Karnataka news paper

ಅಕ್ರಮ ಸಂಬಂಧ: ಮಗನಿಂದ ಹೊರಬಂದ ಸತ್ಯ; ಪತಿಯನ್ನೇ ಹತ್ಯೆ ಮಾಡಿದ್ದ ಪತ್ನಿ, ಆಕೆಯ ಲವರ್, ತಾಯಿಯ ಬಂಧನ


The New Indian Express

ಬೆಂಗಳೂರು: ಪತಿ ಹತ್ಯೆ ಆರೋಪದ ಮೇರೆಗೆ ಪತ್ನಿ, ಆಕೆಯ ಪ್ರಿಯತಮ ಹಾಗೂ ಆಕೆಯ ತಾಯಿಯನ್ನು ದೊಡ್ಡಬಳ್ಳಾಪುರ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ತಲೆಗೆ ಪೆಟ್ಟು ಬಿದ್ದು ತಮ್ಮ ಪತಿ ಮೃತಪಟ್ಟಿದ್ದಾರೆ ಎಂದು ಮಹಿಳೆ ಕಥೆ ಕಟ್ಟಿದ್ದಳು. ಆದಾಗ್ಯೂ, ಘಟನೆ ಬಗ್ಗೆ ಆಕೆಯ 10 ವರ್ಷದ ಪುತ್ರ ಸಂಪೂರ್ಣವಾಗಿ ವಿವರಿಸಿದ ನಂತರ ಆಕೆಯೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. 

ದೊಡ್ಡಬಳ್ಳಾಪುರದ ಕಾರೇನಹೇಳ್ಳಿ ನಿವಾಸಿ ರಾಘವೇಂದ್ರ (40) ಮೃತಪಟ್ಟವರು. ವೃತ್ತಿಯಲ್ಲಿ ನೇಕಾರರು. ಆತನ ಹೆಂಡತಿ ಶೈಲಜಾ, ಆಕೆಯ ಪ್ರಿಯತಮ ಹನುಮಂತ ಹಾಗೂ ಆಕೆಯ ತಾಯಿ ಲಕ್ಷ್ಮಿದೇವಮ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಶೈಲಜಾ ಹಾಗೂ ಹನುಮಂತ ಇಬ್ಬರು ಗಾರ್ಮೆಂಟ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. 

ಶೈಲಜಾ ಡಿಸೆಂಬರ್ 27 ರಂದು ತನ್ನ ಬಾವ ಚಂದ್ರಶೇಖರ್ ಅವರಿಗೆ ಕರೆ ಮಾಡಿ, ತಲೆಗೆ ಪೆಟ್ಟಾಗಿ ತಮ್ಮ ಪತಿ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಆಕೆಯ ಮಾತನ ನಂಬಿದ ರಾಘವೇಂದ್ರ ಕುಟುಂಬ ಸದಸ್ಯರು ಅದೇ ದಿನ ಸಂಜೆ ಅಂತ್ಯಸಂಸ್ಕಾರ ಮುಗಿಸಿರುತ್ತಾರೆ. ರಾಘವೇಂದ್ರ ಸಾವಿನ ನಂತರ ಶೈಲಜಾ ಹಾಗೂ ಆಕೆಯ ಇಬ್ಬರು ಮಕ್ಕಳು ಚಂದ್ರಶೇಖರ್ ಮನೆಗೆ ಹೋಗುತ್ತಾರೆ. ಅಲ್ಲಿ ರಾತ್ರಿ ಏನಾಯಿತು ಎಂದು ಚಂದ್ರಶೇಖರ್ ಬಾಲಕನ್ನು ಹೇಳಿದಾಗ, ನಾನು ಮಲಗಿದ್ದೆಆದರೆ, ಅಪರಿಚಿತರ ವ್ಯಕ್ತಿಯೊಬ್ಬರ ಧ್ವನಿ ಕೇಳಿಸಿದ್ದಾಗ ಆ ಬಾಲಕ ಹೇಳಿದ್ದಾನೆ. ಇದರಿಂದ ಮೃತನ ಕುಟುಂಬ ಸದಸ್ಯರಲ್ಲಿ ಅನುಮಾನ ಬಂದಿದ್ದು, ರಾಘವೇಂದ್ರ ಮನೆಯ ಸಿಸಿಟಿವಿ ಪರೀಕ್ಷಿಸಿದಾಗ ಒಬ್ಬ ವ್ಯಕ್ತಿಯ ಮನೆ ಒಳಗಡೆ ಹೋಗಿದ್ದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದರು. 

ಇದನ್ನೂ ಓದಿ: ನಗ್ನ ಚಿತ್ರ ನೀಡಿದರೆ ಮಾಡೆಲಿಂಗ್ ಚಾನ್ಸ್ ಆಸೆ ತೋರಿಸಿ ಬ್ಲಾಕ್ ಮೇಲ್ ಮಾಡಿದ ಭೂಪ ಈಗ ಅರೆಸ್ಟ್!

ನಂತರ ಶೈಲಜಾ ಪ್ರಶ್ನಿಸಿದಾಗ, ಅಲ್ಲಿ ಜಗಳ ನಡೆದು, ತಾನು ಚಪಾತಿ ಮಾಡುವ ದೊಣ್ಣೆಯಿಂದ ಹೊಡೆದಾಗ ಆತನ ಮನೆಯಿಂದ ಹೊರಬಂದಿದ್ದಾಗಿ ಹೇಳಿದ್ದಾಳೆ. ಆಕೆ ತನ್ನ ಪೋಷಕರ ಮನೆಗೆ ಬಂದಿದ್ದು, ಪತಿಯ 11ನೇ ದಿನ ಕಾರ್ಯಕ್ಕೆ ಆಗಮಿಸದಿದ್ದಾಗ ಅನುಮಾನ ಮೂಡಿದೆ. ಕುಟುಂಬ ಸದಸ್ಯರು ಮತ್ತೆ ಬಾಲಕನನ್ನು ಅವತ್ತು ರಾತ್ರಿ ಏನಾಯಿತು ಎಂದು ಪ್ರಶ್ನಿಸಿದಾಗ ಅಪರಿಚಿತ ವ್ಯಕ್ತಿಯೊಂದಿಗೆ ತನ್ನ ತಾಯಿ ಹಾಗೂ ಅಜ್ಜಿ ಸೇರಿಕೊಂಡು ತಂದೆಗೆ ಹೊಡೆದು ಸಾಯಿಸಿದ್ದಾಗಿ ಹೇಳಿದ್ದಾನೆ. ಈ ಘಟನೆಯನ್ನು ಯಾರಿಗಾದರೂ ಹೇಳಿದರೆ ಬಾಲಕನನ್ನು ಸಾಯಿಸುವುದಾಗಿ ಅಪರಿಚತ ವ್ಯಕ್ತಿ ಬೆದರಿಕೆ ಹಾಕಿದ್ದಾಗಿ ಆ ಬಾಲಕ ನಡೆದ ಎಲ್ಲಾ ಘಟನೆಯನ್ನು ವಿವರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. 

ಅದೇ ದಿನ ರಾಘವೇಂದ್ರ ವಾಸಿಸುತ್ತಿದ್ದ ಮನೆಗೆ ಕುಟುಂಬ ಸದಸ್ಯರು ಹೋಗಿ ಮನೆಯ ಬಾಗಿಲು ತೆರೆದಾಗ ಗೋಡೆ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ. ಜನರು 7 ರಂದು ದೂರು ದಾಖಲಿಸಿದ ನಂತರ ಶೈಲಜಾ, ಆಕೆಯ ತಾಯಿ ಹಾಗೂ ಲವರ್ ನನ್ನು ಬಂಧಿಸಲಾಗಿದೆ. ಅಕ್ರಮ ಸಂಬಂಧವನ್ನು ಪ್ರಶ್ನಿಸಿ ಆಗಾಗ್ಗೆ ಜಗಳ ಮಾಡುತ್ತಿದ್ದರಿಂದ ರಾಘವೇಂದ್ರನನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಪೊಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.



Read more

[wpas_products keywords=”deal of the day”]