Karnataka news paper

ಲಂಚ ಪಡೆದು ಜೈಲಿಗೋಗಿದ್ದ ಪಿಎಸ್‌ಐ ಬಿಡುಗಡೆ ವೇಳೆ ಅದ್ಧೂರಿ ಮೆರವಣಿಗೆ! ಕೊಟ್ಟೂರು ಠಾಣೆಯಲ್ಲಿ ದೂರು ದಾಖಲು



ವಿಜಯನಗರ: ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದ ಜಿಲ್ಲೆಯ ಕೊಟ್ಟೂರು ತಾಲೂಕಿನ ಪಿಎಸ್ಐ ನಾಗಪ್ಪ ಜೈಲಿನಿಂದ ಬಿಡುಗಡೆ ಆಗುವ ವೇಳೆ ಅದ್ಧೂರಿ ಮೆರವಣಿಗೆಯಲ್ಲಿ ಬಂದ ಹಿನ್ನೆಲೆಯಲ್ಲಿ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೈಲಿನಿಂದ ಬಿಡುಗಡೆ ಆಗಿ ಬಂದ ವೇಳೆ ಅದ್ದೂರಿ ಸ್ವಾಗತ ಮಾಡುವ ಮೂಲಕ ಕೊರೊನಾ ನಿಯಮ ಉಲ್ಲಂಘನೆ ಮಾಡಿರುವ ಕುರಿತು ಪಿಎಸ್ಐ ನಾಗಪ್ಪ ವಿರುದ್ಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ನಾಗಪ್ಪ ಸೇರಿದಂತೆ 13 ಜನರ ವಿರುದ್ಧ ಕೂಡ್ಲಿಗಿ ಸಿಪಿಐ ವಸಂತ್ ಅಸೋದೆ ನೀಡಿದ ದೂರಿನ ಆಧಾರದ ಮೇಲೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿಜಯನಗರ ಎಸ್ಪಿ ಡಾ. ಅರುಣ್ ಕೆ. ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳು ಪ್ರಕರಣವೊಂದರಲ್ಲಿ ಲಂಚ ಪಡೆಯುವ ವೇಳೆ ಠಾಣೆ ಬಳಿಯೇ ಪಿಎಸ್ಐ ನಾಗಪ್ಪ ಎಸಿಬಿ ದಾಳಿ ವೇಳೆ ಹಣದ ಸಮೇತ ಸಿಕ್ಕಿಬಿದ್ದಿದ್ದ. ಬಳಿಕ ಕರ್ತವ್ಯದಿಂದ ಅಮಾನತ್ತಾಗಿ ಜೈಲು ಸೇರಿದ್ದ.



Read more

[wpas_products keywords=”deal of the day sale today offer all”]