ಹೈಲೈಟ್ಸ್:
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ.
- ಡಿಆರ್‌ಎಸ್ ಸಂಬಂಧ ವಿರಾಟ್ ಕೊಹ್ಲಿ ವರ್ತನೆ ಬಗ್ಗೆ ಗೌತಮ್ ಗಂಭೀರ್ ಆಕ್ರೋಶ.
- ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಆಫ್ರಿಕಾ.
ಗುರುವಾರ ಇಲ್ಲಿನ ನ್ಯೂಲೆಂಡ್ಸ್ ಸ್ಟೇಡಿಯಂನಲ್ಲಿ ಭಾರತ ನೀಡಿದ್ದ 212 ರನ್ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ದ್ವಿತೀಯ ಇನಿಂಗ್ಸ್‌ನ 27ನೇ ಓವರ್‌ನಲ್ಲಿ ಆರ್ ಅಶ್ವಿನ್ ಎಸೆತದಲ್ಲಿ ಡೀನ್ ಎಲ್ಗರ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಅಂದರಂತೆ ಸ್ಟ್ರೈಕ್ ಅಂಪೈರ್ ಮರಾಯಿಸ್ ಎರಾಸ್ಮಸ್ ಕೂಡ ಔಟ್ ಎಂದು ತೀರ್ಪು ಕೊಟ್ಟಿದ್ದರು.
ಆದರೆ 3ಡಿ ಸ್ಪಿನ್ ವಿಷನ್ ತಂತ್ರಜ್ಞಾನದಲ್ಲಿ ಚೆಂಡು ವಿಕೆಟ್‌ಗೆ ಬಡಿಯದೇ ಮೇಲೆ ಹೋಗುತ್ತಿದೆ ಎಂದು ತೋರಿಸಿತು. ಆದರೆ, ಚೆಂಡು ಎಲ್ಗರ್ ಅವರ ಮಂಡಿಗಿಂತಲೂ ಕೆಳಗೆ ಬಡಿದಿದ್ದ ಕಾರಣ ಅದು ವಿಕೆಟ್‌ಗಿಂತ ಮೇಲೆ ಹೋಗಲು ಖಂಡಿತಾ ಸಾಧ್ಯವಿಲ್ಲ ಎಂಬಂತ್ತಿತ್ತು. ಈ ವೇಳೆ ವಿರಾಟ್ ಕೊಹ್ಲಿ ಸ್ಟಂಪ್ಸ್ ಮೈಕ್ ಬಳಿ ತೆರಳಿ “ಕ್ಯಾಮೆರಾಮನ್‌ಗಳು ಮೊದಲು ನಿಮ್ಮ ತಂಡದ ಕಡೆಗೆ ಫೋಕಸ್ ಮಾಡಿ, ಎದುರಾಳಿ ತಂಡವನ್ನಲ್ಲ,” ಎಂದು ಕಿಡಿಕಾರಿದ್ದರು.
ಭಾರತ Vs ದಕ್ಷಿಣ ಆಫ್ರಿಕಾ 3ನೇ ಟೆಸ್ಟ್ ಸ್ಕೋರ್‌ಕಾರ್ಡ್
ವಿರಾಟ್ ಕೊಹ್ಲಿ ವರ್ತನೆಯ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ಸಾಲಿಗೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಸೇರ್ಪಡೆಯಾಗಿದ್ದಾರೆ. ಟೀಮ್ ಇಂಡಿಯಾ ನಾಯಕನಾಗಿ ನಿಮ್ಮಿಂದ ಇಂಥಾ ಪ್ರತಿಕ್ರಿಯೆಯನ್ನು ಯಾರೂ ನಿರೀಕ್ಷಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಹಾಗೂ ಸೆಂಚೂರಿಯನ್ ಟೆಸ್ಟ್‌ನಲ್ಲಿ ಮಯಾಂಕ್ ಅಗರ್ವಾಲ್ ವಿಕೆಟ್ ಸಂಬಂಧ ನಡೆದಿದ್ದ ಘಟನೆಯನ್ನು ಇಲ್ಲಿ ಉದಾಹರಣೆ ನೀಡಿದರು.
“ಇದು ನಿಜಕ್ಕೂ ಕೆಟ್ಟದು. ಸ್ಟಂಪ್ಸ್ ಮೈಕ್ ಬಳಿ ತೆರಳಿ ವಿರಾಟ್ ಕೊಹ್ಲಿ ಏನು ಮಾಡಿದ್ದಾರೆಂಬುದು ನಿಜಕ್ಕೂ ಅಪಕ್ವವಾಗಿದೆ. ಭಾರತ ತಂಡದ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದನ್ನು ಯಾರೂ ನಿರೀಕ್ಷಿಸುವುದಿಲ್ಲ. ತಂತ್ರಜ್ಞಾನ ನಿಮ್ಮ ಕೈಯಲ್ಲಿ ಇರುವುದಿಲ್ಲ. ಕಾಟ್ ಬಿಹೈಂಡ್ ಇದ್ದಾಗ ನೀವು ಇದೇ ರೀತಿ ಪ್ರತಿಕ್ರಿಯಿಸಿದ್ದೀರಿ. ಆದರೆ ಡೀನ್ ಎಲ್ಗರ್ ಇಂಥಾ ಸನ್ನಿವೇಶದಲ್ಲಿ ನಿಮ್ಮ ರೀತಿ ಎಂದೂ ಕೂಗಾಡಲಿಲ್ಲ,” ಎಂದು ಹೇಳಿದರು.
“ಸೆಂಚೂರಿಯನ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಮಯಾಂಕ್ ಅಗರವಾಲ್ ಅವರ ಪಾಲಿಗೆ ಇದೇ ರೀತಿಯ ಘಟನೆ ನೀಡಿತ್ತು. ನೋಡಲು ಮಯಾಂಕ್ ಅಗರ್ವಾಲ್ ಔಟ್ ಆದಂತೆ ಕಂಡಿತ್ತು. ಆದರೆ ಡಿಆರ್‌ಎಸ್ ಮೂಲಕ ನಾಟ್‌ಔಟ್ ನೀಡಲಾಗಿತ್ತು. ಆದರೆ ಈ ವೇಳೆ ಡೀಮ್ ಎಲ್ಗರ್ ಈ ರೀತಿ ಪ್ರತಿಕ್ರಿಯಿಸಿರಲಿಲ್ಲ,” ಎಂದು ಗಂಭೀರ್ ಮೊದಲನೇ ಟೆಸ್ಟ್ ಪಂದ್ಯದ ಉದಾಹರಣೆಯನ್ನು ನೀಡಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ 2014ರಿಂದ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಬಳಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮಾತನಾಡಬೇಕೆಂದು ಗೌತಮ್ ಗಂಭೀರ್ ನಿರೀಕ್ಷೆ ವ್ಯಕ್ತಪಡಿಸಿದರು.
‘ಕೊಹ್ಲಿಯನ್ನು ಬ್ಯಾನ್ ಮಾಡಿ’ ಭಾರತದ ನಾಯಕನ ವಿರುದ್ಧ ನೆಟ್ಟಿಗರು ಕಿಡಿ!
“ಮೈದಾನದಲ್ಲಿ ನೀವು ಈ ರೀತಿ ನಡೆದುಕೊಳ್ಳುವುದಾದರೆ ಯುವ ಪೀಳಿಗೆಗೆ ಹೇಗೆ ಮಾದರಿಯಾಗಲು ಸಾಧ್ಯ? ಯಾವುದೇ ಉದಯೋನ್ಮುಖ ಕ್ರಿಕೆಟಿಗರು ಈ ರೀತಿಯ ಪ್ರತಿಕ್ರಿಯೆಯನ್ನು ನೋಡಲು ಬಯಸುವುದಿಲ್ಲ, ವಿಶೇಷವಾಗಿ ಭಾರತ ತಂಡದ ನಾಯಕನಿಂದ. ಈ ಟೆಸ್ಟ್ ಪಂದ್ಯದ ಫಲಿತಾಂಶ ಏನೇ ಇರಲಿ, ಇಷ್ಟು ವರ್ಷಗಳಿಂದ ತಂಡವನ್ನು ಮುನ್ನಡೆಸಿರುವ ನಿಮ್ಮಿಂದ ಈ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸುವಂತದ್ದಲ್ಲ. ವಿರಾಟ್ ಕೊಹ್ಲಿ ಜೊತೆ ದ್ರಾವಿಡ್ ಸಂಭಾಷಣೆ ನಡೆಸಬಹುದೆಂದು ನಾನು ಭಾವಿಸುತ್ತೇನೆ. ಏಕೆಂದರೆ ದ್ರಾವಿಡ್ ಕೂಡ ಭಾರತ ತಂಡವನ್ನು ಈ ಹಿಂದೆ ಮುನ್ನಡೆದಿದ್ದಾರೆ ಹಾಗೂ ಈ ರೀತಿ ಅವರು ಎಂದೂ ಪ್ರತಿಕ್ರಿಯೆ ನೀಡಿದವರಲ್ಲ,” ಎಂದು ಗಂಂಭೀರ್ ಹೇಳಿದ್ದಾರೆ.
‘ಆ ಘಟನೆ ನೋಡಿ ನನಗೆ ಖುಷಿಯಾಯಿತು’ ಕೊಹ್ಲಿಗೆ ಬೌಲಿಂಗ್ ಕೋಚ್ ಬೆಂಬಲ!
ಎಲ್‌ಬಿಡಬ್ಲ್ಯು ನಿಂದ ಬವಾಚ್ ಆಗಿದ್ದ ಡೀನ್ ಎಲ್ಗರ್ ಅವರು 30 ರನ್ ಗಳಿಸಿದ ಬಳಿಕ ಜಸ್‌ಪ್ರಿತ್ ಬುಮ್ರಾ ಎಸೆತದಲ್ಲಿ ಕಾಟ್ ಬಿಹೈಂಡ್ ಆಗಿದ್ದರು. 48 ರನ್ ಗಳಿಸಿರುವ ಕೀಗನ್ ಪೀಟರ್ಸನ್ ಇಂದು(ಶುಕ್ರವಾರ) ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಇನ್ನೂ 111 ರನ್ ಅಗತ್ಯವಿದೆ ಹಾಗೂ ಇನ್ನೂ 8 ವಿಕೆಟ್ ಕೈಯಲ್ಲಿದೆ.
Read more
[wpas_products keywords=”deal of the day gym”]