Karnataka news paper

ಸ್ವಾತಂತ್ರ್ಯಪೂರ್ವದಲ್ಲೇ ನಶಿಸಿದೆ ಎನ್ನಲಾಗಿದ್ದ ಚಿಟ್ಟೆ ಪ್ರಭೇದ ಮಧ್ಯಪ್ರದೇಶದಲ್ಲಿ ಪತ್ತೆ: ಭಾರತೀಯ ಪರಿಸರ ವಿಜ್ಞಾನಿಗಳ ಸಾಧನೆ


The New Indian Express

ಭೂಪಾಲ್: ಸರ್ಸಿಸ್ ಬ್ಲೂ ತಳಿಯ ಚಿಟ್ಟೆ ಭೂಮಿ ಮೇಲಿಂದ ನಶಿಸಿ ಹೋಗಿದೆ ಎಂದೇ ನಂಬಲಾಗಿತ್ತು. ಆ ತಳಿಯ ಚಿಟ್ಟೆ ನಶಿಸಿದೆ ಎಂದು 80 ವರ್ಷಗಳ ಹಿಂದೆಯೇ ಅಂದರೆ 1941ರಲ್ಲಿ ಷರಾ ಬರೆಯಲಾಗಿತ್ತು. ಈಗ ಅದೇ ಚಿಟ್ಟೆಯನ್ನು ಮಧ್ಯಪ್ರದೇಶದಲ್ಲಿ ಸಂಶೋಧಕರು ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: ಉರಗ ರಕ್ಷಕ, ಅರಣ್ಯ ಅಧಿಕಾರಿ ಗೋಪಾಲ್ ನಾಯಕ್ ಕುರಿತ ಪರಿಚಯ

ಶ್ರದ್ಧಾ ಕಪ್ರೆ ಮತ್ತು ಅರ್ಜುನ್ ಶುಕ್ಲಾ ಎಂಬಿಬ್ಬರು ಭಾರತೀಯ ವಿಜ್ಞಾನಿಗಳ ತಂಡ ಈ ಅಮೋಘ ಸಂಶೋಧನೆ ಮಾಡಿದೆ. ಮಧ್ಯಪ್ರದೇಶದ ಜಬಲ್ಪುರ ಸನಿಹ ಈ ಸರ್ಸಿಸ್ ಬ್ಲೂ ಚಿಟ್ಟೆ ಪ್ರಭೇದ ಪತ್ತೆಯಾಗಿದೆ.

ಇದನ್ನೂ ಓದಿ: ಒಡಿಶಾ ನ್ಯಾಷನಲ್ ಪಾರ್ಕಿನಲ್ಲಿ ಹೊಸ ಬಿಳಿ ಮೊಸಳೆ ಮರಿ ಪತ್ತೆ: ಶ್ವೇತಾ ಎಂದು ನಾಮಕರಣ

ಪತ್ತೆಯಾಗಿರುವ ಅತ್ಯಪರೂಪದ ಈ ತಳಿಯ ಚಿಟ್ಟೆಯನ್ನು ಸಂಶೋಧಕರ ತಂಡ ಜತನದಿಂದ ಸಂರಕ್ಷಿಸಿದೆ. ಇದನ್ನು ಅಮೆರಿಕದ ಫ್ಲಾರಿಡಾ ಮ್ಯೂಸಿಯಂಗೆ ಕಳಿಸಿಕೊಡಲಾಗುವುದು. ಅಲ್ಲಿ ಸಂರಕ್ಷಿಸಿಡಲಾಗಿರುವ ಸರ್ಸಿಸ್ ಬ್ಲೂ ಚಿಟ್ಟೆಗೂ ಭಾರತದಲ್ಲಿ ಪತ್ತೆಯಾಗಿರುವ ಅದೇ ತಳಿಯ ಚಿಟ್ಟೆಗೂ ಇರುವ ಸ್ವಾಮ್ಯತೆ ಕುರಿತು ಅಧ್ಯಯನ ನಡೆಯಲಿದೆ. 

ಇದನ್ನೂ ಓದಿ: ಇಂಧನ ಬೆಲೆಯೇರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲು ಅಸಲಿ ‘ಹಾರ್ಸ್ ಪವರ್’ ಮೊರೆ ಹೋದ ಫಾರೆಸ್ಟ್ ವಾಚರ್



Read more

[wpas_products keywords=”deal of the day”]