Karnataka news paper

ಶುಕ್ರವಾರದ ವೇಳೆಗೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 3,000 ಹಾಸಿಗೆಗಳು ಸಿದ್ಧ!


The New Indian Express

ಬೆಂಗಳೂರು: ಜನವರಿ 14 ರೊಳಗೆ ನಗರದ ಎಲ್ಲಾ 27 ಕೋವಿಡ್ ಕೇರ್ ಕೇಂದ್ರಗಳಲ್ಲಿ (ಸಿಸಿಸಿ) 3,000 ಹಾಸಿಗೆಗಳನ್ನು ಸಿದ್ಧಪಡಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಬುಧವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿರುವ ಎಲ್ಲಾ ಕೋವಿಡ್ ಕೇರ್ ಕೇಂದ್ರಗಳಲ್ಲಿ, ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಹೋಟೆಲ್ ಕೊಠಡಿಗಳನ್ನು ಕೋವಿಡ್ ಕೇರ್ ಕೇಂದ್ರಗಳಾಗಿ ಬಳಸಲಾಗುತ್ತಿದ್ದು ಇಲ್ಲಿಯೂ ಮುಂಬರುವ ದಿನಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು 3,000-5,000ಕ್ಕೆ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 28,067 ಹಾಸಿಗೆ ಗುರುತಿಸಿದ್ದು, ಈವರೆಗೆ 6255 ಹಾಸಿಗೆಗಳನ್ನು ಕೋವಿಡ್ ಆಸ್ಪತ್ರೆಗಳ ಹಾಸಿಗೆ ನಿರ್ವಹಣಾ ವ್ಯವಸ್ಥೆ (ಸಿಎಚ್’ಬಿಎಂಎಸ್) ಹಂಚಿಕೆ ಮಾಡಲಾಗಿದೆ. ಸದ್ಯ 362 ಮಂದಿಗೆ ಹಾಸಿಗೆಗಳನ್ನು ಈ ವ್ಯವಸ್ಥೆ ಮೂಲಕ ಬಿಬಿಎಂಪಿ ಹಂಚಿಕೆ ಮಾಡಿದೆ. 

ಇದನ್ನೂ ಓದಿ: ಕರ್ನಾಟಕದಲ್ಲಿ ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ತಲುಪಲು ಇನ್ನು ಕೇವಲ 6 ಸಾವಿರ ಬಾಕಿ!

ಶೇ.1ರಷ್ಟು ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಉಳಿದ ಶೇ.90ರಷ್ಟು ಸೋಂಕಿತರು ಹೋಂ ಐಸೋಲೇಷನ್ ನಲ್ಲಿದ್ದಾರೆ. ಹಾಸಿಗೆ ಮಂಜೂರು ಮಾಡಲು ಸರತಿ ಸಾಲು ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ವೈದ್ಯಕೀಯ ಆರೋಗ್ಯಾಧಿಕಾರಿಗೆ ಹಾಸಿಗೆ ಕಾಯ್ದಿರಿಸಲು ಲಾಗಿನ್ ನೀಡಲಾಗಿದೆ ಎಂದು ವಿವರಿಸಿದರು.

ಬುಧವಾರದ ವರದಿಗಳ ಪ್ರಕಾರ, ನಗರದಲ್ಲಿ 483 ಕಂಟೈನ್‌ಮೆಂಟ್ ವಲಯಗಳಿದ್ದು, ಅವುಗಳಲ್ಲಿ ಸುಮಾರು ಶೇ.60- 70 ಕಂಟೈನ್ಮೆಂಟ್ ಗಳು ಅಪಾರ್ಟ್ ಮೆಂಟ್ ಸಂಕೀರ್ಣಗಳಲ್ಲಿ ಕಂಡು ಬಂದಿವೆ. ಮುಂದಿನ ದಿನಗಳಲ್ಲಿ ಅಪಾರ್ಟ್‌ಮೆಂಟ್ ಸಂಕೀರ್ಣಗಳು, ಪಿಜಿ ವಸತಿಗಳು, ಹಾಸ್ಟೆಲ್‌ಗಳು ಮತ್ತು ನಿವಾಸಿಗಳ ಕಲ್ಯಾಣ ಸಂಘಗಳಿಗೆ ಪರಿಷ್ಕೃತ ಸಲಹೆ ಮತ್ತು ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. 

ನಗರದಲ್ಲಿ ಪತ್ತೆಯಾಗಿರುವ ಹೆಚ್ಚಿನ ಕಂಟೈನ್‌ಮೆಂಟ್ ವಲಯಗಳು ಮಹದೇವಪುರ (156) ಬೊಮ್ಮನಹಳ್ಳಿ (114)ಯಲ್ಲಿವೆ ಎಂದು ಗೌರವ್ ಗುಪ್ತಾ ಅವರು ಮಾಹಿತಿ ನೀಡಿದ್ದಾರೆ.

“ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಿರುವುದರಿಂದ ಹೆಚ್ಚಿನ ಪ್ರಕರಣಗಳು ದೇಶೀಯ ಪ್ರಯಾಣದ ಇತಿಹಾಸವನ್ನು ಹೊಂದಿರುವ ಜನರಲ್ಲಿ ಅತೀ ಹೆಚ್ಚು ಸೋಂಕುಗಳು ಕಂಡುಬಂದಿದೆ. ದೇಶೀಯ ಪ್ರಯಾಣಿಕರ ಮೇಲೆ ನಿರ್ಬಂಧಗಳು ಮತ್ತು ಕಟ್ಟುನಿಟ್ಟಾದ ತಪಾಸಣೆಗಳನ್ನು ವಿಧಿಸುವುದು ಸದ್ಯಕ್ಕೆ ಕಷ್ಟಕರವಾಗಿದೆ. ಹೋಮ್ ಐಸೋಲೇಶನ್‌ನಲ್ಲಿರುವವರು ಏಳು ದಿನಗಳವರೆಗೆ ಸಂಪೂರ್ಣ ಪ್ರತ್ಯೇಕತೆಯಲ್ಲಿರಬೇಕು, ನಂತರ ರೋಗಲಕ್ಷಣಗಳು ಕಂಡು ಬರದೇ ಹೋದರೆ ಮರು ಪರೀಕ್ಷೆ ನಡೆಸುವ ಅಗತ್ಯವಿರುವುದಿಲ್ಲ. ಜನರು ಯಾವುದೇ ಪ್ರಶ್ನೆಗೆ ಯಾವುದೇ ಸಮಯದಲ್ಲಿ 1533 ಡಯಲ್ ಮಾಡಿ, ಉತ್ತರ ಹಾಗೂ ಸಂಶಯಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. 

ಇದನ್ನೂ ಓದಿ: ಕೊರೋನಾ ಅಬ್ಬರ: ಬೆಂಗಳೂರಿನಲ್ಲಿ ಜನವರಿ 31 ರವರೆಗೆ 1 ರಿಂದ 9ನೇ ತರಗತಿಗಳಿಗೆ ಶಾಲೆ ಬಂದ್

ಆಸ್ಪತ್ರೆಗಳು ಅಥವಾ ಸಿಸಿಸಿಗಳಿಗೆ ದಾಖಲಾಗುವ ಮೊದಲು ಪ್ರತಿ ರೋಗಿಗೆ ದೈಹಿಕ ಪರೀಕ್ಷೆಯನ್ನು ಮಾಡಲಾಗುತ್ತದೆ. ಶೇ.30-40 ಪ್ರಕರಣಗಳಲ್ಲಿ, ರೋಗಿಯ ಸ್ಥಿತಿ, ಕೊಮೊರ್ಬಿಡಿಟಿಗಳು, ವಯಸ್ಸಿನ ಅಂಶ, ಮಕ್ಕಳು ಮತ್ತು ಪ್ರಕರಣಗಳ ಸಂಖ್ಯೆಯನ್ನು ಆಧರಿಸಿ ಪರೀಕ್ಷೆಯನ್ನು ಮಾಡಲಾಗುತ್ತದೆ. ಟೆಲಿ-ಟ್ರೇಜಿಂಗ್ ಅನ್ನು ಕೂಡ ಮಾಡಲಾಗುತ್ತಿದೆ, ಸೋಂಕಿತರನ್ನು ಸಂಪರ್ಕಿತರ ಸಂಪರ್ಕ ಸಾಧ್ಯವಾಗದೇ ಹೋದಲ್ಲಿ, ವಾರ್ ರೂಮ್ ಗಳ ಸಂಪರ್ಕಿಸಿ ಮಾಹಿತಿ ಪಡೆಯಲಾಗುತ್ತದೆ. ಖಾಸಗಿ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಾಗುವುದಕ್ಕೂ ಮುನ್ನ ಪರೀಕ್ಷೆಯಂತೂ ಕಡ್ಡಾಯವಾಗಿದೆ. ವೈದ್ಯಕೀಯ ವರದಿಯನ್ನು ಬಿಬಿಎಂಪಿಯೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಪ್ರಾಥಮಿಕ ಸಂಪರ್ಕಿತರ ಪರೀಕ್ಷೆಗೊಳಪಡಿಸುವಂತೆ ಐಸಿಎಂಆರ್ ನೀಡಿರುವ ಸೂಚನೆಯನ್ನು ಪಾಲನೆ ಮಾಡುವುದಾಗಿ ಇದೇ ವೇಳೆ ತಿಳಿಸಿರುವ ಗೌರವ್ ಗುಪ್ತಾ ಅವರು, ಪರೀಕ್ಷೆಗಳು ಮುಂದುವರೆಯಲಿದ್ದು, ಸೋಂಕು ಪ್ರಕರಣಗಳೂ ಕೂಡ ಇದೇ ರೀತಿ ಹೆಚ್ಚಾಗಲಿದೆ. ಸಾರಿ, ಐಎಲ್ಐ, ಇತರೆ ಲಕ್ಷಣಗಳಿಂದ ಬಳಲುತ್ತಿರುವರಿಗೂ ಪರೀಕ್ಷೆ ನಡೆಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಹೈ ರಿಸ್ಕ್ ವಿಭಾಗದಲ್ಲಿರುವವರಿಗೂ ಪರೀಕ್ಷೆ ನಡೆಸಲಾಗುತ್ತದೆ. ಇಷ್ಟು ದಿನ 30-50 ಸಾವಿರದಲ್ಲಿದ್ದ ರ್ಯಾಂಡಮ್ ಪರೀಕ್ಷೆಯನ್ನು 1 ಲಕ್ಷಕ್ಕೆ ಹೆಚ್ಚಿಸಲಾಗುತ್ತಿದೆ. ಅಗತ್ಯಬಿದ್ದರೆ, ಪರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ. 

ಇದನ್ನೂ ಓದಿ: ರಾಜ್ಯದಲ್ಲಿ 3ನೇ ಅಲೆ ಆರ್ಭಟ: ಬೆಂಗಳೂರಿನಲ್ಲಿ 15,617 ಸೇರಿ ರಾಜ್ಯದಲ್ಲಿ 21,390 ಕೊರೋನಾ ಪ್ರಕರಣ ಪತ್ತೆ, 10 ಸಾವು!

ಮಾರುಕಟ್ಟೆ ಪ್ರದೇಶಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆ.ಆರ್​​​.ಮಾರ್ಕೆಟ್​ ಸೇರಿ ಕೇಂದ್ರ ಮಾರುಕಟ್ಟೆ ವಿಕೇಂದ್ರೀಕರಣ ಮಾಡಿ ವ್ಯವಹಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸದ್ಯಕ್ಕೆ ಅಕ್ಕ ಪಕ್ಕದ ರಸ್ತೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.  ಮಾರ್ಕೆಟ್ ಸುತ್ತ 1 ರಿಂದ ಅರ್ಧ ಕಿಮೀ ಒಳಗೆ ವಿಕೇಂದ್ರೀಕರಣ ಮಾಡಲಾಗುತ್ತದೆ.  ನ್ಯಾಷನಲ್ ಕಾಲೇಜು ಸೇರಿ ಬೇರೆ-ಬೇರೆ ಕಡೆ ವ್ಯವಸ್ಥೆ ಮಾಡಲಾಗುತ್ತದೆ. ಈ ಕುರಿತು ವರ್ತಕರ ಸಂಘಗಳೊಂದಿಗೆ ಸಮಾಲೋಚಿಸಿದ ನಂತರ ಪರಿಷ್ಕೃತ ಮಾರ್ಗಸೂಚಿಗಳನ್ನು ಸಹ ನೀಡಲಾಗುವುದು. ಅಲ್ಲದೆ, ಕೋವಿಡ್-ಸೂಕ್ತ ನಡವಳಿಕೆಯನ್ನು ಜಾರಿಗೊಳಿಸಲು ಮತ್ತು ಕಣ್ಗಾವಲು ಹೆಚ್ಚಿಸಲು ಎಲ್ಲಾ ಎಂಟು ವಲಯಗಳಲ್ಲಿ 580 ಮಾರ್ಷಲ್‌ಗಳು ಮತ್ತು 1,217 ಗೃಹ ರಕ್ಷಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.



Read more

[wpas_products keywords=”deal of the day”]