Karnataka news paper

ಬಿಜೆಪಿಗೆ ಸಮಾಜ, ಧರ್ಮ ಒಡೆಯುವುದೊಂದೇ ಕೆಲಸ: ಸತೀಶ ಜಾರಕಿಹೊಳಿ


ಬೆಳಗಾವಿ: ‘ಬಿಜೆಪಿಯವರಿಗೆ ಸಮಾಜ, ಧರ್ಮಗಳನ್ನು ಒಡೆಯುವುದೊಂದೆ ಕೆಲಸ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.

ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಸೋಮವಾರ ಹಮ್ಮಿಕೊಂಡಿದ್ದ ‘ಸಂಘರ್ಷ ಪಾದಯಾತ್ರೆ’ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಮತಾಂತರ ನಿಷೇಧ ಕಾಯ್ದೆಯನ್ನು ಹೊಸದಾಗಿ ಯಾವ ರೀತಿ ತರುತ್ತಾರೆಂದು ಗೊತ್ತಿಲ್ಲ. ಬಿಜೆಪಿಯವರಿಗೆ ಅಭಿವೃದ್ಧಿಯಿಂದ ಗೆಲ್ಲುವ ಶಕ್ತಿಯೂ ಇಲ್ಲ; ದೂರದೃಷ್ಟಿಯೂ ಇಲ್ಲ’ ಎಂದು ಕಿಡಿಕಾರಿದರು.

‘ಬಿಜೆಪಿಯವರು ಆರು ತಿಂಗಳಿಗೊಂದು ಹೊಸ ಕಾಯ್ದೆ ತರುತ್ತಾರೆ. ಈಗಾಗಲೇ ಮತಾಂತರ ಕಾಯ್ದೆ ಜಾರಿಯಲ್ಲಿದೆ. ಮತ್ತೆ ಇದನ್ನು ಜಾರಿಗೆ ತರುವ ಅಗತ್ಯವಿಲ್ಲ. ಜನರನ್ನು ಗೊಂದಲಕ್ಕೀಡು ಮಾಡುವ ಕೆಲಸ ಮಾಡುತ್ತದೆ’ ಎಂದು ಟೀಕಿಸಿದರು.

ಓದಿ: 

‘ಕೇಂದ್ರದಲ್ಲಿ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆದುಕೊಂಡಾಗಿದೆ. ರಾಜ್ಯ ಸರ್ಕಾರವು ತೆಗೆಯಲಿ, ಬಿಡಲಿ ತನ್ನಿಂದ ತಾನೇ ಅವುಗಳು ರದ್ದಾಗುತ್ತವೆ. ಕೇಂದ್ರದಲ್ಲಿ ವಾಪಸ್ ಪಡೆದುಕೊಂಡ ಮೇಲೆ ರಾಜ್ಯದಲ್ಲಿ ಜಾರಿಗೆ ತರಲು ಯಾವುದೇ ಅಧಿಕಾರ ಇಲ್ಲ’ ಎಂದು ಪ್ರತಿಕ್ರಿಯಿಸಿದರು.



Read more from source