Karnataka news paper

597 ವಿಕೆಟ್ ಪಡೆದಿದ್ದ ಪಾಕಿಸ್ತಾನದ ಸ್ಟಾರ್ ವೇಗಿ ರಸ್ತೆಯಲ್ಲಿ ‘ಕಾಳು’ ಮಾರಾಟದ ವಿಡಿಯೋ ವೈರಲ್!


Online Desk

ಪಾಕಿಸ್ತಾನದ ವೇಗದ ಬೌಲರ್ ವಹಾಬ್ ರಿಯಾಜ್ ಅವರ ವೀಡಿಯೊ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ರಿಯಾಜ್ ಪಾಕಿಸ್ತಾನದ ಬೀದಿಗಳಲ್ಲಿ ಕಾಳು ಮಾರುತ್ತಿರುವುದನ್ನು ಕಾಣಬಹುದು. 

ವಹಾಬ್ ರಿಯಾಜ್ ಪಾಕಿಸ್ತಾನದ ಪರ 27 ಟೆಸ್ಟ್, 91 ಏಕದಿನ ಮತ್ತು 36 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇನ್ನು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟಾರೆ 597 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು ವಹಾಬ್ ಡಿಸೆಂಬರ್ 2020ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು.

ವಹಾಬ್ ರಿಯಾಜ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಕಾಳುಗಳನ್ನು ಮಾರಾಟ ಮಾಡುತ್ತಿದ್ದಾರೆ. ವಹಾಬ್ ರಿಯಾಜ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವಹಾಬ್ ತಮ್ಮ ವೀಡಿಯೊವನ್ನು ಟ್ವೀಟ್ ಮಾಡಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಆನಂದಿಸಿದ್ದಾರೆ.

ವಹಾಬ್ ತಮ್ಮ ಹಾಸ್ಯಕ್ಕೆ ಹೆಸರುವಾಸಿಯಾಗಿದ್ದು ಕೆಲ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ICC T20 ವಿಶ್ವಕಪ್ ಶೋ ‘ದಿ ಪೆವಿಲಿಯನ್’ ನಲ್ಲಿ ವಾಸೀಮ್ ಅಕ್ರಮ್, ಮಿಸ್ಬಾ-ಉಲ್-ಹಕ್ ಮತ್ತು ವಕಾರ್ ಯೂನಿಸ್ ಅವರೊಂದಿಗೆ ಕಾಣಿಸಿಕೊಂಡರು.

2011ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಧೋನಿ ಮತ್ತು ಸೆಹ್ವಾಗ್ ವಿಕೆಟ್ ಪಡೆದಿದ್ದ ವಹಾಬ್
ವಹಾಬ್ ರಿಯಾಜ್ ವೇಗದ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. 2011ರ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಅವರು ಭಾರತದ ವಿರುದ್ಧ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವಹಾಬ್ ರಿಯಾಜ್ ಅವರು ಮಹೇಂದ್ರ ಸಿಂಗ್ ಧೋನಿ ಮತ್ತು ವೀರೇಂದ್ರ ಸೆಹ್ವಾಗ್ ಅವರಂತಹ ದಿಗ್ಗಜರ ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಅವರು ಐದು ವಿಕೆಟ್ ಪಡೆದರು. ಆದರೂ ಈ ಪಂದ್ಯದಲ್ಲಿ ಪಾಕಿಸ್ತಾನ ಸೋತಿತ್ತು.





Read more…

[wpas_products keywords=”deal of the day sports items”]