ಹೈಲೈಟ್ಸ್:
- ಗೌತಮ್ ಅದಾನಿ ಬಳಿಕ ಹಸಿರು ಇಂಧನದ ಮೇಲೆ ಇದೀಗ ಮುಕೇಶ್ ಅಂಬಾನಿಯ ಹೂಡಿಕೆ
- ಈ ಕ್ಷೇತ್ರದಲ್ಲಿ 5.95 ಲಕ್ಷ ಕೋಟಿ ರೂ. (80 ಶತಕೋಟಿ ಡಾಲರ್) ಹಣ ಹೂಡಿಕೆ ಮಾಡಲು ರಿಲಯನ್ಸ್ ಇಂಡಸ್ಟ್ರೀಸ್ ಲಿ. ನಿರ್ಧಾರ
- ಈ ಸಂಬಂಧ ಗುಜರಾತ್ ಸರಕಾರದ ಜತೆ ಒಪ್ಪಂದಕ್ಕೆ ಸಹಿ ಹಾಕಿದ ರಿಲಯನ್ಸ್
- ವೈಬ್ರೆಂಟ್ ಗುಜರಾತ್ ಶೃಂಗ 2022ರ ಹೂಡಿಕೆ ಪ್ರಚಾರ ಚಟುವಟಿಕೆಯ ಭಾಗವಾಗಿ ಒಪ್ಪಂದಕ್ಕೆ ಸಹಿ
“ಈ ಯೋಜನೆಗಳು ಗುಜರಾತ್‌ನಲ್ಲಿ 10 ಲಕ್ಷ ನೇರ ಅಥವಾ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ,” ಎಂದು ವಿನಿಮಯ ಫೈಲಿಂಗ್‌ನಲ್ಲಿ ರಿಲಯನ್ಸ್ ತಿಳಿಸಿದೆ.
“ಗುಜರಾತ್ ಅನ್ನು ನಿವ್ವಳ ಶೂನ್ಯ ಮತ್ತು ಕಾರ್ಬನ್ ಮುಕ್ತ ಮಾಡಲು, ಮುಂದಿನ 10 ರಿಂದ 15 ವರ್ಷಗಳಲ್ಲಿ ರಾಜ್ಯದಲ್ಲಿ 5 ಲಕ್ಷ ಕೋಟಿ ಹೂಡಿಕೆ ಮಾಡಲು ರಿಲಯನ್ಸ್ ಪ್ರಸ್ತಾಪಿಸಿದೆ. 100 ಗಿಗಾವ್ಯಾಟ್ ನವೀಕರಿಸಬಹುದಾದ ವಿದ್ಯುತ್ ಸ್ಥಾವರ ಮತ್ತು ಗ್ರೀನ್ ಹೈಡ್ರೋಜನ್ ಇಕೋಸಿಸ್ಟಂ ಅಭಿವೃದ್ಧಿಪಡಿಸಲು ಕಂಪನಿಯು ಈ ಮೊತ್ತದ ಹಣ ಹೂಡಿಕೆ ಮಾಡಲಿದೆ,” ಎಂದು ಸಂಸ್ಥೆ ತಿಳಿಸಿದೆ.
ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಸ್‌ಎಂಇ) ಸಹಾಯ ಮಾಡುವ ಪರಿಸರ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸುವುದಾಗಿ ರಿಲಯನ್ಸ್ ಹೇಳಿದ್ದು, ನವೀಕರಿಸಬಹುದಾದ ಇಂಧನ ಮತ್ತು ಹಸಿರು ಹೈಡ್ರೋಜನ್ ಬಳಕೆ ಮಾಡುವ ಹೊಸ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳನ್ನು ಅಳವಡಿಸಿಕೊಳ್ಳಲು ಉದ್ಯಮಿಗಳನ್ನು ಉತ್ತೇಜಿಸುವುದಾಗಿ ಹೇಳಿದೆ.
ಅಷ್ಟೇ ಅಲ್ಲದೆ ಕಛ್, ಬನಸ್ಕಾಂತ ಮತ್ತು ಧೋಲೆರಾದಲ್ಲಿ 100 ಗಿಗಾ ವ್ಯಾಟ್ ನವೀಕರಿಸಬಹುದಾದ ವಿದ್ಯುತ್ ಯೋಜನೆಗಳಿಗಾಗಿ ಭೂಮಿಯನ್ನು ಶೋಧಿಸುವ ಪ್ರಕ್ರಿಯೆಯನ್ನೂ ಪ್ರಾರಂಭಿಸಿರುವುದಾಗಿಯೂ ರಿಲಯನ್ಸ್ ಇಂಡಸ್ಟ್ರೀಸ್ ವಿವರ ನೀಡಿದೆ.
ಹೊಸ ಇಂಧನ ಉತ್ಪಾದನೆ-ಸಂಯೋಜಿತ ನವೀಕರಿಸಬಹುದಾದ ಉತ್ಪಾದನಾ ಘಟಕ ಸ್ಥಾಪಿಸಲು ಇನ್ನೂ 60,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ರಿಲಯನ್ಸ್ ಹೇಳಿದೆ.
ಇದಲ್ಲದೆ, ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಈಗಿರುವ ಯೋಜನೆಗಳು ಮತ್ತು ಹೊಸ ಉದ್ಯಮಗಳಲ್ಲಿ 25,000 ಕೋಟಿ ರೂ. ಹಣವನ್ನು ರಿಲಯನ್ಸ್ ಹೂಡಿಕೆ ಮಾಡಲಿದೆ.
ಇವೆಲ್ಲ ಅಲ್ಲದೆ ಜಿಯೋ ನೆಟ್ವರ್ಕ್‌ನ್ನು 5ಜಿಗೆ ಅಪ್‌ಗ್ರೇಡ್ ಮಾಡಲು 7,500 ಕೋಟಿ ರೂ. ಹಾಗೂ ರಿಲಯನ್ಸ್ ರಿಟೇಲ್‌ನಲ್ಲಿ 3,000 ಕೋಟಿ ರೂ. ಹೂಡಿಕೆ ಮಾಡುವುದಾಗಿಯೂ ಮುಕೇಶ್ ಅಂಬಾನಿ ಮಾಲಿಕತ್ವದ ಕಂಪನಿ ತಿಳಿಸಿದೆ.
ಇದೇ ವೇಳೆ ಬಿಎಸ್‌ಇನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ. 0.59ರಷ್ಟು ಏರಿಕೆ ಕಂಡಿದ್ದು 2,535.35 ರೂ.ಗೆ ತಲುಪಿವೆ.
Read more
[wpas_products keywords=”deal of the day sale today offer all”]