
ಹೌದು, ಫ್ಲಿಪ್‌ಕಾರ್ಟ್ ತನ್ನ ಬಿಗ್ ಸೇವಿಂಗ್ ಡೇಸ್ ಸೇಲ್ ದಿನಾಂಕವನ್ನು ಘೋಷಿಸಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ ಮಾತ್ರವಲ್ಲದೆ ಕ್ಯಾಮೆರಾಗಳು, ಸ್ಮಾರ್ಟ್ ವಾಚ್‌ಗಳು ಮತ್ತು ಟ್ರೂಲಿ ವಾಯರ್‌ಲೆಸ್ ಸ್ಟಿರಿಯೊ ಇಯರ್‌ಬಡ್ಸ್‌ಗಳ ಮೇಲೂ ಕೂಡ ಡಿಸ್ಕೌಂಟ್ ದೊರೆಯಲಿದೆ. ಇದಲ್ಲದೆ ಗೃಹೋಪಯೋಗಿ ಉಪಕರಣಗಳ ಮೇಲೆ ರಿಯಾಯಿತಿಗಳನ್ನು ನೀಡುವುದಾಗಿ ಹೇಳಿಕೊಂಡಿದೆ. ಇನ್ನು ಹೆಚ್ಚುವರಿಯಾಗಿ ಹಲವಾರು ಉತ್ಪನ್ನಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ಒದಗಿಸಲು ICICI ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಒದಿರಿ.

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿಯೆ ಲೈವ್ ಆಗಲಿದೆ. ಸದ್ಯ ಫ್ಲಿಪ್‌ಕಾರ್ಟ್ ತನ್ನ ಮಾರಾಟದ ಆರಂಭಿಕ ಪ್ರಾರಂಭವನ್ನು ಪಡೆಯಲು ಜನವರಿ 13-15 ರ ನಡುವೆ ಕರ್ಟನ್ ರೈಸ್ ಡೀಲ್‌ಗಳನ್ನು ಹೋಸ್ಟ್ ಮಾಡಲು ಪ್ರಾರಂಭಿಸಿದೆ. ಈಗಾಗಲೇ ಮೀಸಲಾದ ವೆಬ್‌ಪೇಜ್ ಮೂಲಕ, ಆಪಲ್, ರಿಯಲ್‌ಮಿ, ಪೊಕೊ ಮತ್ತು ಸ್ಯಾಮ್‌ಸಂಗ್ ಸೇರಿದಂತೆ ಅನೇಕ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಡೀಬಿಗ್ ಲ್‌ಗಳು ಇರುವುದಾಗಿ ಘೋಷಿಸಿದೆ.

ಇನ್ನು ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿಗಳನ್ನು ನೀಡಲಿದೆ. ಸ್ಮಾರ್ಟ್ ವಾಚ್‌ಗಳು ಮತ್ತು ಫಿಟ್‌ನೆಸ್ ಬ್ಯಾಂಡ್‌ಗಳು ಸೇರಿದಂತೆ ಸ್ಮಾರ್ಟ್ ವೇರಬಲ್‌ಗಳ ಮೇಲೆ 60% ರಷ್ಟು ರಿಯಾಯಿತಿ ನೀಡಲಿದೆ ಎನ್ನಲಾಗಿದೆ. ಜೊತೆಗೆ ಲ್ಯಾಪ್‌ಟಾಪ್‌ಗಳ ಮೇಲೆ 40% ರಿಯಾಯಿತಿ ದೊರೆಯಲಿದೆ ಎಂದು ಘೋಷಿಸಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ಸ್ಮಾರ್ಟ್ ಟಿವಿಗಳು ಮತ್ತು ಗೃಹೋಪಯೋಗಿ ಉಪಕರಣಗಳ ಮೇಲೆ 75% ರಿಯಾಯಿತಿಗಳನ್ನು ನೀಡುವುದಾಗಿ ವೆಬ್‌ಪೇಜ್‌ನಲ್ಲಿ ಹೇಳಲಾಗಿದೆ.

ಇದಲ್ಲದೆ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಬ್ಲೌಪುಂಕ್ಟ್, ಕೊಡಕ್, ಥಾಮ್ಸನ್ ಕಂಪೆನಿಗಳು ತಮ್ಮ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ LED ಟಿವಿಗಳ ಮೇಲೆ ರಿಯಾಯಿತಿಗಳನ್ನು ಪ್ರತ್ಯೇಕವಾಗಿ ಘೋಷಿಸಿವೆ. ಅಂತೆಯೇ ಇನ್ಫಿನಿಕ್ಸ್ ಸೇರಿದಂತೆ ಅನೇಖ ಸ್ಮಾರ್ಟ್‌ಫೋನ್ ಮಾರಾಟಗಾರರು ತಮ್ಮ ಸ್ಮಾರ್ಟ್‌ಫೋನ್‌ಗಳ ಮೇಲೆ ಅನೇಕ ರಿಯಾಯಿತಿಗಳನ್ನು ಘೋಷಿಸಿವೆ. ಡೀಲ್ಸ್ ಮತ್ತು ಆಫರ್‌ಗಳ ಜೊತೆಗೆ, ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳು ಮತ್ತು ಇಎಂಐ ವಹಿವಾಟುಗಳನ್ನು ಬಳಸಿಕೊಂಡು ಖರೀದಿ ಮಾಡುವ ಗ್ರಾಹಕರು 10% ಇನ್ಸಟಂಟ್ ಡಿಸ್ಕೌಂಟ್ ನೀಡುತ್ತಿದೆ. ಅಲ್ಲದೆ ನೋ ಕಾಸ್ಟ್ EMI ಆಯ್ಕೆಗಳು ಕೂಡ ದೊರೆಯಲಿದೆ.
Read more…
[wpas_products keywords=”smartphones under 15000 6gb ram”]