತೀಯಾರ್ಧದ ಆರಂಭದಲ್ಲಿ ಪ್ರಬಲ ಪ್ರತಿರೋಧ ಎದುರಿಸಿದರಾದರೂ ಅಂತಿಮ ಹಂತದಲ್ಲಿ ಟ್ಯಾಕಲ್ ಮತ್ತು ರೇಡಿಂಗ್ ಎರಡು ವಿಭಾಗಗಳಲ್ಲಿ ಮೇಲುಗೈ ಸಾಧಿಸಿದರು.
‘ಪವನ’ ಶಕ್ತಿಯಿಂದ ಡೆಲ್ಲಿ ಸದ್ದಡಗಿಸಿದ ಬೆಂಗಳೂರು ಬುಲ್ಸ್!
ಗುಜರಾತ್ ಜಯಂಟ್ಸ್ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ರಾಕೇಶ್, 14 ಅಂಕ ಗಳಿಸಿದರೂ ತಂಡವನ್ನು 5ನೇ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಪ್ಯಾಂಥರ್ಸ್‌ಗೆ ಹ್ಯಾಟ್ರಿಕ್ ಜಯ
ಸ್ಥಿರ ಪ್ರದರ್ಶನ ಮುಂದುವರಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ 38-28 ಅಂಕಗಳ ಅಂತರದಿಂದ ಪಟನಾ ಪೈರೇಟ್ಸ್ ತಂಡಕ್ಕೆ ಸೋಲುಣಿಸಿ ಟೂರ್ನಿಯಲ್ಲಿಹ್ಯಾಟ್ರಿಕ್ ಗೆಲುವು ದಾಖಲಿಸಿತು. ಜೈಪುರ ಪರ ಆಲ್‌ರೌಂಡರ್ ದೀಪಕ್ ಹೂಡ ಸೂಪರ್ 10 ಸಾಧನೆ ಮಾಡಿದರೆ, ಸ್ಟಾರ್ ರೇಡರ್ ಅರ್ಜುನ್ ದೇಶ್ವಾಲ್ 9 ಅಂಕಗಳ ಕೊಡುಗೆ ನೀಡಿದರು.
ಪಟನಾ ಪರ ಮೋನು ಗೋಯೆಟ್ ಮತ್ತು ಪ್ರಶಾಂತ್ ಕುಮಾರ್ ರೈ ಕ್ರಮವಾಗಿ 7 ಮತ್ತು 6 ಅಂಕ ಗಳಿಸಲಷ್ಟೇ ಶಕ್ತರಾದರು. ವಿರಾಮಕ್ಕೆ 18-12ರಲ್ಲಿಅಂತರ ಕಾಯ್ದುಕೊಂಡ ಪ್ಯಾಂಥರ್ಸ್, ದ್ವಿತೀಯಾರ್ಧದಲ್ಲೂ ಅದೇ ಲಯ ಮುಂದುವರಿಸಿ ಗೆಲುವಿನ ಅಂತರವನ್ನು 10 ಅಂಕಗಳಿಗೆ ಹೆಚ್ಚಿಸಿಕೊಂಡಿತು.
ತಮಿಳ್ ತಲೈವಾಸ್‌ಗೆ ತಲೆ ಬಾಗಿದ ಹರಿಯಾಣ ಸ್ಟೀಲರ್ಸ್!
ಶನಿವಾರದ ಪಂದ್ಯಗಳು
- ಹರಿಯಾಣ ಸ್ಟೀಲರ್ಸ್ – ದಬಾಂಗ್ ದಿಲ್ಲಿ
- ಪಂದ್ಯ ಆರಂಭ: ರಾತ್ರಿ 7.30
- ಯು.ಪಿ.ಯೋಧಾ – ತೆಲುಗು ಟೈಟನ್ಸ್
- ಪಂದ್ಯ ಆರಂಭ: ರಾತ್ರಿ 8.30
- ಯು ಮುಂಬಾ – ಬೆಂಗಾಲ್ ವಾರಿಯರ್ಸ್
- ಪಂದ್ಯ ಆರಂಭ: ರಾತ್ರಿ 9.30
ಬೆಂಗಳೂರು ಬುಲ್ಸ್ ಪಂದ್ಯಗಳ ಫಲಿತಾಂಶ/ ವೇಳಾಪಟ್ಟಿ
ಮೊದಲ ಚರಣದ ಹನ್ನೊಂದು ಪಂದ್ಯಗಳ ವಿವರ
- ಬೆಂಗಳೂರು ಬುಲ್ಸ್ vs ಯು ಮುಂಬಾ (ಡಿ.22): ಸೋಲು
- ಬೆಂಗಳೂರು ಬುಲ್ಸ್ vs ತಮಿಳ್ ತಲೈವಾಸ್ (ಡಿ.24): ಗೆಲುವು
- ಬೆಂಗಳೂರು ಬುಲ್ಸ್ vs ಬೆಂಗಾಲ್ ವಾರಿಯರ್ಸ್ (ಡಿ.26): ಗೆಲುವು
- ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್ (ಡಿ.30): ಗೆಲುವು
- ಬೆಂಗಳೂರು ಬುಲ್ಸ್ vs ತೆಲುಗು ಟೈಟನ್ಸ್ (ಜ.01): ಸಮಬಲ
- ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್ (ಜ.02): ಗೆಲುವು
- ಬೆಂಗಳೂರು ಬುಲ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ (ಜ.06): ಗೆಲುವು
- ಬೆಂಗಳೂರು ಬುಲ್ಸ್ vs ಯುಪಿ ಯೋಧಾ (ಜ.09): ಸೋಲು
- ಬೆಂಗಳೂರು ಬುಲ್ಸ್ vs ದಬಾಂಗ್ ಡೆಲ್ಲಿ (ಜ.12): ಗೆಲುವು
- ಬೆಂಗಳೂರು ಬುಲ್ಸ್ vs ಗುಜರಾತ್ ಜಯಂಟ್ಸ್ (ಜ.14): ಗೆಲುವು
- ಬೆಂಗಳೂರು ಬುಲ್ಸ್ vs ಪಟನಾ ಪೈರೇಟ್ಸ್ (ಜ.16)
ಟೂರ್ನಿಯ ಎರಡನೇ ಚರಣದಲ್ಲಿಯೂ ಬೆಂಗಳೂರು ತಂಡ 11 ಲೀಗ್ ಪಂದ್ಯಗಳನ್ನು ಆಡಲಿದ್ದು, ನಂತರ ನಾಕ್‌ಔಟ್ ಹಂತದ ಪಂದ್ಯಗಳು ಜರುಗಲಿವೆ.
Read more
[wpas_products keywords=”deal of the day gym”]