The New Indian Express
ಲಂಡನ್: ಗಾಳಿಯಲ್ಲಿ ಕೊರೊನಾ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವ ಸಾಮರ್ಥ್ಯವನ್ನು ಬೇಗನೆ ಕಳೆದುಕೊಳ್ಳುತ್ತದೆ ಎಂದು ನೂತನ ಅಧ್ಯಯನ ವರದಿ ತಿಳಿಸಿದೆ. ಗಾಳಿಯಲ್ಲಿ 20 ನಿಮಿಷಗಳಿಗೂ ಹೆಚ್ಚು ಕಾಲ ಇದ್ದರೆ ಶೇ.90ರಷ್ಟು ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಎನ್ನುವುದನ್ನು ವರದಿ ಬಹಿರಂಗ ಪಡಿಸಿದೆ.
ಇದನ್ನೂ ಓದಿ: ಟಿ-ಸೆಲ್ ಶೀಲ್ಡ್: ಶೀತ, ಕೆಮ್ಮು ಬಂದರೆ ಓಮಿಕ್ರಾನ್ ಎಂಬ ಭಯ ಪಡಬೇಡಿ: ಕೋವಿಡ್-19 ವಿರುದ್ಧ ಹೋರಾಡಲು ಅವೇ ನಿಮಗೆ ಆಯುಧವಾಗಬಹುದು!
ಗಾಳಿಯಲ್ಲಿ ಮೊದಲ 5 ನಿಮಿಷಗಳಲ್ಲಿಯೇ ಹೆಚ್ಚಿನ ಶಕ್ತಿಯನ್ನು ಕೊರೊನಾ ವೈರಾಣು ಕಳೆದುಕೊಳ್ಳುತ್ತದೆ. ವೆಂಟಿಲೇಷನ್ ಚೆನ್ನಾಗಿದ್ದ ಸ್ಥಳದಲ್ಲಿ ಕೊರೊನಾ ವೈರಾಣು ಹರಡುವ ಸಾಧ್ಯತ್ರೆ ತುಂಬಾ ಕಡಿಮೆ, ಮುಚ್ಚಿದ್ದ ಸ್ಥಳಗಳಲ್ಲಿ ಕೊರೊನಾ ವೈರಾಣು ಬೇಗನೆ ಹರಡುತ್ತದೆ ಎನ್ನುವ ಸಂಗತಿಯನ್ನು ಹೊಸ ಅಧ್ಯಯನ ದೃಢಪಡಿಸಿದೆ.
ಇದನ್ನೂ ಓದಿ: ಕೋವಿಡ್-19 ನಿಯಂತ್ರಣ ಮಾರ್ಗಸೂಚಿ, ನಿರ್ಬಂಧಗಳು ತಿಂಗಳಾಂತ್ಯದವರೆಗೂ ವಿಸ್ತರಣೆ: ಸಿಎಂ ಸಭೆಯ ಮುಖ್ಯಾಂಶಗಳು ಇಂತಿವೆ…
ಇಂಗ್ಲೆಂಡಿನ ಬ್ರಿಸ್ಟಾಲ್ ವಿವಿ ಸಂಶೋಧಕರು ಈ ಅಧ್ಯಯನದ ರೂವಾರಿಗಳು. ಗಾಳಿಯಲ್ಲಿ ಕೊರೊನಾ ವೈರಾಣು ಎಷ್ಟು ಕಾಲ ಕಾರ್ಯಶೀಲವಾಗಿರುತ್ತದೆ ಎನ್ನುವ ಸಂಶೋಧನೆಯಲ್ಲಿ ಸಂಶೋಧಕರ ತಂಡ ನಿರತವಾಗಿತ್ತು.
ಇದನ್ನೂ ಓದಿ: ಸೋಂಕು ಪತ್ತೆಯಾದ 90 ದಿನಗಳ ಬಳಿಕವೇ ಕೋವಿಡ್ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು: ಪರಿಣತರ ಸಲಹೆ
Read more
[wpas_products keywords=”deal of the day”]