The New Indian Express
ಲಖನೌ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಪಟ್ಟಿಯಲ್ಲಿ ಒಟ್ಟು 125 ಮಂದಿಯಿದ್ದು ಅವರಲ್ಲಿ 50 ಮಂದಿ ಮಹಿಳೆಯರಾಗಿದ್ದಾರೆ.
ಇದನ್ನೂ ಓದಿ: ಜನವರಿ 20ರೊಳಗೆ ಉತ್ತರ ಪ್ರದೇಶದ 18 ಸಚಿವರು ಯೋಗಿ ಸಂಪುಟ ತೊರೆಯಲಿದ್ದಾರೆ: ಓಂ ಪ್ರಕಾಶ್ ರಾಜ್‌ಭರ್
ದೇಶಾದ್ಯಂತ ಸಂಚಲನ ಮೂಡಿಸಿದ್ದ ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿದ್ದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಉತ್ತರಪ್ರದೇಶ: ಬಿಜೆಪಿ ತೊರೆದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ
ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಅಬ್ಯರ್ಥಿಗಳಲ್ಲಿ ಶೇ.40 ಪ್ರತಿಶತ ಮಹಿಳೆಯರಿದ್ದಾರೆ ಎಂದು ಸಂತಸದಿಂದ ಹೇಳಿಕೊಂಡರು. ಅಲ್ಲದೆ ಶೇ. 40 ಮಂದಿ ಯುವಕರಾಗಿದ್ದಾರೆ ಎಂದರು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಇತಿಹಾಸ ಸೃಷ್ಟಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಗಳು ಹೇಳಿದಂತೆ ನಾನು ಕಿಡ್ನ್ಯಾಪ್ ಆಗಿಲ್ಲ, ಸಮಾಜವಾದಿ ಪಕ್ಷ ಸೇರಲು ನಿಶ್ಚಯಿಸಿದ್ದೇನೆ: ಬಿಜೆಪಿ ಶಾಸಕ ವಿನಯ್ ಶಾಕ್ಯ
Read more
[wpas_products keywords=”deal of the day”]