Karnataka news paper

ಕಿರುತೆರೆಯಲ್ಲಿ ಶುರುವಾಗಲಿದೆ ‘ರಾಮಾಚಾರಿ’ ಆರ್ಭಟ: ದರ್ಬಾರ್ ಮಾಡಲಿದ್ದಾರೆ ಭಾವನಾ!


‘ರಾಮಾಚಾರಿ’ ಸೀರಿಯಲ್‌ನಲ್ಲಿ ಭಾವನಾ ರಾಮಣ್ಣ ಅವರ ಪಾತ್ರವೇನು?

‘ರಾಮಾಚಾರಿ’ ಸೀರಿಯಲ್‌ನಲ್ಲಿನ ತಮ್ಮ ಪಾತ್ರದ ಬಗ್ಗೆಯೂ ಭಾವನಾ ರಾಮಣ್ಣ ಮಾತನಾಡಿದ್ದಾರೆ. ‘’ನಾನು ಕಂಪನಿಯನ್ನು ನಡೆಸುವ ಶಕ್ತಿಶಾಲಿ, ಸೊಕ್ಕಿನ ಮಹಿಳೆಯಾಗಿ ನಟಿಸುತ್ತಿದ್ದೇನೆ. ಗುರುದತ್‌ ನನ್ನ ಪತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಾವಾಗಲೂ ತನ್ನ ಇಚ್ಛೆಗೆ ಅನುಗುಣವಾಗಿ ನಡೆಯಬೇಕೆಂದು ಬಯಸುವ ಮಹಿಳೆಯ ಪಾತ್ರವದು’’ ಎಂದು ನಟಿ ಭಾವನಾ ರಾಮಣ್ಣ ವಿವರಿಸಿದ್ದಾರೆ.

ಭಾವನಾ ರಾಮಣ್ಣಗೆ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಪ್ರಶಸ್ತಿ

ಕಿರುತೆರೆ ಮತ್ತು ಬೆಳ್ಳಿತೆರೆ ನಡುವಿನ ವ್ಯತ್ಯಾಸದ ಬಗ್ಗೆ ಭಾವನಾ ರಾಮಣ್ಣ ಮಾತು..

‘’ಕಿರುತೆರೆಯಲ್ಲಿ ಕೆಲಸದ ಸಮಯ ಹೆಚ್ಚು. ಪಾತ್ರಗಳನ್ನು ಸಹ ಹೆಚ್ಚು ಕಾಲ ವಿಸ್ತರಿಸಲಾಗುತ್ತದೆ. ಯಾಕಂದ್ರೆ, ಕನಿಷ್ಠ ಒಂದು ವರ್ಷದ ವರೆಗೆ ಧಾರಾವಾಹಿಯನ್ನು ಪ್ರಸಾರ ಮಾಡಬೇಕಾಗುತ್ತದೆ’’ ಎಂದಿದ್ದಾರೆ ನಟಿ ಭಾವನಾ ರಾಮಣ್ಣ

ಸದ್ಯ ಯಾವ ಚಿತ್ರದಲ್ಲಿ ಭಾವನಾ ರಾಮಣ್ಣ ಬಿಜಿ?

ಸದ್ಯಕ್ಕೆ ‘ರಾಮಾಚಾರಿ’ ಸೀರಿಯಲ್‌ನಲ್ಲಿ ನಟಿಸುತ್ತಿರುವ ಭಾವನಾ ರಾಮಣ್ಣ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದಲ್ಲೂ ಬಿಜಿಯಾಗಿದ್ದಾರೆ. ‘’ಸಿನಿಮಾಗಳ ವಿಷಯದಲ್ಲಿ ನಾನು ತುಂಬಾ ಚ್ಯೂಸಿಯಾಗಿದ್ದೇನೆ. ಯಾಕಂದ್ರೆ, ಪದೇ ಪದೇ ಒಂದೇ ತರಹದ ಪಾತ್ರಗಳಲ್ಲಿ ಅಭಿನಯಿಸುವುದು ನನಗೆ ಇಷ್ಟವಿಲ್ಲ. ಒನ್ಸ್ ಅಪಾನ್ ಎ ಟೈಮ್‌ ಇನ್ ಜಮಾಲಿಗುಡ್ಡ ಕಂಟೆಂಟ್ ಓರಿಯೆಂಟೆಡ್ ಪ್ರಾಜೆಕ್ಟ್. ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ನಿರ್ದೇಶಕ ಕುಶಾಲ್ ಕಥೆಯನ್ನು ಹೇಳಿದಾಗ ನನಗೆ ತುಂಬಾ ಇಷ್ಟ ಆಯ್ತು’’ ಅಂತ ನಟಿ ಭಾವನಾ ರಾಮಣ್ಣ ಹೇಳಿದ್ದಾರೆ.

‘ಕನ್ನಡತಿ’ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದ ಭಾವನಾ

ರಂಜನಿ ರಾಘವನ್, ಕಿರಣ್ ರಾಜ್, ಚಿತ್ಕಳಾ ಬಿರಾದಾರ ಅಭಿನಯಿಸುತ್ತಿರುವ ‘ಕನ್ನಡತಿ’ ಧಾರಾವಾಹಿಯಲ್ಲಿ ದೇವಿ ಪಾತ್ರದಲ್ಲಿ ಈ ಹಿಂದೆ ಭಾವನಾ ರಾಮಣ್ಣ ಕಾಣಿಸಿಕೊಂಡಿದ್ದರು.

ನಟಿ ಭಾವನಾ ರಾಮಣ್ಣ ಅಭಿನಯಿಸಿದ ಚಿತ್ರಗಳು

‘ನೀ ಮುಡಿದ ಮಲ್ಲಿಗೆ’, ‘ಚಂದ್ರಮುಖಿ ಪ್ರಾಣಸಖಿ’, ‘ದೇವೀರಿ’, ‘ದೀಪಾವಳಿ’, ‘ಕುರಿಗಳು ಸಾರ್ ಕುರಿಗಳು’, ‘ಪರ್ವ’, ‘ನಿನಗಾಗಿ’, ‘ಪ್ರೀತಿ ಪ್ರೇಮ ಪ್ರಣಯ’, ‘ಶಾಂತಿ’, ‘ಭಗವಾನ್’, ‘ಚಿಂಗಾರಿ’, ‘ಕ್ರೇಜಿಸ್ಟಾರ್’, ‘ನಿರುತ್ತರ’ ಮುಂತಾದ ಚಿತ್ರಗಳಲ್ಲಿ ಭಾವನಾ ರಾಮಣ್ಣ ಅಭಿನಯಿಸಿದ್ದಾರೆ. ಅತ್ಯುತ್ತಮ ಅಭಿನಯಕ್ಕೆ ನಟಿ ಭಾವನಾ ರಾಮಣ್ಣ ರಾಜ್ಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.



Read more

[wpas_products keywords=”deal of the day party wear dress for women stylish indian”]