ಹೈಲೈಟ್ಸ್:
- ನಟ ಧರ್ಮ ಕೀರ್ತಿರಾಜ್, ನಿಮಿಕಾ ರತ್ನಾಕರ್ ನಟನೆಯ ‘ಸುಮನ್’ ಸಿನಿಮಾ
- ‘ಸುಮನ್’ ಸಿನಿಮಾ ಹಾಡುಗಳು ರಿಲೀಸ್ ಆಗಿವೆ
- ಫೆಬ್ರವರಿಯಲ್ಲಿ ರಿಲೀಸ್ ಆಗಲಿರುವ ‘ಸುಮನ್’ ಸಿನಿಮಾದ ವಿಶೇಷ ಏನು?
“ಧರ್ಮ ತಂದೆ ಕೀರ್ತಿರಾಜ್ ಹಾಗೂ ನನ್ನ ತಂದೆ ಸುಧೀರ್ ಆತ್ಮೀಯ ಸ್ನೇಹಿತರು. ನಾನು ಮತ್ತು ಧರ್ಮ ಕೀರ್ತಿ ಕೂಡ ಹಾಗೆ. ನಾನು, ಧರ್ಮ, ತರುಣ್ ಸುಧೀರ್ ಬಾಲ್ಯದಿಂದಲೂ ಆತ್ಮೀಯರು. ಧರ್ಮ ತುಂಬಾ ಕಷ್ಟ ಪಟ್ಟು ಮೇಲೆ ಬಂದಿದ್ದಾನೆ. ಅವನಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ. ಎಲ್ಲರೂ ಮನೆಯಲ್ಲಿ ದುಡ್ಡು ಇಟ್ಟುಕೊಳ್ಳೋಣ ಎನ್ನುವ ಸಂದರ್ಭದಲ್ಲಿ ಸಿನಿಮಾ ಮಾಡೋಣ ಎಂದು ಮುಂದೆ ಬರುವ ನಿರ್ಮಾಪಕರಿಗೆ ಧನ್ಯವಾದಗಳು. ಇದರಿಂದ ಸಾಕಷ್ಟು ಜನರಿಗೆ ಕೆಲಸ ಸಿಗುತ್ತದೆ” ಎಂದರು ನಂದಕಿಶೋರ್.
“ಇದೊಂದು ತ್ರಿಕೋನ ಪ್ರೇಮಕಥೆ. ಹೀಗಿದ್ದರೂ ಕೂಡ ಒಂದು ಟ್ವಿಸ್ಟ್ ಇದೆ. ಎಲ್ಲ ಪ್ರೇಮಕಥೆಯಂತೆ ಈ ಚಿತ್ರವಿಲ್ಲ. ಈ ಸಿನಿಮಾದಲ್ಲಿ ಐದು ಹಾಡುಗಳು ಹಾಗೂ ಐದು ಸಾಹಸ ಸನ್ನಿವೇಶಗಳಿದೆ. ಸುಮಾರು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ನಾನು, “ಮುತ್ತುಕುಮಾರ” ಎಂಬ ಚಿತ್ರ ನಿರ್ದೇಶಿಸಿದ್ದೇನೆ. ಇದು ಎರಡನೇಯ ಚಿತ್ರ. ಕೊರೊನಾ ವೈರಸ್ ಸಮಸ್ಯೆಗಳಿಂದ ಸಿನಿಮಾ ರಿಲೀಸ್ ಆಗುತ್ತಿರುವುದು ತಡವಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ” ಎಂದರು ನಿರ್ದೇಶಕ ರವಿ ಸಾಗರ್.
ವಿ ರವಿಚಂದ್ರನ್, ಉಪೇಂದ್ರ, ಡಾರ್ಲಿಂಗ್ ಕೃಷ್ಣ ಸಿನಿಮಾಗಳಲ್ಲಿ ನಿಮಿಕಾ ರತ್ನಾಕರ್
“ಕೊರೊನಾ ವೈರಸ್ ಆರಂಭವಾಗುವುದಕ್ಕೆ ಮುಂಚೆ ನಮ್ಮ ಚಿತ್ರ ಆರಂಭವಾಗಿತ್ತು. ಕೊರೊನಾ ಮೊದಲ ಹಾಗೂ ಎರಡನೇ ಅಲೆ ಮುಗಿದ ಮೇಲೆ ಚಿತ್ರೀಕರಣ ಮುಗಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಚಿತ್ರ ಪೂರ್ಣ ಮಾಡಿರುವ ನಮ್ಮ ನಿರ್ಮಾಪಕರಿಗೆ ವಿಶೇಷ ಧನ್ಯವಾದ. ನನ್ನೊಂದಿಗೆ ಮೂವರು ನಾಯಕಿಯರು ನಟಿಸಿದ್ದಾರೆ. ಅವರೆಲ್ಲರ ಸಹಕಾರದಿಂದ ಸಿನಿಮಾದಲ್ಲಿ ನಟಿಸೋದು ಕಷ್ಟ ಆಗಲಿಲ್ಲ. ಎಲ್ಲರ ಅಭಿನಯ ಚೆನ್ನಾಗಿದೆ. ಜುಬಿನ್ ಪಾಲ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಇಂಪಾಗಿದೆ. ಮೂರನೆ ಅಲೆಯ ಆರ್ಭಟ ಕಡಿಮೆಯಿದ್ದರೆ ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ” ಎಂದು ಧರ್ಮ ಕೀರ್ತಿರಾಜ್ ತಿಳಿಸಿದರು.
“ಎರಡು ವರ್ಷಗಳ ನಂತರ ನನ್ನ ಚಿತ್ರವೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ. ಚಿತ್ರದ ಕಥೆ ಚೆನ್ನಾಗಿದೆ. ಸಿನಿಮಾ ಮಾಡುವಾಗ ಯಾವಾಗ ರಿಲೀಸ್ ಆಗತ್ತೆ ಎನ್ನುವ ಕುತೂಹಲ ಇರತ್ತೆ, ರಿಲೀಸ್ ಆಗುತ್ತಿದ್ದಂತೆ ಇನ್ನೊಂದು ಚಿಂತೆ ಶುರುವಾಗತ್ತೆ. ಕೊರೊನಾ ನೀತಿ ನಿಯಮದ ಭಯ ಇದೆ” ಎಂದು ನಟಿ ನಿಮಿಕಾ ರತ್ನಾಕರ್ ಅವರು ಕೊರೆವ ಚಳಿಯಲ್ಲಿ ಚಿತ್ರೀಕರಣದಲ್ಲಿ ಅಭಿನಯಿಸಿದ ಅನುಭವ ಹಂಚಿಕೊಂಡರು.
‘ಸುಮನ್’ ಸಿನಿಮಾ ರಿಲೀಸ್ ಮಾಡಲು ರೆಡಿಯಿದೆ: ನಟ ಧರ್ಮ ಕೀತಿ೯ರಾಜ್
“ನಾನು ನಿಜಜೀವನದಲ್ಲೂ ಸ್ವಲ್ಪ ಸ್ಟ್ರಾಂಗ್. ಯಾವುದಕ್ಕೂ ಅಷ್ಟು ಬೇಗ ಹೆದರಲ್ಲ. ಈ ಚಿತ್ರದಲ್ಲಿ ಅಂತಹದೇ ಪಾತ್ರ. ನನ್ನೂರು ಮೈಸೂರು. ಹೆಚ್ಚಾಗಿ ಮೈಸೂರಿನಲ್ಲೇ ಚಿತ್ರೀಕರಣವಾಗಿದ್ದು ಸಂತೋಷ ಎನ್ನುತ್ತಾರೆ” ಇನ್ನೋರ್ವ ನಟಿ ರಜನಿ ಭಾರದ್ವಾಜ್.
“ನನ್ನದು ಇದು ಮೊದಲ ಚಿತ್ರ. ಸ್ವಲ್ಪ ನೆಗಟಿವ್ ಪಾತ್ರ ಇದಾಗಿದೆ. ಧರ್ಮ ಅವರ ಜೊತೆ ನಟಿಸಿದ್ದು ಸಂತಸ ತಂದಿದೆ. ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ” ಎಂದು ತಿಳಿಸಿದರು ಮತ್ತೊಬ್ಬ ನಾಯಕಿ ಜೈಲಿನ್ ಗಣಪತಿ.
ಹಾಡುಗಳ ಹಾಗೂ ಹಾಡಿದವರ ಬಗ್ಗೆ ಸಂಗೀತ ನಿರ್ದೇಶಕ ಜುಬಿನ್ ಪಾಲ್ ಮಾಹಿತಿ ನೀಡಿದರು. ಎಂ.ಪಿ.ಶಿವಕುಮಾರ್, ರಾಘವೇಂದ್ರ ಸಿಂಗ್ , ಮೋಹನ್ ಕುಮಾರ್ ಎಸ್ ಹಾಗೂ ನೃತ್ಯ ನಿರ್ದೇಶಕನಾಗಿ ಚಿತ್ರದ ಕುರಿತು ಮಾತನಾಡಿದರು. ವಿನೋದ್ ಅವರು ಈ ಸಿನಿಮಾಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ, ನಾಗರಾಜ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ವಿ ರವಿಚಂದ್ರನ್, ಉಪೇಂದ್ರ, ಡಾರ್ಲಿಂಗ್ ಕೃಷ್ಣ ಸಿನಿಮಾಗಳಲ್ಲಿ ನಿಮಿಕಾ ರತ್ನಾಕರ್
Read more
[wpas_products keywords=”deal of the day party wear dress for women stylish indian”]