ಹೈಲೈಟ್ಸ್:
- ರಾಕಿ ಭಾಯ್ ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’
- ಏಪ್ರಿಲ್ 14ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ ‘ಕೆಜಿಎಫ್ 2’
- ಕೆಜಿಎಫ್ 2ರಲ್ಲಿ ಅಧೀರ ಪಾತ್ರ ಮಾಡಿರುವ ನಟ ಸಂಜಯ್ ದತ್
ಬಾಡಿ ಡಬಲ್‌ಗೆ ಒಪ್ಪಿರಲಿಲ್ಲ ಸಂಜಯ್!
ಸಾಮಾನ್ಯವಾಗಿ ರಿಸ್ಕ್ ಇರುವ ಆ್ಯಕ್ಷನ್ ಸನ್ನಿವೇಶಗಳಲ್ಲಿ ನಟರ ಬದಲು ಡ್ಯೂಪ್‌ಗಳನ್ನು ಬಳಸಲಾಗುತ್ತದೆ. ಅಂಥದ್ದೊಂದು ಸಲಹೆಯನ್ನು ‘ಕೆಜಿಎಫ್’ ಟೀಮ್ ಸಂಜಯ್‌ಗೆ ನೀಡಿತ್ತಂತೆ. ‘ಈ ಸಿನಿಮಾದಲ್ಲಿ ದೊಡ್ಡಮಟ್ಟದ ಆ್ಯಕ್ಷನ್ ಸೀಕ್ವೆನ್ಸ್‌ಗಳಿವೆ. ಮೊದಲ ಭಾಗ ದೊಡ್ಡ ಹಿಟ್ ಆಗಿರುವುದರಿಂದ ಪಾರ್ಟ್ 2 ಅನ್ನು ಇನ್ನೂ ಅದ್ಭುತವಾಗಿ ನಿರ್ಮಾಣ ಮಾಡುವ ಉದ್ದೇಶ ಚಿತ್ರತಂಡದ್ದಾಗಿತ್ತು. ಆದರೆ ಸಂಜಯ್ ದತ್ ಬಾಡಿ ಡಬಲ್ ಮಾಡದೆಯೇ (ಡ್ಯೂಪ್ ಇಲ್ಲದೇ) ಶೂಟಿಂಗ್ ಮಾಡುವುದಾಗಿ ನಿರ್ಧಾರ ಮಾಡಿದ್ದರಂತೆ. ಚಿತ್ರತಂಡ ಮಾತ್ರ ಈ ನಿರ್ಧಾರವನ್ನು ಒಪ್ಪಿರಲಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಅವರ ನಿರ್ಧಾರವನ್ನು ತಡೆಯುವ ಪ್ರಯತ್ನ ಮಾಡಿತ್ತು. ಆದರೆ, ಆ್ಯಕ್ಷನ್ ಸೀನ್‌ಗಳ ಚಿತ್ರೀಕರಣವನ್ನು ತಾನು ಮಾಡದಿದ್ದರೆ, ಅಧೀರನ ಪಾತ್ರ ಗುಣಮಟ್ಟ ಕಳೆದುಕೊಳ್ಳುತ್ತದೆ ಎಂದು ಸಂಜಯ್ ದತ್ ಭಾವಿಸಿದ್ದರು’ ಎಂಬುದು ಮೂಲಗಳ ಮಾಹಿತಿ.
ಸಂಜಯ್ ದತ್ ಅವರು ಕ್ಯಾನ್ಸರ್‌ನಿಂದಾಗಿ ಒಂದಷ್ಟು ದಿನ ಬ್ರೇಕ್ ತೆಗೆದುಕೊಂಡಿದ್ದರು. ಅವರು ಗುಣವಾಗುವವರೆಗೂ ಕಾದಿದ್ದು, ಆ ಬಳಿಕ ಸಂಜಯ್ ಮತ್ತು ಯಶ್ ನಡುವಿನ ಫೈಟಿಂಗ್ ದೃಶ್ಯಗಳನ್ನು ಹೈದರಾಬಾದ್‌ನಲ್ಲಿ ಸೆರೆ ಹಿಡಿಯಲಾಗಿತ್ತು. ಇನ್ನು ಸಂಜಯ್ ಹುಟ್ಟುಹಬ್ಬದಂದು ಸ್ಪೆಷಲ್ ಪೋಸ್ಟರ್‌ವೊಂದನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಆ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿದ್ದ ನಿರ್ದೇಶಕ ಪ್ರಶಾಂತ್ ನೀಲ್, ‘ಯುದ್ಧ ಇರುವುದು ಪ್ರಗತಿಗಾಗಿ. ನನ್ನ ಈ ಮಾತನ್ನು ರಣಹದ್ದುಗಳು ಕೂಡ ಒಪ್ಪಿಕೊಳ್ಳುತ್ತವೆ..’ ಎಂದು ಬರೆದುಕೊಂಡಿದ್ದರು. ಅದು ಅಧೀರ ಪಾತ್ರದ ವ್ಯಾಖ್ಯಾನ ಎಂದೇ ಹೇಳಬಹುದು.
ಯಶ್ ಬರ್ತ್‌ಡೇ; ಅಭಿಮಾನಿಗಳಲ್ಲಿ ‘ರಾಕಿ ಭಾಯ್’ ಪ್ರೀತಿಯಿಂದ ಮಾಡಿದ ಮನವಿ ಏನು?
ಒಟ್ಟಾರೆಯಾಗಿ ತೆರೆಮೇಲೆ ‘ರಾಕಿ ಭಾಯ್’ ಯಶ್ ಮತ್ತು ಅಧೀರ ಸಂಜಯ್ ದತ್ ಕಾದಾಡುವ ದೃಶ್ಯಗಳನ್ನು ನೋಡುವುದಕ್ಕೆ ಸಿನಿಪ್ರಿಯರಂತೂ ಕಾತರದಿಂದ ಕಾದಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಈ ಸಿನಿಮಾಕ್ಕೆ ರವಿ ಬಸ್ರೂರ್ ಸಂಗೀತ ನೀರ್ದೇಶನ ಮಾಡಿದ್ದಾರೆ. ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ರವೀನಾ ಟಂಡನ್, ರಮೀಕಾ ಸೇನ್ ಎಂಬ ಪ್ರಧಾನ ಮಂತ್ರಿ ಪಾತ್ರದಲ್ಲಿ ನಟಿಸಿದ್ದಾರೆ. ಐದು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ.
‘KGF-2’ ಖಳನಾಯಕ ‘ಅಧೀರ’ನ ಹೊಸ ಪೋಸ್ಟರ್ ರಿಲೀಸ್; ಫ್ಯಾನ್ಸ್‌ಗೆ ಥ್ರಿಲ್ ನೀಡಿದ ಸಂಜು!
Read more
[wpas_products keywords=”deal of the day party wear dress for women stylish indian”]