Karnataka news paper

ಇಂಡಿಯಾ ಓಪನ್ 2022: ಕಿಡಂಬಿ ಶ್ರೀಕಾಂತ್ ಸೇರಿ ಏಳು ಬ್ಯಾಡ್ಮಿಂಟನ್ ಆಟಗಾರರಿಗೆ ಕೋವಿಡ್ ಪಾಸಿಟಿವ್


Online Desk

ನವದೆಹಲಿ: ಯೋನೆಕ್ಸ್- ಸನ್‌ರೈಸ್ ಇಂಡಿಯಾ ಓಪನ್ 2022 ರಲ್ಲಿ ಪಾಲ್ಗೊಳ್ಳಲಿರುವ ಏಳು ಬ್ಯಾಡ್ಮಿಂಟನ್ ಆಟಗಾರರಿಗೆ ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದಿದೆ. 

ಸೋಂಕು ದೃಢಪಟ್ಟವರಲ್ಲಿ ಕಿಡಂಬಿ ಶ್ರೀಕಾಂತ್, ಅಶ್ವಿನಿ ಪೊನಪ್ಪ, ರಿತಿಕಾ ರಾಹುಲ್ ಠಾಕ್ರೆ, ಟ್ರೇಸಾ ಜಾಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಅಮನ್ ಸಿಂಗ್ ಮತ್ತು ಖುಷಿ ಗುಪ್ತಾ ಸೇರಿದ್ದಾರೆ.

ಕೋವಿಡ್‌ -19 ಪಾಸಿಟಿವ್‌ ಎಂದು ತಿಳಿದು ಬಂದ ನಂತರ ಇಂಡಿಯಾ ಓಪನ್‌ ಟೂರ್ನಿಯಿಂದ ಏಳು ಮಂದಿ ಆಟಗಾರರನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್(ಬಿಡಬ್ಲ್ಯೂಎಫ್) ಹೇಳಿಕೆಯಲ್ಲಿಎಂದು ತಿಳಿಸಿದೆ.



Read more…

[wpas_products keywords=”deal of the day sports items”]