Online Desk
ಹೈದರಾಬಾದ್: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾದಲ್ಲಿ ‘ಊ .. ಅಂತೀಯ ಮಾವಾ .. ಊಹೂ ಅಂತೀಯ’ ಐಟಂ ಸಾಂಗ್ ಮೂಲಕ ಸಮಂತಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಚಿತ್ರ ಸಾಹಿತಿ ಚಂದ್ರಬೋಸ್ ಅವರ ಸಾಹಿತ್ಯ ದೇವಿ ಶ್ರೀ ಹಿನ್ನೆಲೆ ಸಂಗೀತದ ಹಾಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ YouTube ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿ ರೆಕಾರ್ಡ್ ಮಾಡಿದೆ.
ಊ.. ಅಂತೀಯ ಹಾಡು ಸ್ಯಾಮ್ ಸಿನಿ ಜೀವನದಲ್ಲಿ ಇದೇ ಮೊದಲ ಐಟಂ ಸಾಂಗ್. ನಾಯಕಿಯಾಗಿ ತನ್ನ ಸ್ಟಾರ್ ಸ್ಟೇಟಸ್ ಮುಂದುವರಿಸಿದ್ದ ಸಮಂತಾ ಐಟಂ ಹಾಡಿಗೆ ಕುಣಿಯಬೇಕೋ ಬೇಡವೋ ಎಂಬ ಗೊಂದಲದಲ್ಲಿ ಬಿದ್ದಿದ್ದರು. ಅದಕ್ಕೇ ಈ ಮೊದಲು ಹಾಡಿಗೆ ಕುಣಿಯಲು ಒಪ್ಪಿರಲಿಲ್ಲ. ನಂತರ ಅಲ್ಲು ಅರ್ಜುನ್ ಅವರಿಂದ ಸ್ಫೂರ್ತಿ ಪಡೆದು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದೇನೆ ಎನ್ನುತ್ತಾರೆ ಸ್ಯಾಮ್.
ಇದನ್ನೂ ಓದಿ: ಗ್ಲಾಮರ್ ಜಗತ್ತಿನ ಮಧ್ಯೆ ವೈಯಕ್ತಿಕ ಬದುಕಿನ ನೋವು, ವೇದನೆಯಿಂದ ಹೊರಬಂದಿದ್ದು ಹೇಗೆ?, ಸಮಂತಾ ‘ಹೃದಯದ’ ಮಾತು
ಹಾಡು ಹೇಗಿರುತ್ತದೋ ಎಂಬ ಭಯದಿಂದ ಹಿಂದೆ ಸರಿದಿದ್ದೆ. ಆಗ ನನ್ನನ್ನು ಕೂರಿಸಿಕೊಂಡು ಕೊನೆಗೆ ಹಾಡು ಹೇಗಿರಬಹುದೆಂದು ಮನವರಿಕೆ ಮಾಡಿಕೊಟ್ಟರು. ಅವರ ಪ್ರೋತ್ಸಾಹವಿಲ್ಲದಿದ್ದರೆ, ಸ್ಯಾಮ್ ಅವರು “ಉಹ್ … ಅಂತೀಯ” ಸಾಂಗ್ ಗೆ ಕುಣಿಯುತ್ತಿರಲಿಲ್ಲ ಎಂದು ಹೇಳುತ್ತಾರೆ.
Read more…
[wpas_products keywords=”party wear dress for women stylish indian”]