ಹೈಲೈಟ್ಸ್:
- ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ.
- ಕೇಪ್ ಟೌನ್‌ನಲ್ಲಿ ನಡೆಯುತ್ತಿರುವ ಸರಣಿ ನಿರ್ಣಾಯ ಮೂರನೇ ಟೆಸ್ಟ್ ಪಂದ್ಯ.
- ಎರಡೂ ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ಪೂಜಾರ-ರಹಾನೆ ವಿರುದ್ಧ ಕಿಡಿ.
ದಕ್ಷಿಣ ಆಫ್ರಿಕಾ ವಿರುದ್ಧದ 3 ಟೆಸ್ಟ್‌ಗಳ ಸರಣಿಯಲ್ಲಿ ನಿರಾಶೆ ಮೂಡಿಸಿರುವ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಟೀಮ್ ಇಂಡಿಯಾದಿಂದ ಹೊರಬೀಳಲಿದ್ದು, ಅವರ ಜಾಗದಲ್ಲಿ ಹನುಮ ವಿಹಾರಿ ಮತ್ತು ಶ್ರೇಯಸ್ ಅಯ್ಯರ್ ತಂಡ ಸೇರಲಿದ್ದಾರೆ ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿಯಲಾರಂಭಿಸಿದ್ದಾರೆ.
ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತನಾಡಿರುವ ಮಾಜಿ ಓಪನರ್ ಗೌತಮ್ ಗಂಭೀರ್, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಈಗ ಅವಕಾಶ ವಂಚಿತ ಬ್ಯಾಟ್ಸ್‌ಮನ್ ಹನುಮ ವಿಹಾರಿ ಅವರಿಗೆ ಮೊದಲ ಆದ್ಯತೆ ಕೊಡಬೇಕೆಂದು ತಾಕೀತು ಮಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಭೀರ್, ಮುಂದಿನ 2-3 ಸರಣಿಗಳಲ್ಲಿ ವಿಹಾರಿಗೆ ಸತತ ಅವಕಾಶ ಕೊಡಬೇಕೆಂದಿದ್ದಾರೆ.
ಪೂಜಾರ-ರಹಾನೆಗೆ ಗೇಟ್ ಪಾಸ್!, ಭಾರತ ತಂಡದಲ್ಲಿ 2 ಸ್ಥಾನ ಖಾಲಿಯಿದೆ ಎಂದ ಗವಾಸ್ಕರ್!
“ಈಗ ಹನುಮ ವಿಹಾರಿಗೆ ಮೊದಲ ಆದ್ಯತೆ ನೀಡುವ ಸಮಯ ಬಂದಾಗಿದೆ. ಅಜಿಂಕ್ಯ ರಹಾನೆಗೆ ಬೆಂಬಲ ನೀಡಿದ ಮಾದರಿಯಲ್ಲೇ ವಿಹಾರಿಗೂ ಬೆಂಬಲಿಸಬೇಕು. ಅಷ್ಟು ಸಾಧ್ಯವಾಗದೇ ಇದ್ದರೂ ಕನಿಷ್ಠ 2-3 ಸರಣಿಗಳಲ್ಲಿ ಸತತವಾಗಿ ಆಡಿಸಬೇಕು,” ಎಂದು ಗಂಭೀರ್ ಗುಡುಗಿದ್ದಾರೆ.
2018ರಿಂದ ಭಾರತ ಟೆಸ್ಟ್ ತಂಡದಲ್ಲಿ ಇರುವ ಹೈದರಾಬಾದ್ ಬ್ಯಾಟ್ಸ್‌ಮನ್ ಹನುಮ ವಿಹಾರಿ ಈವರೆಗೆ ಕೇವಲ 13 ಟೆಸ್ಟ್ ಪಂದ್ಯಗಳನ್ನು ಮಾತ್ರವೇ ಆಡಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿ 2ನೇ ಇನಿಂಗ್ಸ್‌ನಲ್ಲಿ ಜವಾಬ್ದಾರಿಯುತ ಅಜೇಯ 40 ರನ್‌ಗಳ ಕೊಡುಗೆ ಕೊಟ್ಟಿದ್ದರು. ಆದರೆ, 3ನೇ ಟೆಸ್ಟ್‌ಗೆ ವಿರಾಟ್ ಕೊಹ್ಲಿ ಆಡುವ ಹನ್ನೊಂದರ ಬಳಗ ಸೇರಿದಾಗ ವಿಹಾರಿ ಹೊರಗುಳಿಯಬೇಕಾಯಿತು. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ರಹಾನೆಗೆ ಮತ್ತೊಂದು ಅವಕಾಶ ಕೊಟ್ಟಿತ್ತು.
ಇನ್ನು ಕಳೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಡಿದ್ದ ಶ್ರೇಯಸ್ ಅಯ್ಯರ್ ಮೊದಲ ಇನಿಂಗ್ಸ್‌ನಲ್ಲಿ ಶತಕ ಮತ್ತು 2ನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಶ್ರೇಯಸ್‌ಗೆ ಅವಕಾಶ ಸಿಗದೇ ಹೋಯಿತು.
‘ಈ ಇಬ್ಬರನ್ನು ಮುಲಾಜಿಲ್ಲದೆ ಕಿತ್ತು ಹಾಕಿ’ ಪೂಜಾರ-ರಹಾನೆ ವಿರುದ್ಧ ನೆಟ್ಟಿಗರು ಕಿಡಿ!
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆ.25ರಂದು ಆರಂಭವಾಗಲಿದೆ. ಬಳಿಕ ಎರಡನೇ ಟೆಸ್ಟ್ ಪಂದ್ಯ ಮಾರ್ಚ್ 5ರಂದು ಮೊಹಾಲಿಯಲ್ಲಿ ಆರಂಭವಾಗಲಿದೆ. ಬಳಿಕ ಭಾರತ-ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಕೂಡ ನಡೆಯಲಿದೆ.
ಕೇಪ್ ಟೌನ್ ಟೆಸ್ಟ್ ಪಂದ್ಯದ ಸಂಕ್ಷಿಪ್ತ ಸ್ಕೋರ್ (ಭಾರತದ 2ನೇ ಇನಿಂಗ್ಸ್ ಅಂತ್ಯಕ್ಕೆ)
ಭಾರತ: ಮೊದಲ ಇನಿಂಗ್ಸ್ 77.3 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲ್‌ಔಟ್ (ಕೆಎಲ್ ರಾಹುಲ್ 12, ಮಯಾಂಕ್ ಅಗರ್ವಾಲ್ 15, ಚೇತೇಶ್ವರ್ ಪೂಜಾರ 43, ವಿರಾಟ್ ಕೊಹ್ಲಿ 79, ರಿಷಭ್ ಪಂತ್ 27; ಕಗಿಸೊ ರಬಾಡ 73ಕ್ಕೆ 4, ಮಾರ್ಕೊ ಯೆನ್ಸನ್ 55ಕ್ಕೆ 3, ಡುವಾನ್ ಓಲಿವಿಯರ್ 42ಕ್ಕೆ 1, ಕೇಶವ್ ಮಹಾರಾಜ್ 14ಕ್ಕೆ 1, ಲುಂಗಿ ಎನ್ಗಿಡಿ 33ಕ್ಕೆ 1).
ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್ 76.3 ಓವರ್‌ಗಳಲ್ಲಿ 210 ರನ್‌ಗಳಿಗೆ ಆಲ್‌ಔಟ್ (ಕೇಶವ್ ಮಹಾರಾಜ್ 25, ಕೀಗನ್ ಪೀಟರ್ಸನ್ 72, ವ್ಯಾನ್ ಡೆರ್ ಡುಸೆನ್ 21, ತೆಂಬಾ ಬವೂಮ 28; ಜಸ್‌ಪ್ರೀತ್ ಬುಮ್ರಾ 42ಕ್ಕೆ 5, ಉಮೇಶ್ ಯಾದವ್ 64ಕ್ಕೆ 2, ಮೊಹಮ್ಮದ್ ಶಮಿ 39ಕ್ಕೆ 2).
ಭಾರತ: ಎರಡನೇ ಇನಿಂಗ್ಸ್ 67.3 ಓವರ್‌ಗಳಲ್ಲಿ 198 ರನ್‌ಗಳಿಗೆ ಆಲ್‌ಔಟ್ (ವಿರಾಟ್ ಕೊಹ್ಲಿ 29, ರಿಷಭ್ ಪಂತ್ ಅಜೇಯ 100; ಮಾರ್ಕೊ ಯೆನ್ಸನ್ 36ಕ್ಕೆ 4, ಲುಂಗಿ ಎನ್ಗಿಡಿ 21ಕ್ಕೆ 3, ಕಗಿಸೊ ರಬಾಡ 51ಕ್ಕೆ 3).
Read more
[wpas_products keywords=”deal of the day sale today offer all”]