ಹೈಲೈಟ್ಸ್:
- 11 ದಿನಗಳ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಾಲ್ಕೇ ದಿನಕ್ಕೆ ಅಂತ್ಯ
- ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ 6 ಕಾಂಗ್ರೆಸ್ ನಾಯಕರಿಗೆ ಕೋವಿಡ್
- ಪಾದಯಾತ್ರೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದ ಉಚ್ಚ ನ್ಯಾಯಾಲಯ
ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದ್ದು, ಕೋವಿಡ್ ಮೂರನೇ ಅಲೆ ತಣ್ಣಗದ ಮೇಲೆ, ನಿರ್ಬಂಧಗಳೆಲ್ಲಾ ಸಡಿಲವಾದ ಬಳಿಕ ಪಾದ ಯಾತ್ರೆಯನ್ನು ಪುನಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಹೀಗಾಗಿ 11 ದಿನಗಳ ಕಾಂಗ್ರೆಸ್ ಪಾದಯಾತ್ರೆ ನಾಲ್ಕೇ ದಿನಕ್ಕೆ ಅಂತ್ಯವಾಗಿದೆ.
ಪಾದಯಾತ್ರೆ ಬಗ್ಗೆ ಹೈ ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ, ಸರ್ಕಾರ ಕೂಡ ಪಾತ್ರೆ ಯಾತ್ರೆಗೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಈ ನಿರ್ಧಾರ ಹೊರ ಬಿದ್ದಿದೆ. ಏತನ್ಮಧ್ಯೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಎಚ್.ಎಂ ರೇವಣ್ಣ, ಸಿಎಂ ಇಬ್ರಾಹೀಂ ಸೇರಿದಂತೆ ಕಾಂಗ್ರೆಸ್‌ನ ಆರು ಮಂದಿ ನಾಯಕರಿಕೆ ಕೋವಿಡ್ ಪಾಸಿಟಿವ್ ಉಂಟಾಗಿತ್ತು.
ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ಸಭೆ ನಡೆಸಿದ ಕಾಂಗ್ರೆಸ್ ನಾಯಕರು, ಪಾದಯಾತ್ರೆಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದರು.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜನರ ಆರೋಗ್ಯದ ದೃಷ್ಠಿಯಿಂದ, ಪಾದಯಾತ್ರೆಯಿಂದಾಗಿ ಸೋಂಕು ಹೆಚ್ಚಳ ಆಗಿದೆ ಎನ್ನುವ ಭಾವನೆ ಮನಸ್ಸಲ್ಲಿ ಬರಬಾರದು ಹೀಗಾಗಿ ಈ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.
ಕೇಸ್ ಹಾಕುತ್ತಾರೆ. ಅಥವಾ ಸರ್ಕಾರದ ಆದೇಶಗಳ ಭಯದಿಂದ ಈ ಪಾದಯಾತ್ರೆಯನ್ನು ಮುಂದೂಡಿಕೆ ಮಾಡಿಲ್ಲ. ಜನರ ಆರೋಗ್ಯ ಹಿತ ದೃಷ್ಟಿಯಿಂದ ಪಾದಯಾತ್ರೆಯನ್ನು ಮುಂದೂಡಲಾಗಿದೆ. ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತಿದೆ. ಇನ್ನೆರೆಡು ದಿನದಲ್ಲಿ ನಾವು ಬೆಂಗಳೂರು ತಲುಪುತ್ತದ್ದೆವು. ಅಲ್ಲಿ ಲಕ್ಷಾಂತರ ಜನ ಸೇರುತ್ತಿದ್ದರು.
ಜನರಿಗೆ ನಮ್ಮ ಮೇಲೆ ಯಾವುದೆ ಕೆಟ್ಟ ಅಭಿಪ್ರಾಯ ಮೂಡಬಾರದು ಎಂಬ ಉದ್ದೇಶದಿಂದ ತಾತ್ಕಲಿಕವಾಗಿ ಇಲ್ಲಿಗೆ ಸ್ಥಗಿತಗೊಳಿಸುತ್ತಿದ್ದೆವೆ ಎಂದರು.
ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ. ಸೋಂಕು ಕಡಿಮೆಯಾದ ಬಳಿಕ ರಾಮನಗರದಿಂದಲ್ಲೇ ಪಾದಯಾತ್ರೆ ಮುಂದುವರಿಸಲಾಗುವುದು ಎಂದರು. ಅಲ್ಲದೇ ಕಾರ್ಯಕರ್ತರು ಉತ್ಸಾಹದಿಂದಲೇ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಅವರ್ಯಾರೂ ಉತ್ಸಾಹ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದ ಸಿದ್ದರಾಮಯ್ಯ, ಮುದೆ ಇಲ್ಲಿಂದಲ್ಲೇ ಶುರುಮಾಡಿ, ನ್ಯಾಷನಲ್ ಕಾಲೇಜುಮೈದಾನದಲ್ಲೇ ಅಂತ್ಯಗೊಳಿಸುತ್ತೆವೆ ಎಂದರು.
11 ದಿನಗಳ ಪಾದಯಾತ್ರೆ 4 ದಿನಕ್ಕೆ ಸ್ಥಗಿತ
ಜನವರಿ 9 ರಂದು ಮೇಕೆದಾಟು ಸಂಗಮದಿಂದ ಆರಂಭವಾಗಿದ್ದ ಈ ಪಾದಯಾತ್ರೆ ಜನವರಿ 19ರ ವರೆಗೂ ನಡೆದು, ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾಪ್ತಿಯಾಗಬೇಕಿತ್ತು. ಆದರೆ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣ, ಪಾದಾಯಾತ್ರೆಗೆ ಹೈ ಕೋರ್ಟ್ ಚಾಟಿ, ಸರ್ಕಾರದ ನಿರ್ಬಂಧ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿಯಿಂದಾಗಿ ಪಾದಯಾತ್ರೆ ಐದನೇ ದಿನ ಆರಂಭಕ್ಕೂ ಮುನ್ನ ಅಂತ್ಯವಾಗಿದೆ. ಹೀಗಾಗಿ 11 ದಿನಗಳ ಕಾಲ ನಡೆಯಬೇಕಿದ್ದ ಪಾದಯಾತ್ರೆ ನಾಲ್ಕೇ ದಿನಕ್ಕೆ ಮೊಟಕುಗೊಂಡಿದೆ.
Read more
[wpas_products keywords=”deal of the day sale today offer all”]