The New Indian Express
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಮೂರನೇ ಅಲೆ ಅಬ್ಬರ ಹೆಚ್ಚುತ್ತಿದ್ದು, ಕೋವಿಡ್ -19 ಹರಡುವಿಕೆಯನ್ನು ನಿಯಂತ್ರಿಸಲು ಬಿಎಂಆರ್ ಸಿಎಲ್ ತಕ್ಷಣದಿಂದ ಜಾರಿಗೆ ಬರುವಂತೆ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಕರ ಪ್ರವೇಶವನ್ನು ನಿರ್ಬಂಧಿಸಲು ನಿರ್ಧರಿಸಿದೆ.
ಮೆಟ್ರೋದಲ್ಲಿ ಜನಸಂದಣಿ ಕಡಿಮೆ ಮಾಡಲು ಮಾರ್ಗಸೂಚಿ ಹೊರಡಿಸಿರುವ ಸರ್ಕಾರ ಬಿಎಂಆರ್ ಸಿಎಲ್, ಹಾಸನ ಸಾಮರ್ಥ್ಯ ಮೀರಿ ಪ್ರಯಾಣಿಸುವುದಕ್ಕೆ ಯಾವುದೇ ಅನುಮತಿ ಇಲ್ಲ ಎಂದು ಹೇಳಿದೆ.
ಇದನ್ನು ಓದಿ: ಬೆಂಗಳೂರು ಮೆಟ್ರೋ: ಐಟಿ ಹಬ್ ಮೊಬಿಲಿಟಿ ಯೋಜನೆಗಳ ಕುರಿತು ವಿವರ ನೀಡಿ- ಸರ್ಕಾರಕ್ಕೆ ಕೇಂದ್ರ ಪತ್ರ
ಮೆಟ್ರೋದಲ್ಲಿ ಜನ ದಟ್ಟಣೆ ಕಡಿಮೆ ಮಾಡಲು ನಮ್ಮ ಮೆಟ್ರೋದಲ್ಲಿ ಕುಳಿತುಕೊಳ್ಳುವ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗುವುದು. ನಿಂತು ಪ್ರಯಾಣ ಮಾಡುವಂತಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ರೈಲುಗಳಲ್ಲಿ ಲಭ್ಯವಿರುವ ಆಸನ ಸಾಮರ್ಥ್ಯದ ಆಧಾರದ ಮೇಲೆ ಸೀಮಿತ ಆಕ್ಯುಪೆನ್ಸಿಗೆ ಅನುಮತಿಸಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ. ಪ್ರಯಾಣಿಕರು ಬೋಗಿಗಳು ತುಂಬಿರುವುದನ್ನು ಗಮನಿಸಿದರೆ, ಖಾಲಿ ಕೋಚ್‌ಗಳಿಗೆ ತೆರಳಲು ಅಥವಾ ಮುಂದಿನ ರೈಲಿಗೆ ಹತ್ತಲು ಸಲಹೆ ನೀಡಲಾಗುತ್ತದೆ. ಕರ್ಫ್ಯೂ ಕಾರಣದಿಂದಾಗಿ ವಾರಾಂತ್ಯದಲ್ಲಿ ಮೆಟ್ರೋ ರೈಲುಗಳು 30 ನಿಮಿಷಗಳಿಗೊಂದು ರೈಲು ಚಲಿಸುತ್ತವೆ. ಪ್ರಸ್ತುತ, ಪ್ರತಿ 20 ನಿಮಿಷಗಳಿಗೊಮ್ಮೆ ರೈಲುಗಳು ಚಲಿಸುತ್ತಿವೆ.
Read more
[wpas_products keywords=”deal of the day”]