ಹೈಲೈಟ್ಸ್:
- ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ.
- ಕೇಪ್ ಟೌನ್‌ನಲ್ಲಿ ನಡೆಯುತ್ತಿರುವ ಸರಣಿ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯ.
- ಎರಡನೇ ಇನಿಂಗ್ಸ್‌ನಲ್ಲಿ ಮನಮೋಹಕ ಶತಕ ಬಾರಿಸಿದ ರಿಷಭ್ ಪಂತ್.
ದಕ್ಷಿಣ ಆಫ್ರಿಕಾದ ವೇಗಿಗಳ ಎದುರು ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಅಕ್ಷರಶಃ ಪರದಾಟ ನಡೆಸಿದರು. ತಂಡದ ಪರ ಎರಡನೇ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡ ನಾಯಕ ವಿರಾಟ್ ಕೊಹ್ಲಿ ತಮ್ಮ 29 ರನ್‌ಗಳ ಸಲುವಾಗಿ ಬರೋಬ್ಬರಿ 143 ಎಸೆತಗಳನ್ನು ಎದುರಿಸಿ ಶ್ರಮವಹಿಸಿದರು.
ಆದರೆ, ಲೀಲಾಜಾಲವಾಗಿ ಬ್ಯಾಟ್ ಬೀಸಿದ ರಿಷಭ್ ಪಂತ್, ಒಂದೆಡೆ ವಿಕೆಟ್‌ಗಳು ಉದುರುತ್ತಿದ್ದರೂ ತಮ್ಮ ಹೊಡಿ ಬಡಿ ಆಟ ಮುಂದುವರಿಸಿ ಟೆಸ್ಟ್ ವೃತ್ತಿಬದುಕಿನ 4ನೇ ಶತಕ ಬಾರಿಸಿದರು. 24 ವರ್ಷದ ಎಡಗೈ ಆಟಗಾರ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಶತಕ ಬಾರಿಸಿದ ಭಾರತದ ಮೊದಲ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಸಂಪಾದಿಸಿದ್ದಾರೆ.
ವಿದೇಶಿ ನೆಲದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ಮಯಾಂಕ್ ವಿಫಲ!
ಪಂತ್ ನೀಡಿದ ಈ ಮನಮೋಹಕ ಬ್ಯಾಟಿಂಗ್ ಪ್ರದರ್ಶನಕ್ಕೆ ಟೀಮ್ ಇಂಡಿಯಾದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಮಾರುಹೋಗಿದ್ದು, ಯುವ ಆಟಗಾರನ ಮೇಲೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
“ರಿಷಭ್ ಪಂತ್ ಅದ್ಭುತ ಶತಕ ಬಾರಿಸಿದ್ದಾರೆ. ಇನಿಂಗ್ಸ್‌ನಲ್ಲಿ ಭಾರತದ ಪರ ಪಂತ್ ಹೊರತಾಗಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿಯ ಸ್ಕೋರ್ ಮಾಡಿದ್ದು, ಈ ಶತಕದ ಮಹತ್ವವನ್ನು ತಿಳಿಸಿಕೊಡುತ್ತದೆ. ಏಕಾಂಗಿಯಾಗಿ ಭಾರತ ತಂಡವನ್ನು ಮೇಲೆತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈತ ಭಾರತ ತಂಡದ ದೊಡ್ಡ ಮ್ಯಾಚ್ ವಿನ್ನರ್,” ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಭಾರತ ತಂಡ ಮೂರನೇ ದಿನದಾಟದ ಭೋಜನ ವಿರಾಮಕ್ಕೆ 4 ವಿಕೆಟ್ ನಷ್ಟದಲ್ಲಿ 130 ರನ್ ಗಳಿಸಿದ್ದ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದ ಸೆಹ್ವಾಗ್, ಈ ಯುವ ಆಟಗಾರನಿಗೆ ಇದೇ ರೀತಿ ಭಯ ಮುಕ್ತವಾಗಿ ಬ್ಯಾಟ್ ಮಾಡಲು ಬಿಡಿ ಎಂದು ಟ್ವೀಟ್ ಮಾಡಿದ್ದರು. ಭೋಜನ ವಿರಾಮಕ್ಕೂ ಮುನ್ನ ಪಂತ್ ಅಜೇಯ 51 ರನ್ ಬಾರಿಸಿದ್ದರು.
ಬ್ಯಾಟಿಂಗ್ ಅಲ್ಲದೆ ಫೀಲ್ಡಿಂಗ್‌ನಲ್ಲಿಯೂ ವಿಶೇಷ ದಾಖಲೆ ಬರೆದ ಕಿಂಗ್ ಕೊಹ್ಲಿ!
“ಈ ಹುಡುಗನನ್ನು ಇದೇ ರೀತಿ ಬ್ಯಾಟ್ ಮಾಡಲು ಬಿಡಿ. ಈತ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ಬಹುದೊಡ್ಡ ಮ್ಯಾಚ್ ವಿನ್ನರ್,” ಎಂದು ಸೆಹ್ವಾಗ್ ಗುಣಗಾನ ಮಾಡಿದ್ದರು. 139 ಎಸೆತಗಳನ್ನು ಎದುರಿಸಿದ ಪಂತ್ 6 ಫೋರ್ ಮತ್ತು 4 ಸಿಕ್ಸರ್‌ಗಳೊಂದಿಗೆ 100 ರನ್ ಗಳಿಸಿ ಔಟಾಗದೇ ಉಳಿದರು. ಈ ಮೂಲಕ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ವಿರುದ್ಧ ಕೇಳಿ ಬಂದಿದ್ದ ಎಲ್ಲ ಟೀಕೆಗಳಿಗೆ ಅದ್ಭುತವಾಗಿ ಉತ್ತರ ಕೊಟ್ಟಿದ್ದಾರೆ.
ಕೇಪ್ ಟೌನ್ ಟೆಸ್ಟ್ ಪಂದ್ಯದ ಸಂಕ್ಷಿಪ್ತ ಸ್ಕೋರ್ (ಭಾರತದ 2ನೇ ಇನಿಂಗ್ಸ್ ಅಂತ್ಯಕ್ಕೆ)
ಭಾರತ: ಮೊದಲ ಇನಿಂಗ್ಸ್ 77.3 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲ್‌ಔಟ್ (ಕೆಎಲ್ ರಾಹುಲ್ 12, ಮಯಾಂಕ್ ಅಗರ್ವಾಲ್ 15, ಚೇತೇಶ್ವರ್ ಪೂಜಾರ 43, ವಿರಾಟ್ ಕೊಹ್ಲಿ 79, ರಿಷಭ್ ಪಂತ್ 27; ಕಗಿಸೊ ರಬಾಡ 73ಕ್ಕೆ 4, ಮಾರ್ಕೊ ಯೆನ್ಸನ್ 55ಕ್ಕೆ 3, ಡುವಾನ್ ಓಲಿವಿಯರ್ 42ಕ್ಕೆ 1, ಕೇಶವ್ ಮಹಾರಾಜ್ 14ಕ್ಕೆ 1, ಲುಂಗಿ ಎನ್ಗಿಡಿ 33ಕ್ಕೆ 1).
ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್ 76.3 ಓವರ್‌ಗಳಲ್ಲಿ 210 ರನ್‌ಗಳಿಗೆ ಆಲ್‌ಔಟ್ (ಕೇಶವ್ ಮಹಾರಾಜ್ 25, ಕೀಗನ್ ಪೀಟರ್ಸನ್ 72, ವ್ಯಾನ್ ಡೆರ್ ಡುಸೆನ್ 21, ತೆಂಬಾ ಬವೂಮ 28; ಜಸ್‌ಪ್ರೀತ್ ಬುಮ್ರಾ 42ಕ್ಕೆ 5, ಉಮೇಶ್ ಯಾದವ್ 64ಕ್ಕೆ 2, ಮೊಹಮ್ಮದ್ ಶಮಿ 39ಕ್ಕೆ 2).
ಭಾರತ: ಎರಡನೇ ಇನಿಂಗ್ಸ್ 67.3 ಓವರ್‌ಗಳಲ್ಲಿ 198 ರನ್‌ಗಳಿಗೆ ಆಲ್‌ಔಟ್ (ವಿರಾಟ್ ಕೊಹ್ಲಿ 29, ರಿಷಭ್ ಪಂತ್ ಅಜೇಯ 100; ಮಾರ್ಕೊ ಯೆನ್ಸನ್ 36ಕ್ಕೆ 4, ಲುಂಗಿ ಎನ್ಗಿಡಿ 21ಕ್ಕೆ 3, ಕಗಿಸೊ ರಬಾಡ 51ಕ್ಕೆ 3).
Read more
[wpas_products keywords=”deal of the day gym”]