Karnataka news paper

ಜಮ್ಮು-ಕಾಶ್ಮೀರದ ಕುಲ್ಗಾಂನಲ್ಲಿ ಎನ್ಕೌಂಟರ್: ಓರ್ವ ಉಗ್ರ ಹತ, ಓರ್ವ ಪೊಲೀಸ್ ಹುತಾತ್ಮ


Online Desk

ಜಮ್ಮು-ಕಾಶ್ಮೀರ: ಕುಲ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಆರಂಭಿಲಾಗಿದ್ದ ಎನ್‌ಕೌಂಟರ್‌ನಲ್ಲಿ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಓರ್ವ ಭಯೋತ್ಪಾದನನ್ನು ಹೊಡೆದುರುಳಿಸುವಲ್ಲಿ ಸೇನಾ ಹಾಗೂ ಕಾಶ್ಮೀರದ ಪೊಲೀಸರು ಯಶಸ್ವಿಯಾಗಿದ್ದಾರೆ.

ಉಗ್ರರೊಂದಿಗಿನ ಜಂಟಿ ಹೋರಾಟದ ಆರಂಭದಲ್ಲೇ ದುರಾದುಷ್ಟವಶಾತ್‌ ಕಾಶ್ಮೀರದ ಪೊಲೀಸ್‌ ಸಿಬ್ಬಂದಿ ರೋಹಿತ್‌ ಕುಮಾರ್‌ ಚಿಬ್‌ ಎಂಬುವವರು ಹುತಾತ್ಮರಾಗಿದ್ದಾರೆ. 

ಇದನ್ನೂ ಓದಿ: ಭಾರತೀಯ ಸೇನೆಗೆ ಮತ್ತಷ್ಟು ಬಲ: ಯೋಧರ ಬತ್ತಳಿಕೆಗೆ ನೂತನ ಅಸ್ತ್ರ, ಡಿಆರ್ ಡಿಒ​ದಿಂದ ಯಶಸ್ವಿ ಪರೀಕ್ಷೆ

ದಾಳಿ ವೇಳೆ 34 ಆರ್‌ಆರ್‌ನ ಮೂವರು ಸೈನಿಕರು ಹಾಗೂ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಕಾಶ್ಮೀರ ವಲಯದ ಐಜಿ ವಿಜಯ್‌ ಕುಮಾರ್‌ ಅವರು ಮಾಹಿತಿ ನೀಡಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯ ಪರಿವಾನ್‌ ಗ್ರಾಮದಲ್ಲಿ ಈ ಎನ್‌ಕೌಂಟರ್‌ ನಡೆದಿದ್ದು, ಎಲ್ಲಾ ಗಾಯಗಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 



Read more

[wpas_products keywords=”deal of the day”]