Karnataka news paper

ಅಮೆರಿಕದಲ್ಲಿ ಕೋವಿಡ್ ಹೆಚ್ಚಳ; ಹೆಚ್ಚುವರಿ 50 ಕೋಟಿ ಪರೀಕ್ಷಾ ಕಿಟ್ ಖರೀದಿ: ಬೈಡನ್


ವಾಷಿಂಗ್ಟನ್: ಅಮೆರಿಕದಲ್ಲಿ ಓಮೈಕ್ರಾನ್ ಒಳಗೊಂಡಂತೆ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಸೋಂಕನ್ನು ನಿಯಂತ್ರಿಸಲು ಹೆಚ್ಚುವರಿ 50 ಕೋಟಿ ಪರೀಕ್ಷಾ ಕಿಟ್ ಹಾಗೂ ಗುಣಮಟ್ಟದ ಮಾಸ್ಕ್ ಪೂರೈಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭರವಸೆ ನೀಡಿದ್ದಾರೆ.

ಈ ಹಿಂದೆ ಘೋಷಿಸಿದ 50 ಕೋಟಿ ಹೊರತಾಗಿ ಹೆಚ್ಚುವರಿಯಾಗಿ 50 ಕೋಟಿ ಕೋವಿಡ್ ಪರೀಕ್ಷಾ ಕಿಟ್‌ಗಳನ್ನು ಸರ್ಕಾರವು ಖರೀದಿಸಲಿದೆ. ಇದರ ಹೊರತಾಗಿ ಅತ್ಯುತ್ತಮ ಗುಣಮಟ್ಟದ ಮಾಸ್ಕ್ ಒದಗಿಸಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: 

ಅಮೆರಿಕದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲೂ ಗಣನೀಯ ವರ್ಧನೆ ಕಂಡುಬಂದಿದೆ. ಇದರಿಂದ ಐಸಿಯು ಹಾಗೂ ಆರೋಗ್ಯ ಸಿಬ್ಬಂದಿ ಕೊರತೆಯ ಭೀತಿ ಕಾಡುತ್ತಿದೆ.

ಸೋಮವಾರದಂದು ಕೋವಿಡ್ ದೃಢಪಟ್ಟ 14,81,375 ಸೋಂಕು ಪ್ರಕರಣಗಳು ವರದಿಯಾಗಿದ್ದವು. 1,904 ಮಂದಿ ಮೃತಪಟ್ಟಿದ್ದರು ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ ತಿಳಿಸಿದೆ. ಇದು ಸಾಂಕ್ರಾಮಿಕ ರೋಗ ಆರಂಭವಾದ ಬಳಿಕ ವಿಶ್ವದಲ್ಲೇ ಒಂದೇ ದಿನ ದೇಶವೊಂದರಲ್ಲಿ ದಾಖಲಾದ ಗರಿಷ್ಠ ಪ್ರಕರಣಗಳಾಗಿವೆ.

ಇತ್ತೀಚಿನ ಅಂಕಿಅಂಶ ಪ್ರಕಾರ ಅಮೆರಿಕದಲ್ಲಿ ದೈನಂದಿನ ಸರಾಸರಿ 7.6 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, 1,600ಕ್ಕೂ ಹೆಚ್ಚು ಮಂದಿ ಸಾವಿಗೀಡಾಗುತ್ತಿದ್ದಾರೆ.

ಪ್ರತಿ ದಿನ ಸರಾಸರಿ 20,000 ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಪ್ರಮಾಣವು ಕಳೆದ ವಾರಕ್ಕೆ ಹೋಲಿಸಿದರೆ ಶೇ 24.5ರಷ್ಟು ಹೆಚ್ಚಾಗಿದೆ.

ಅಮೆರಿಕದ 19 ಸ್ಟೇಟ್‌ಗಳಲ್ಲಿ ಆರೋಗ್ಯ ಸಿಬ್ಬಂದಿ ಕೊರತೆಯ ನಡುವೆ ಐಸಿಯು ಅಭಾವದ ಭೀತಿ ಎದುರಿಸುತ್ತಿದ್ದು, ಲಭ್ಯ ಸಾಮರ್ಥ್ಯದ ಶೇ 15ರಷ್ಟು ಮಾತ್ರ ಬಾಕಿ ಉಳಿದಿವೆ. ಈ ಪೈಕಿ ಕೆಂಟುಕಿ, ಅಲಬಾಮಾ, ಇಂಡಿಯಾನಾ ಮತ್ತು ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಶೇ 10ಕ್ಕಿಂತ ಕಡಿಮೆ ಐಸಿಯು ಸಾಮರ್ಥ್ಯವನ್ನು ಹೊಂದಿವೆ ಎಂದು ಅಮೆರಿಕ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯ ಅಂಕಿಅಂಶ ತಿಳಿಸುತ್ತದೆ.

ನ್ಯೂಯಾರ್ಕ್, ನ್ಯೂಜೆರ್ಸಿ, ಓಹಿಯೋ, ರೋಡ್ ಐಲೆಂಡ್, ಮಿಚಿಗನ್ ಮತ್ತು ನ್ಯೂ ಮೆಕ್ಸಿಕೊದಲ್ಲಿ ಪರಿಸ್ಥಿತಿ ನಿಭಾಯಿಸಲು ಹೆಚ್ಚುವರಿ ವೈದ್ಯಕೀಯ ತಂಡಗಳನ್ನು ನಿಯೋಜಿಸುವುದಾಗಿ ಬೈಡನ್ ತಿಳಿಸಿದ್ದಾರೆ.



Read more from source

[wpas_products keywords=”deals of the day offer today electronic”]