Karnataka news paper

ಭಾರತ ವಿರುದ್ಧದ ಟೆಸ್ಟ್ ಸರಣಿ: 21 ಆಟಗಾರರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ; ಇಬ್ಬರು ಹೊಸ ಆಟಗಾರರಿಗೆ ಚಾನ್ಸ್!


Source : Online Desk

ಜೋಹಾನ್ಸ್‌ಬರ್ಗ್: ಟೀಂ ಇಂಡಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್‌ ಸರಣಿಗೆ ಕ್ರಿಕೆಟ್ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಿದೆ. 

21 ಆಟಗಾರರ ತಂಡದಲ್ಲಿ ಇಬ್ಬರು ಹೊಸಬರಿಗೆ ಅವಕಾಶ ನೀಡಲಾಗಿದ್ದು ವೇಗಿ ಸಿಸಂದಾ ಮಗಲಾ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಯಾನ್ ರಿಕೆಲ್ಟನ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಡೀನ್ ಎಲ್ಗರ್ ತಂಡ ನಾಯಕರಾಗಿದ್ದರೆ ತೆಂಬಾ ಬಾವುಮಾ ಉಪನಾಯಕ ಆಗಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾದ ಸೆಂಚೂರಿಯನ್‌ನಲ್ಲಿ ನಡೆಯಲಿದೆ.

ಮತ್ತೆ ತಂಡ ಸೇರಿದ ಆಟಗಾರರು
2019ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ ವೇಗದ ಬೌಲರ್ ಡುವಾನ್ ಒಲಿವರ್ ಅವರು ತಂಡಕ್ಕೆ ಮರಳಿದ್ದಾರೆ. ಇದಲ್ಲದೆ ವೇಗಿಗಳಾದ ಎನ್ರಿಕ್ ನೋರ್ಕಿಯಾ ಮತ್ತು ಕಗಿಸ್ ರಬಾಡ ಕೂಡ ತಂಡಕ್ಕೆ ಮರಳಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಈ ಇಬ್ಬರೂ ಬೌಲರ್‌ಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಅದೇ ಸಮಯದಲ್ಲಿ, ಗ್ಲೆಂಟನ್ ಸ್ಟರ್ಮನ್ ಮತ್ತು ಪ್ರೆನೆಲನ್ ಸುಬ್ರೇ ಕೂಡ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.

ಓಮಿಕ್ರಾನ್ ಕಾರಣದಿಂದಾಗಿ ಪ್ರವಾಸ ಮುಂದೂಡಿಕೆ
ಡಿಸೆಂಬರ್ 17ರಂದು ಭಾರತದ ದಕ್ಷಿಣ ಪ್ರವಾಸ ಆರಂಭವಾಗಬೇಕಿತ್ತು. ಆದರೆ ಅಲ್ಲಿ ಕೊರೋನಾದ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾದ ಕಾರಣ ಈ ಪ್ರವಾಸವನ್ನು ಸುಮಾರು ಒಂದು ವಾರದವರೆಗೆ ಮುಂದೂಡಲಾಯಿತು. ಓಮಿಕ್ರಾನ್ ಬೆದರಿಕೆಯ ದೃಷ್ಟಿಯಿಂದ ಇಡೀ ಕ್ರಿಕೆಟ್ ಸರಣಿಯಲ್ಲಿ ಬಿಕ್ಕಟ್ಟಿನ ಮೋಡ ಕವಿದಿತ್ತು. ಆದರೆ ನಂತರ ಬಿಸಿಸಿಐ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಆಡಲು ಒಪ್ಪಿಕೊಂಡಿತು. ಪ್ರವಾಸವನ್ನು ಮೊಟಕುಗೊಳಿಸಿತು. ಟೆಸ್ಟ್ ಸರಣಿ ನಂತರ ನಾಲ್ಕು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ
ಡೀನ್ ಎಲ್ಗರ್(ನಾಯಕ), ಟೆಂಬಾ ಬವುಮಾ(ಉಪನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕಗಿಸೊ ರಬಾಡ, ಸರೆಲ್ ಇರ್ವಿ, ಬ್ಯೂರೆನ್ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಎನ್ರಿಖ್-ನೋರ್ಸಿಯಾ, ಕೀ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡ್ಯುಸೆನ್, ಕೈಲ್ ವೆರೆನ್, ಮಾರ್ಕೊ ಜೆನ್ಸನ್, ಗ್ಲೆಂಟನ್ ಸ್ಟರ್ಮನ್, ಪ್ರೆನೆಲನ್ ಸುಬ್ರೇ, ಸಿಸಂಡಾ ಮಗಾಲಾ, ರಿಯಾನ್ ರಿಕೆಲ್ಟನ್, ಡುವಾನ್ ಆಲಿವರ್.



Read more…

Leave a Reply

Your email address will not be published. Required fields are marked *