
ಇಸ್ಲಾಮಾಬಾದ್: ವಿರೋಧ ಪಕ್ಷಗಳ ತೀವ್ರ ಪ್ರತಿರೋಧದ ನಡುವೆಯೂ ಪಾಕಿಸ್ತಾನದ ಸಂಸತ್ತಿನಲ್ಲಿ ವಿವಾದಾತ್ಮಕ ಹಣಕಾಸು (ಪೂರಕ) ಮಸೂದೆಯನ್ನು ಗುರುವಾರ ಅಂಗೀಕರಿಸಲಾಗಿದೆ. ಇದನ್ನು ‘ಮಿನಿ-ಬಜೆಟ್’ ಎಂದೂ ಕರೆಯಲಾಗಿದೆ.
ತೆರಿಗೆಗಳು ಮತ್ತು ಸುಂಕಗಳನ್ನು ಹೆಚ್ಚಿಸುವ ಮತ್ತು ಕೇಂದ್ರೀಯ ಬ್ಯಾಂಕ್ ಅನ್ನು ಸಬಲಗೊಳಿಸುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಡಿಸೆಂಬರ್ 30 ರಂದು ಸರ್ಕಾರವು ಮಂಡಿಸಿತ್ತು. ಅಂತರರಾಷ್ಟ್ರೀಯ ಹಣಕಾಸು ನಿಧಿಯು 6 ಶತಕೋಟಿ ಡಾಲರ್ ವಿಸ್ತೃತ ನಿಧಿ ಸೌಲಭ್ಯದ ಅಡಿಯಲ್ಲಿ 1 ಶತಕೋಟಿ ಡಾಲರ್ ಅನುಮೋದನೆಗೆ ಪಡೆಯುವ ಪ್ರಮುಖ ಷರತ್ತುಗಳನ್ನು ಪೂರೈಸಲು ಈ ಮಸೂದೆ ಮಂಡಿಸಲಾಗಿದೆ.
ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಮಸೂದೆಯಲ್ಲಿ ಹಲವಾರು ತಿದ್ದುಪಡಿಗಳನ್ನು ಪ್ರಸ್ತಾಪಿಸಿದವು. ಆದರೆ, ಹಣಕಾಸು ಇಲಾಖೆಯು ಸೂಚಿಸಿದ ತಿದ್ದುಪಡಿಗಳನ್ನು ಮಾತ್ರ ಅಂಗೀಕರಿಸಿ, ಉಳಿದವುಗಳನ್ನು ತಿರಸ್ಕರಿಸಲಾಗಿದೆ.
ಹೆಚ್ಚುವರಿ ತೆರಿಗೆಗಳು ಈಗಾಗಲೇ ಹೊರೆಯಾಗಿರುವ ಜನಸಾಮಾನ್ಯರಿಗೆ ಹಾನಿಯನ್ನು ಉಂಟುಮಾಡುತ್ತವೆ ಎಂದು ವಿಪಕ್ಷಗಳು ಆರೋಪಿಸಿವೆ. ಹಣಕಾಸು ಮಸೂದೆಯೊಂದಿಗೆ ಅಂಗೀಕರಿಸಲಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (ತಿದ್ದುಪಡಿ) ಬಿಲ್ 2021 ಕೇಂದ್ರ ಬ್ಯಾಂಕ್ ಅನ್ನು ಸರ್ಕಾರಕ್ಕಿಂತ ಹೆಚ್ಚು ಬಲಶಾಲಿಯಾಗಿಸುತ್ತದೆ ಮತ್ತು ಅದು ಸ್ವಂತ ಇಚ್ಛೆಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಪ್ರತಿಪಕ್ಷಗಳು ಹೇಳಿಕೊಂಡಿದೆ.
Read more from source
[wpas_products keywords=”deals of the day offer today electronic”]