Karnataka news paper

ಅಮೆರಿಕ: ಭಾರತ ಮೂಲದ ಟ್ಯಾಕ್ಸಿ ಚಾಲಕನ ಮೇಲೆ ಜನಾಂಗೀಯ ದ್ವೇಷಪ್ರೇರಿತ ದಾಳಿ; ಸಿಖ್ ಸಂಘಟನೆಗಳು ಆಕ್ರೋಶ


The New Indian Express

ವಾಷಿಂಗ್ಟನ್: ಅಮೆರಿಕದಲ್ಲಿ ಭಾರತ ಮೂಲದ ಟ್ಯಾಕ್ಸಿ ಚಾಲಕನ ಮೇಲೆ ದಾಳಿ ನಡೆದಿದ್ದು, ಇದರೊಂದಿಗೆ ಅಮೆರಿಕದಲ್ಲಿ ಮತ್ತೆ ಜನಾಂಗೀಯ ದ್ವೇಷ ತಾಂಡವವಾಡುತ್ತಿರುವ ಕೂಗು ಎದ್ದಿದೆ. ದಾಳಿಗೆ ಒಳಗಾದ ವ್ಯಕ್ತಿ ಸಿಖ್ ಸಮುದಾಯಕ್ಕೆ ಸೇರಿದವರೆಂದು ತಿಳಿದುಬಂದಿದೆ.

ಇದನ್ನೂ ಓದಿ: ಭಾರತ ವಿರುದ್ಧದ ಕಾಟ್ಸಾ ನಿರ್ಬಂಧ ತೆರವಿಗೆ ಅಮೆರಿಕದ ರಿಪಬ್ಲಿಕನ್ ಸೆನೆಟರ್ ಒತ್ತಾಯ

ನ್ಯೂಯಾರ್ಕ್ ನಗರದ ಜೆ ಎಫ್ ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಟ್ಯಾಕ್ಸಿ ಚಾಲಕನ ಕಾರಿಗೆ ಅಡ್ಡವಾಗಿ ಕಾರೊಂದು ನಿಂತಿತ್ತು. ಕಾರು ಮುಂದಕ್ಕೆ ಹಾಕುವಂತೆ ಹೇಳಲು ಟ್ಯಾಕ್ಸಿ ಚಾಲಕ ಇಳಿದಿದ್ದ.

ಇದನ್ನೂ ಓದಿ: ನಿಧಾನಗತಿಯ ಇಂಟರ್ನೆಟ್ ಸ್ಪೀಡ್; ಚೀನೀ ವ್ಯಕ್ತಿ ಕಂಗಾಲು; ಕೇಬಲ್ ಗೆ ಬೆಂಕಿ ಹಚ್ಚಿದ ಭೂಪ!

ಈ ಸಂದರ್ಭ ಇನ್ನೊಂದು ಕಾರಿನಲ್ಲಿದ್ದ ವ್ಯಕ್ತಿ, ಸಿಖ್ ಟ್ಯಾಕ್ಸಿ ಚಾಲಕನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೆ ಆತನ ಟರ್ಬನ್ ಅನ್ನು ಕಿತ್ತಿದ್ದಾಗಿ ಆರೋಪಿಸಲಾಗಿದೆ. 

ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಪಹರಣ- ಹತ್ಯೆ ಸಂಚು ಬಯಲು: ಆರೋಪಿ ಸೆರೆ

ಅಲ್ಲದೆ ಹಲ್ಲೆ ನಡೆಸಿದ ನಂತರ ಆರೋಪಿ ಟ್ಯಾಕ್ಸಿ ಚಾಲಕನಿಗೆ ಸ್ವದೇಶಕ್ಕೆ ವಾಪಸ್ ಹೋಗುವಂತೆ ಆವಾಜ್ ಹಾಕಿದ್ದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಅಮೆರಿಕದ ಸಿಖ್ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಲ್ಯಾಟಿನ್ ಅಮೆರಿಕಾದಲ್ಲಿ ಮೊದಲ ಬಾರಿಗೆ ವ್ಯಕ್ತಿಗೆ ದಯಾಮರಣ: ಅಂತಿಮ ವಿದಾಯ ವಿಡಿಯೊದಲ್ಲಿ ಸೆರೆ



Read more

[wpas_products keywords=”deal of the day”]