Karnataka news paper

‘ಲೂಪ್ ಲಪೆಟಾ’ ಟ್ರೈಲರ್‌: ತಾಪ್ಸಿ, ತಾಹಿರ್‌ ರಾಜ್‌ ಮಸ್ತ್‌ ಕಮಾಲ್‌…


ತಾಪ್ಸಿ ಪನ್ನು ಮತ್ತು ತಾಹಿರ್ ರಾಜ್ ಭಾಸಿನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ‘ಲೂಪ್ ಲಪೆಟಾ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. 

ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿರುವುದರಿಂದ ಚಿತ್ರದ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ. ಟ್ರೈಲರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. 

 ಈ ಸಿನಿಮಾ ಫೆಬ್ರುವರಿ 4ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ತಾಪ್ಸಿ ಕೂಡ ಚಿತ್ರದ ಟ್ರೈಲರ್‌ ಹಂಚಿಕೊಂಡಿದ್ದು, ಚಿತ್ರವನ್ನು ಡಿಜಿಟಲ್ ಮಾಧ್ಯಮದಲ್ಲಿ ಬಿಡುಗಡೆ ಮಾಡುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

‘ಹೇ ಜೋಲರ್ (jholer) ತಾಹಿರ್ ರಾಜ್ ಭಾಸಿನ್, ಈ ಶಾರ್ಟ್‌ಕಟ್‌ಗಳಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ಯಾವಾಗ ನಿಲ್ಲಿಸುತ್ತೀರಾ? ಈ ಬಾರಿ ಅವರನ್ನು ರಕ್ಷಿಸಬಹುದೇ? ಲೂಪ್ ಲಪೆಟಾಗಾಗಿ ಸಿದ್ಧವಾಗಿರಿ ಎಂದು ತಾಪ್ಸಿ ಹೇಳಿದ್ದಾರೆ.

ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ ಮತ್ತು ಎಲಿಪ್ಸಿಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಅಡಿಯಲ್ಲಿ ಆಕಾಶ್ ಭಾಟಿಯಾ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 

ಲೂಪ್ ಲಪೆಟಾ ಸಿನಿಮಾ 1998ರ ಜರ್ಮನ್‌ನ ಹಿಟ್ ಚಿತ್ರ ಟಾಮ್ ಟೈವರ್ ನಿರ್ದೇಶನದ ‘ರನ್ ಲೋಲಾ ರನ್‌’ನ ಬಾಲಿವುಡ್ ರಿಮೇಕ್‌ ಆಗಿದೆ.



Read More…Source link

[wpas_products keywords=”deal of the day party wear for men wedding shirt”]