ಹೈಲೈಟ್ಸ್:
- ಕೋಣನಕುಂಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಮನ್ವಿ ನಿಧನ
- ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಮನ್ವಿ
- ಅಮೃತಾ ನಾಯ್ಡು ದಂಪತಿ ಬಾಳಿಗೆ ಬೆಳಕಾಗಿದ್ದ ಪುಟ್ಟ ಕಂದ ಸಮನ್ವಿ
ಅಮೃತಾ ಬಾಳಿಗೆ ಬೆಳಕಾಗಿ ಬಂದಿದ್ದ ಸಮನ್ವಿ
ಹರಿಕಥಾ ವಿದ್ವಾಂಸರಾದ ಗುರುರಾಜುಲು ನಾಯ್ಡು ಅವರ ಮೊಮ್ಮಳಾಗಿರುವ ಅಮೃತಾ ನಾಯ್ಡು, ಅನೇಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕೆಲ ವರ್ಷಗಳ ಹಿಂದೆ ರೂಪೇಶ್ ಎಂಬುವರ ಜೊತೆ ವಿವಾಹವಾಗಿದ್ದರು. ಈ ದಂಪತಿಗೆ ಒಂದು ಮಗು ಜನಿಸಿತ್ತು. ಆದರೆ, ಕೆಲ ಆರೋಗ್ಯ ಸಮಸ್ಯೆಯಿಂದ ಆ ಮಗು ನಿಧನ ಹೊಂದಿತ್ತು. ಹೀಗೆ ಮೊದಲ ಮಗುವಿನ ಸಾವನ್ನು ಮರೆಸುವಂತೆ, ಆ ಕುಟುಂಬಕ್ಕೆ ಬೆಳಕಾಗಿ ಬಂದವಳೇ ಸಮನ್ವಿ. ಈ ಬಗ್ಗೆ ‘ನನ್ನಮ್ಮ ಸೂಪರ್ ಸ್ಟಾರ್’ ಶೋ ವೇದಿಕೆಯಲ್ಲಿ ‘ಸಮನ್ವಿ ನಮಗೆ ದೇವರು ಕೊಟ್ಟ ವರ’ ಎಂದು ಅಮೃತಾ ಹೇಳಿಕೊಂಡಿದ್ದರು.
ಮೊದಲ ಮಗುವನ್ನು ಕಳೆದುಕೊಂಡು ನೋವಿನಲ್ಲಿದ್ದ ಅಮೃತಾ ದಂಪತಿ ಬದುಕಿಗೆ ಸಮನ್ವಿ ಸಂತೋಷ ತಂದಿದ್ದಳು. ‘ನನ್ನಮ್ಮ ಸೂಪರ್ ಸ್ಟಾರ್’ ಶೋನಲ್ಲಿ ಅಮೃತಾ ಮತ್ತು ಸಮನ್ವಿ ಎಲ್ಲರಿಗೂ ಇಷ್ಟವಾಗಿದ್ದರು. ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ಅಮೃತಾ ಇದೇ ಮೊದಲ ಬಾರಿಗೆ ಮಗಳೊಂದಿಗೆ ರಿಯಾಲಿಟಿ ಶೋವೊಂದಕ್ಕೆ ಆಗಮಿಸಿದ್ದರು. ಆದರೆ ಈಗ ಸಮನ್ವಿ ಸಾವು ಎಲ್ಲರನ್ನು ಕಂಗೆಡಿಸಿದೆ. ಅಂದಹಾಗೆ, ಅಮೃತಾ ಈಗ ಗರ್ಭಿಣಿ. ಆ ಕಾರಣದಿಂದಲೇ, ಅವರ ಆರೋಗ್ಯದ ದೃಷ್ಟಿಯಿಂದ, ಅವರ ಮನವಿ ಮೇರೆಗೆ ಈಚೆಗಷ್ಟೇ ‘ನನ್ನಮ್ಮ ಸೂಪರ್ ಸ್ಟಾರ್’ ಶೋನಿಂದ ಎಲಿಮಿನೇಟ್ ಮಾಡಲಾಗಿತ್ತು.
ಅಪಘಾತದಲ್ಲಿ ಸಾವನ್ನಪ್ಪಿದ ‘ನನ್ನಮ್ಮ ಸೂಪರ್ ಸ್ಟಾರ್’ ಸ್ಪರ್ಧಿ 6 ವರ್ಷದ ಸಮನ್ವಿ; ತಾಯಿ ಅಮೃತಾ ನಾಯ್ಡುಗೆ ಚಿಕಿತ್ಸೆ
ಈ ಘಟನೆ ಹೇಗಾಯ್ತು?
ಕೋಣನಕುಂಟೆಯ ವಾಜರಹಳ್ಳಿಯ ಬಳಿ ಪುತ್ರಿ ಸಮನ್ವಿ ಜೊತೆಗೆ ಅಮೃತಾ ನಾಯ್ಡು ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಆ ವೇಳೆ ಟಿಪ್ಪರ್ ಲಾರಿಯೊಂದು ಅಮೃತಾ ಮತ್ತು ಸಮನ್ವಿ ಇದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 6 ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದಳು. ಅಮೃತಾಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು, ಸಮನ್ವಿ ನಿಧನಕ್ಕೆ ಸೃಜನ್ ಲೋಕೇಶ್, ಅನು ಪ್ರಭಾಕರ್, ತಾರಾ ಮುಂತಾದವರು ಸಂತಾಪ ಸೂಚಿಸಿದ್ದಾರೆ.
ಸಮನ್ವಿ ನಿಧನಕ್ಕೆ ಕಂಬನಿ ಮಿಡಿದ ಅನು ಪ್ರಭಾಕರ್; ‘ದೇವರು ಇದ್ದಾನೋ, ಇಲ್ಲವೋ’ ಎಂದ ಸೃಜನ್ ಲೋಕೇಶ್
Read more
[wpas_products keywords=”deal of the day party wear dress for women stylish indian”]