Karnataka news paper

ದಕ್ಷಿಣ ಕನ್ನಡದಲ್ಲಿ ವೀಕೆಂಡ್ ಕರ್ಫ್ಯೂನಲ್ಲಿ ಮದುವೆ, ಹರಕೆ ಸೇವೆಗಳಿಗೆ ಮಾತ್ರ ಅವಕಾಶ


ಮಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಒಂದು ವಾರದ ಹಿಂದೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದ್ದು ಈ ವಾರಾಂತ್ಯದಲ್ಲೂ ಜ. 14ರ ರಾತ್ರಿಯಿಂದ ಜ. 17ರ ಬೆಳಗ್ಗಿನವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.

ವೀಕೆಂಡ್ ಕರ್ಫ್ಯೂ ಸಂಬಂಧಿಸಿದಂತೆ ‘ವಿಜಯ ಕರ್ನಾಟಕ’ದ ಜತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿದ್ದು, ಸೀಮಿತ ಜನರನ್ನು ಸೇರಿಸಿ ಮದುವೆ (ಒಳಾಂಗಣ 100, ಹೊರಾಂಗಣ 200), ಹರಕೆ ಸೇವೆಗಳಾದ ಯಕ್ಷಗಾನ, ದೇವ-ದೈವಾರಾಧನೆ ಸೇರಿದಂತೆ ಪೂರ್ವ ನಿಗದಿತ ಧಾರ್ಮಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಇನ್ನುಳಿದ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ಇದನ್ನು ಹೊರತುಪಡಿಸಿ ಯಾವುದೇ ಖಾಸಗಿ, ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸುವಂತಿಲ್ಲ ಎಂದು ತಿಳಿಸಿದ್ಧಾರೆ.

ದಕ್ಷಿಣ ಕನ್ನಡದಲ್ಲಿ ಕೊರೊನಾ ಪಾಸಿಟಿವಿಟಿ ದಿಢೀರ್ ಏರಿಕೆ..! ಆರೋಗ್ಯ ಇಲಾಖೆಗೆ ಸವಾಲು..
ದೇವಸ್ಥಾನಗಳು ಬಂದ್

ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ದೇವಾಲಯ, ಚರ್ಚ್, ಮಸೀದಿಗಳಲ್ಲಿ ವೀಕೆಂಡ್ ಕರ್ಫ್ಯೂ ವೇಳೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಅರ್ಚಕರು, ಸೀಮಿತ ಸಂಖ್ಯೆಯ ಸಿಬ್ಬಂದಿ ನಿತ್ಯ ಪೂಜೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ದಕ್ಷಿಣ ಕನ್ನಡದಲ್ಲಿ ವೀಕೆಂಡ್‌ನಲ್ಲಿ ಏನಿದೆ? ಏನಿರಲ್ಲ

* ಸೀಮಿತ ಜನರನ್ನು ಸೇರಿಸಿ ಮದುವೆ, ಹರಕೆ ಸೇವೆಗಳಿಗೆ ಇದೆ ಅವಕಾಶ
* ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲಿ ಶಾಲಾ – ಕಾಲೇಜುಗಳು ಬಂದ್ ಆಗಿರಲಿವೆ.
* ಪ್ರಯಾಣಿಕರ ಸ್ಪಂದನೆಗೆ ತಕ್ಕಂತೆ ಬಸ್‌ಗಳು ಓಡಾಟ ನಡೆಸಲಿವೆ.
* ದೂರದ ಊರುಗಳಿಗೆ ಬಸ್, ರೈಲು ಅಥವಾ ವಿಮಾನದ ಮೂಲಕ ಪ್ರಯಾಣಿಸಲು ಇರುವವರು ಟಿಕೆಟ್‌ನೊಂದಿಗೆ ವೀಕೆಂಡ್ ಕರ್ಫ್ಯೂ ಸಂದರ್ಭ ಸಂಚರಿಸಲು ಅವಕಾಶವಿದೆ.
* ದಿನಸಿ, ಹಾಲು, ಔಷಧ ಅಂಗಡಿಗಳು ವೀಕೆಂಡ್ ಕರ್ಫ್ಯೂ ಸಂದರ್ಭ ತೆರೆದಿರುತ್ತವೆ.
* ಖಾಸಗಿ, ಸಾರ್ವಜನಿಕ ಸಭೆ ಸಮಾರಂಭ, ಕಾರ್ಯಕ್ರಮಗಳಿಗೆ ನಿರ್ಬಂಧ



Read more

[wpas_products keywords=”deal of the day sale today offer all”]