Karnataka news paper

ಗೋವಾದಲ್ಲಿ ಬಿಜೆಪಿ ಸೋಲಿಸಲು ಎಲ್ಲಾ ವಿಪಕ್ಷಗಳು ಮೈತ್ರಿ ಮಾಡಿಕೊಳ್ಳಬೇಕು- ಮಹುವಾ ಮೊಯಿತ್ರಾ


The New Indian Express

ಪಣಜಿ: ಗೋವಾ ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಬಾಕಿಯಿರುವಂತೆಯೇ, ಬಿಜೆಪಿಯನ್ನು ಸೋಲಿಸಲು ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳನ್ನು ಒಂದುಗೂಡಿಸಲು ತೃಣಮೂಲ ಕಾಂಗ್ರೆಸ್ ಪ್ರಯತ್ನಿಸುತ್ತಿದೆ.

ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಒಂದರಿಂದಲೇ ಸಾಧ್ಯವಿಲ್ಲ, ಗೋವಾದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಲ್ಲಾ ಬಿಜೆಪಿಯೇತರ ಪಕ್ಷಗಳು ಒಗ್ಗೂಡಬೇಕು ಎಂದು ಸಂಸದೆ ಹಾಗೂ ಎಐಟಿಸಿ ಗೋವಾ ಉಸ್ತುವಾರಿ ಮೆಹುವಾ ಮೊಯಿತ್ರಾ ಹೇಳಿದ್ದಾರೆ. 

ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಹೋರಾಟ ಎಂದು ಇತ್ತೀಚಿಗೆ ಗೋವಾ ಕಾಂಗ್ರೆಸ್ ಉಸ್ತುವಾರಿ ಪಿ. ಚಿದಂಬರಂ ನೀಡಿದ್ದ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಮೊಯಿತ್ರಾ, 2017ರಲ್ಲಿ ಕಾಂಗ್ರೆಸ್ ಜನಾದೇಶ ಪಡೆದಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾದದ್ದನ್ನು ಚಿದಂಬರಂ ನೆನಪಿಸಿಕೊಳ್ಳಲು ಬಯಸುತ್ತೇನೆ. ಈಗಲೂ ಕೂಡಾ ಕಾಂಗ್ರೆಸ್ ಒಂದರಿಂದಲೇ ಬಿಜೆಪಿ ಮಣಿಸಲು ಸಾಧ್ಯವಿಲ್ಲ, ಗೋವಾದಲ್ಲಿ ಬಿಜೆಪಿಯನ್ನು ಸೋಲಿಸಲು ಬಿಜೆಪಿಯೇತರ ಎಲ್ಲಾ ಪಕ್ಷಗಳು ಒಗ್ಗೂಡುವಂತೆ ಟಿಎಂಸಿ ಕೇಳುತ್ತಿರುವುದಾಗಿ ಹೇಳಿದರು. 

ಕಾಂಗ್ರೆಸ್ ಮುಖಂಡರನ್ನು ಟಿಎಂಸಿ ಖರೀದಿಸುತ್ತಿದೆ ಎಂಬ ಆರೋಪ ಕುರಿತಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೊಯಿತ್ರಾ, ಬಿಜೆಪಿ ವಿರುದ್ಧ ಹೋರಾಡಲು ಬಯಸುತ್ತದ್ದ ಎಲ್ಲಾ ಕಾಂಗ್ರೆಸ್ ಮುಖಂಡರನ್ನು ಟಿಎಂಸಿ ಸೇರಿಸಿಕೊಂಡಿರುವುದಾಗಿ ತಿಳಿಸಿದರು. ಇದು ಅತ್ಯಂತ ಅಗತ್ಯವಾದ ಸಮಯವಾಗಿದ್ದು, ಬಂದು ಮಾತನಾಡಲು ಬಿಜೆಪಿಯೇತರ ಎಲ್ಲಾ ಪಕ್ಷಗಳನ್ನು ಕರೆಯುತ್ತಿರುವುದಾಗಿ ಅವರು ಹೇಳಿದರು. 



Read more

[wpas_products keywords=”deal of the day”]