Karnataka news paper

Rewind 2021: ಈ ವರ್ಷ ಸಪ್ತಪದಿ ತುಳಿದ ನಟ-ನಟಿಯರ ಪಟ್ಟಿ ಇಲ್ಲಿದೆ


ಸ್ಯಾಂಡಲ್‌ವುಡ್‌ನ ಡಾರ್ಲಿಂಗ್ ಕೃಷ್ಣ – ಮಿಲನಾ ನಾಗರಾಜ್, ನಟಿ ಪ್ರಣೀತಾ ಸುಭಾಷ್, ನಿರ್ದೇಶಕ ಮಂಸೋರೆ, ನಟ ಯಶಸ್ ಸೂರ್ಯ, ಬಾಲಿವುಡ್‌ ನಟ ವರುಣ್ ಧವನ್, ನಟ ರಾಜ್‌ಕುಮಾರ್ ರಾವ್, ನಟಿ ಯಾಮಿ ಗೌತಮ್ ಸೇರಿದಂತೆ ಅನೇಕ ಬಿಗ್ ಸ್ಕ್ರೀನ್ ಸೆಲೆಬ್ರಿಟಿಗಳು ಈ ವರ್ಷ ವೈವಾಹಿಕ ಬದುಕಿಗೆ ನಾಂದಿ ಹಾಡಿದರು. ಆ ಎಲ್ಲಾ ತಾರೆಯರ ಪಟ್ಟಿ ಇಲ್ಲಿದೆ ನೋಡಿ…

ವರುಣ್ ಧವನ್ – ನತಾಶಾ ದಲಾಲ್

ಬಾಲಿವುಡ್ ನಟ ವರುಣ್ ಧವನ್ ಹಾಗೂ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಮದುವೆ ಈ ವರ್ಷದ ಆರಂಭದಲ್ಲಿ ಅಲಿಬಾಗ್‌ನ ಐಷಾರಾಮಿ ‘ದಿ ಮ್ಯಾನ್ಶನ್‌’ ಹೋಟೆಲ್‌ನಲ್ಲಿ ನಡೆಯಿತು. ಹಿಂದು ಸಂಪ್ರದಾಯದಂತೆ ವರುಣ್ ಧವನ್ ಹಾಗೂ ನತಾಶಾ ದಲಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ವರುಣ್ ಧವನ್, ನತಾಶಾ ದಲಾಲ್!

ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್

ನಟ ‘ಡಾರ್ಲಿಂಗ್’ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರ ವಿವಾಹ ಮಹೋತ್ಸವ ಈ ವರ್ಷದ ಫೆಬ್ರವರಿ 14 ರಂದು ನಡೆಯಿತು. ಆರು ವರ್ಷಗಳ ಕಾಲ ಪ್ರೀತಿಸಿದ ಕೃಷ್ಣ ಹಾಗೂ ಮಿಲನ ನಾಗರಾಜ್ ಈ ವರ್ಷ ಹೊಸ ಬಾಳಿಗೆ ನಾಂದಿ ಹಾಡಿದರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್!

ಜ್ವಾಲಾ ಗುಟ್ಟಾ – ವಿಷ್ಣು ವಿಶಾಲ್

ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಹಾಗೂ ತಮಿಳು ನಟ ವಿಷ್ಣು ವಿಶಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದೇ ವರ್ಷ. ಏಪ್ರಿಲ್ ತಿಂಗಳಿನಲ್ಲಿ ಹೈದರಾಬಾದ್‌ನಲ್ಲಿ ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ವಿವಾಹ ಮಹೋತ್ಸವ ಜರುಗಿತು. ಶಾಸ್ತ್ರೋಕ್ತವಾಗಿ ವೈವಾಹಿಕ ಬದುಕಿಗೆ ಜ್ವಾಲಾ ಗುಟ್ಟಾ ಹಾಗೂ ವಿಷ್ಣು ವಿಶಾಲ್ ಆರಂಭಿಸಿದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ-ನಟ ವಿಷ್ಣು ವಿಶಾಲ್

ನಟ ಶ್ರೀರಾಮ್

ಕಿರುತೆರೆ ಹಾಗೂ ಬೆಳ್ಳಿಪರದೆ ಮೇಲೆ ಮಿಂಚಿರುವ ನಟ ಶ್ರೀರಾಮ್ ಅವರ ಮದುವೆ ಈ ವರ್ಷವೇ ಜರುಗಿತು. ಸುಪ್ರಿಯಾ ಎಂಬುವರ ಜೊತೆಗೆ ಶ್ರೀರಾಮ್ ವಿವಾಹ ಮಹೋತ್ಸವ ನಡೆಯಿತು. ನಟ ಶ್ರೀರಾಮ್ ಹಾಗೂ ಸುಪ್ರಿಯಾ ಮದುವೆಗೆ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರು ಸಾಕ್ಷಿಯಾಗಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟ ಶ್ರೀರಾಮ್

ಶ್ರೀಹರ್ಷ

ಕನ್ನಡ ಕಿರುತೆರೆಯ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ‘ಸರಿಗಮಪ’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿ, ಜನರ ಮನೆ ಮನ ಗೆದ್ದಿದ್ದ ಶ್ರೀಹರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶೃಂಗೇರಿ ಮೂಲದ ಗೌತಮಿ ಎಂಬುವರನ್ನು ಶ್ರೀಹರ್ಷ ಮದುವೆಯಾದರು.

ಹಸೆಮಣೆ ಏರಿದ ‘ಸರಿಗಮಪ’ ಖ್ಯಾತಿಯ ಗಾಯಕ ಶ್ರೀಹರ್ಷ

ಯಾಮಿ ಗೌತಮ್

ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನಲ್ಲಿ ಮಿಂಚಿರುವ ನಟಿ ಯಾಮಿ ಗೌತಮ್ ಕೂಡ ಈ ವರ್ಷವೇ ವಿವಾಹ ಮಾಡಿಕೊಂಡರು. ನಿರ್ದೇಶಕ ಆದಿತ್ಯ ಅವರನ್ನು ಪ್ರೀತಿಸಿ, ಸಾಂಪ್ರದಾಯಿಕವಾಗಿ ನಟಿ ಯಾಮಿ ಗೌತಮ್ ಮದುವೆಯಾದರು.

ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ ಯಾಮಿ ಗೌತಮ್; ವರನಾರು?

ನಿರ್ದೇಶಕ ಚೇತನ್

ಕನ್ನಡದ ಅನೇಕ ಸಿನಿಮಾಗಳಿಗೆ ಹಾಡು ಬರೆದಿರುವ ಹಾಗೂ ‘ಬಹದ್ದೂರ್’, ‘ಭರಾಟೆ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚೇತನ್ ಕುಮಾರ್ ಅವರು ಸೋದರತ್ತೆ ಮಗಳ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಸೋದರತ್ತೆ ಮಗಳ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಚೇತನ್ ಕುಮಾರ್!

ನಟಿ ಪ್ರಣೀತಾ ಸುಭಾಷ್

‘ಪೊರ್ಕಿ’, ‘ಜರಾಸಂಧ’, ‘ಭೀಮಾ ತೀರದಲ್ಲಿ’, ‘ಅತ್ತಾರಿಂಟಿಕಿ ದಾರೇದಿ’, ‘ಮಾಸ್ ಲೀಡರ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಕಾಲಿವುಡ್ ಹಾಗೂ ಟಾಲಿವುಡ್‌ನಲ್ಲೂ ಜನಪ್ರಿಯತೆ ಪಡೆದಿರುವ ಕನ್ನಡ ನಟಿ ಪ್ರಣೀತಾ ಸುಭಾಷ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿತಿನ್ ರಾಜು ಎಂಬುವರ ಜೊತೆಗೆ ನಟಿ ಪ್ರಣೀತಾ ಸುಭಾಷ್ ವೈವಾಹಿಕ ಬದುಕಿಗೆ ನಾಂದಿ ಹಾಡಿದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ನಟಿ ಪ್ರಣೀತಾ ಸುಭಾಷ್: ವರ ಯಾರು?

ನಟ ಯಶಸ್ ಸೂರ್ಯ

‘ಚಿಂಗಾರಿ’, ‘ಪರಮಶಿವ’, ‘ಚಕ್ರವರ್ತಿ’, ‘ರಾಮ ಧಾನ್ಯ’, ‘ಒಡೆಯ’ ಮುಂತಾದ ಸಿನಿಮಾಗಳಲ್ಲಿ ನಟಿಸಿ, ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ನಟ ಯಶಸ್ ಸೂರ್ಯ ಅವರು ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಯಶಸ್ ಸೂರ್ಯ; ವಧು ಯಾರು?

ಗಾಯಕ ಹೇಮಂತ್

ಕನ್ನಡ ಚಿತ್ರರಂಗದ ಪ್ರಖ್ಯಾತ ಗಾಯಕ ಹೇಮಂತ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವೈದ್ಯೆ ಕೃತಿಕಾ ಎಂಬುವರ ಜೊತೆಗೆ ಹೇಮಂತ್ ಕುಮಾರ್ ವೈವಾಹಿಕ ಜೀವನ ಆರಂಭಿಸಿದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪ್ರೀತ್ಸೆ ಪ್ರೀತ್ಸೆ’ ಖ್ಯಾತಿಯ ಗಾಯಕ ಹೇಮಂತ್: ಹುಡುಗಿ ಯಾರು?

ರಿಯಾ ಕಪೂರ್

ಬಾಲಿವುಡ್ ನಟ ಅನಿಲ್ ಕಪೂರ್-ಸುನೀತಾ ದಂಪತಿಯ ಪುತ್ರಿ ರಿಯಾ ಕಪೂರ್ ವಿವಾಹ ಮಹೋತ್ಸವ ಇದೇ ವರ್ಷ ನೆರವೇರಿತು. ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್ ಕರಣ್ ಬೂಲಾನಿರನ್ನ ರಿಯಾ ಕಪೂರ್ ಮದುವೆಯಾದರು.

ಆಪ್ತರ ಸಮ್ಮುಖದಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟ ರಿಯಾ ಕಪೂರ್-ಕರಣ್ ಬೂಲಾನಿ

ನಿರ್ದೇಶಕ ಮಂಸೋರೆ

ಕನ್ನಡದಲ್ಲಿ ಹರಿವು, ನಾತಿಚರಾಮಿ ಮತ್ತು ಆಕ್ಟ್-1978 ಚಿತ್ರಗಳನ್ನು ನಿರ್ದೇಶಿಸಿ ಗಮನಸೆಳೆದಿರುವ ‘ರಾಷ್ಟ್ರ ಪ್ರಶಸ್ತಿ ಪುರಸ್ಕೃತ’ ನಿರ್ದೇಶಕ ಮಂಸೋರೆ ಅವರು ಕಳೆದ ಆಗಸ್ಟ್ ತಿಂಗಳಿನಲ್ಲಿ ಅಖಿಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅಜಿತ್ ಜಯರಾಜ್ – ಇಂಪನಾ

‘ರೈಮ್ಸ್’ ಹಾಗೂ ‘ಕ್ರಾಂತಿವೀರ’ ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಅಜಿತ್ ಜಯರಾಜ್ ಹಾಗೂ ಗಾಯಕಿ ಇಂಪನಾ ಜಯರಾಜ್ ಅವರು ಕೂಡ ಇದೇ ವರ್ಷ ವಿವಾಹ ಬಂಧನಕ್ಕೊಳಗಾದರು.

ಶ್ರದ್ಧಾ ಆರ್ಯ

ಕಿರುತೆರೆ ಹಾಗೂ ಬೆಳ್ಳಿತೆರೆ ಮೇಲೆ ಮಿಂಚಿರುವ ಶ್ರದ್ಧಾ ಆರ್ಯ ಕೂಡ ಈ ಇದೇ ವರ್ಷ ಹೊಸ ಬಾಳಿಗೆ ಅಡಿಯಿಟ್ಟರು. ಕಮಾಂಡರ್ ರಾಹುಲ್ ಶರ್ಮಾ ನಾಗಲ್ ಎಂಬುವರ ಜೊತೆಗೆ ನಟಿ ಶ್ರದ್ಧಾ ಆರ್ಯ ನವೆಂಬರ್ 16 ರಂದು ವೈವಾಹಿಕ ಬದುಕಿಗೆ ನಾಂದಿ ಹಾಡಿದರು. ನವೆಂಬರ್ 17 ರಂದು ಶ್ರದ್ಧಾ ಆರ್ಯ ಮತ್ತು ರಾಹುಲ್ ಶರ್ಮಾ ನಾಗಲ್ ಅವರ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

ರಾಜ್‌ಕುಮಾರ್ ರಾವ್ – ಪತ್ರಲೇಖ

ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಹಾಗೂ ನಟಿ ಪತ್ರಲೇಖ ಅವರ ವಿವಾಹ ಮಹೋತ್ಸವ ಕೂಡ ಅದ್ಧೂರಿಯಾಗಿ ಜರುಗಿತು. ಇವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ರಾಜ್‌ಕುಮಾರ್ ರಾವ್ ಹಾಗೂ ಪತ್ರಲೇಖ ಮದುವೆಗೆ ಬಾಲಿವುಡ್ ತಾರೆಯರು ಸಾಕ್ಷಿಯಾಗಿದ್ದರು.

ನಟ ಪಂಕಜ್

ಕಲಾಸಾಮ್ರಾಟ್ ಎಸ್.ನಾರಾಯಣ್ ಪುತ್ರ ಹಾಗೂ ನಟ ಪಂಕಜ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ರಕ್ಷಾ ಎಂಬುವರೊಂದಿಗೆ ನಟ ಪಂಕಜ್ ವಿವಾಹ ಮಹೋತ್ಸವ ಜರುಗಿತು. ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‌ನಲ್ಲಿ ನಟ ಪಂಕಜ್-ರಕ್ಷಾ ಅವರ ಕಲ್ಯಾಣ ನೆರವೇರಿತು.

ಕಾರ್ತಿಕೇಯ

‘ಆರ್‌ಎಕ್ಸ್ 100’ ಸಿನಿಮಾದ ಮೂಲಕ ಟಾಲಿವುಡ್‌ನಲ್ಲಿ ಹೀರೋ ಆಗಿ ಮಿಂಚಿದ ನಟ ಕಾರ್ತಿಕೇಯ ಗುಮ್ಮಕೊಂಡ ಅವರ ಮದುವೆಯು ಬಹುಕಾಲದ ಗೆಳತಿ ಲೋಹಿತಾ ಜೊತೆ ನವೆಂಬರ್‌ ತಿಂಗಳಿನಲ್ಲಿ ನೆರವೇರಿತು.

ವಿಕ್ಕಿ ಕೌಶಲ್ – ಕತ್ರಿನಾ ಕೈಫ್

ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ನಟಿ ಕತ್ರಿನಾ ಕೈಫ್ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದರು. ಡಿಸೆಂಬರ್ 9 ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ರಾಯಲ್ ಆಗಿ, ಅಷ್ಟೇ ಅದ್ಧೂರಿಯಾಗಿ, ಎಲ್ಲರ ಕಣ್ಣು ಕುಕ್ಕುವಂತೆ ನೆರವೇರಿತು.



Read more