ಬಾಲಿವುಡ್ ನಟ ಅಜಯ್ ದೇವಗನ್ ಶಬರಿಮಲೆ ಯಾತ್ರೆ ಕೈಗೊಂಡಿದ್ದು ಅವರು ಮಾಲಾಧಾರಿಯಾಗಿರುವ ಚಿತ್ರಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ.
ಯಾತ್ರಗೂ ಮುನ್ನ ಕಡ್ಡಾಯವಾಗಿ ಪಾಲಿಸಬೇಕಾಗಿರುವ ನಿಯಮಗಳನ್ನು ಅಜಯ್ ಪಾಲಿಸಿದ್ದಾರೆ. ಅವರು 41 ದಿನಗಳ ವ್ರತವನ್ನೂ ಪೂರೈಸಿದ್ದು, ಇದೀಗ ದೇವಸ್ಥಾನಕ್ಕೆ ತೆರಳಿದ್ದಾರೆ ಎಂದು ವರದಿಗಳು ಹೇಳಿವೆ.
ಇತ್ತೀಚೆಗೆ ಮುಂಬೈನಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ತೊಡುವ ಕಪ್ಪು ಬಣ್ಣದ ದಿರಿಸಿನಲ್ಲೇ ಅಜಯ್ ಕಾಣಿಸಿಕೊಂಡಿದ್ದರು.
ದಕ್ಷಿಣ ಭಾರತದಲ್ಲಿ ಭಕ್ತರು ಹೆಚ್ಚಾಗಿ ಮಾಲಾಧಾರಿಯಾಗಿ ಶಬರಿಮಲೆ ಯಾತ್ರೆಗೆ ಹೋಗುತ್ತಾರೆ. ಕನ್ನಡದ ನಟ ರಾಜ್‌ಕುಮಾರ್ ಸೇರಿದಂತೆ ಖ್ಯಾತ ತಾರೆಯರು ಕೂಡ ವ್ರತಾಚರಣೆ ಮಾಡಿದ್ದಾರೆ.
ಸದ್ಯ ಅಜಯ್ ದೇವಗನ್ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ‘ಗಂಗೂಬಾಯಿ ಕಾಠಿಯಾವಾಡಿ’, ‘ರನ್ವೇ 34’, ‘ಮೈದಾನ್’, ‘ಸರ್ಕಸ್’, ‘ಥ್ಯಾಂಕ್ ಗಾಡ್’ ಚಿತ್ರಗಳು ಅವರ ಕೈಯಲ್ಲಿ ಇವೆ.
Read More…Source link
[wpas_products keywords=”deal of the day party wear for men wedding shirt”]