Karnataka news paper

ರಾಜ್ಯದಲ್ಲಿ 3ನೇ ಅಲೆ ಆರ್ಭಟ: ಬೆಂಗಳೂರಿನಲ್ಲಿ 15,617 ಸೇರಿ ರಾಜ್ಯದಲ್ಲಿ 21,390 ಕೊರೋನಾ ಪ್ರಕರಣ ಪತ್ತೆ, 10 ಸಾವು!


Online Desk

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ನಿರಂತರ ಏರುತ್ತಿದ್ದು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 21,390 ಕೊರೋನಾ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 30,99,519ಕ್ಕೆ ಏರಿಕೆಯಾಗಿದೆ.

ಇನ್ನು ರಾಜ್ಯದಲ್ಲಿ 10 ಮಂದಿ ಕೊರೋನಾಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 38,389ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕನ್ನಡಪ್ರಭ.ಕಾಮ್ ಯೂಟ್ಯೂಬ್ ಚಾನಲ್ ಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಂಗಳೂರಿನಲ್ಲಿ 15,617 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 13,34,957ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಕೊರೋನಾಗೆ 6 ಮಂದಿ ಬಲಿಯಾಗಿದ್ದಾರೆ. 

ಕಳೆದ 24 ಗಂಟೆಯಲ್ಲಿ 1,541 ಸೋಂಕಿತರ ಚೇತರಿಸಿಕೊಂಡಿದ್ದು ಒಟ್ಟಾರೆ ಚೇತರಿಕೆ ಸಂಖ್ಯೆ 29,68,002ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ  ಸಕ್ರಿಯ ಪ್ರಕರಣಗಳ ಸಂಖ್ಯೆ 93,099ಕ್ಕೆ ಏರಿಕೆಯಾಗಿದ್ದು ಬೆಂಗಳೂರು ಒಂದರಲ್ಲೇ 73 ಸಾವಿರ ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.10.96 ಕ್ಕೆ ಏರಿಕೆಯಾಗಿದೆ. ಇಂದು ಒಟ್ಟು 1,95,047 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ. 





Read more

[wpas_products keywords=”deal of the day”]