ಹೈಲೈಟ್ಸ್:
- ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಟಿಕೆಟ್ ನೀಡಿದ ಕಾಂಗ್ರೆಸ್
- 2017ರಲ್ಲಿ ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ರೇಪ್ ಕೇಸ್
- ಪ್ರಕರಣದಲ್ಲಿ ಆರೋಪ ಸಾಬೀತಾಗಿ ಶಿಕ್ಷೆ ಪಡೆಯುತ್ತಿರುವ ಬಿಜೆಪಿ ಶಾಸಕ
ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಯ ತಾಯಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಮಹಿಳೆಯರ ಮತ ಬ್ಯಾಂಕ್ ಮೇಲೆ ಕಣ್ಣು ಹಾಕಿದೆ. ಲಡಕೀ ಹೂಂ ಲಡ್ ಸಕ್ತೀ ಹೂಂ (ಮಹಿಳೆ ಇದ್ದೇನೆ.. ಹೋರಾಟವೂ ಮಾಡುತ್ತೇನೆ) ಎನ್ನುವ ಘೋಷ ವಾಕ್ಯದೊಂದಿಗೆ ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ ಎನ್ನುವುದೂ ಇಲ್ಲಿ ಗಮನಾರ್ಹ.
ಸದ್ಯ ಬಿಡುಗಡೆ ಮಾಡಲಾಗಿರುವ 125 ಮಂದಿಯ ಪಟ್ಟಿಯಲ್ಲಿ ಶೇ. 40 ರಷ್ಟು ಟಿಕೆಟ್ಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಹಾಗೂ ಶೇ. 40 ರಷ್ಟು ಯುವಕರಿಗೆ ಟಿಕೆಟ್ ನೀಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ.
‘ನೀವು ಕಿರುಕುಳ ಮತ್ತು ಹಿಂಸೆಯ ಸಂತ್ರಸ್ತೆ ಆಗಿದ್ದರೆ, ಕಾಂಗ್ರೆಸ್ ನಿಮ್ಮ ಬೆನ್ನ ಹಿಂದೆ ಇದೆ ಎನ್ನುವ ಸಂದೇಶವನ್ನು ಈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಿಂದ ಸಂದೇಶ ರವಾನೆ ಮಾಡುತ್ತಿದ್ದೇವೆ’ ಎಂದು ಪ್ರಿಯಾಂಕ ಹೇಳಿದರು.
ಗುರುವಾರ ಬಿಡುಗಡೆ ಮಾಡಲಾಗಿರುವ 125 ಮಂದಿಯ ಪಟ್ಟಿಯಲ್ಲಿ, 50 ಮಂದಿ ಮಹಿಳೆಯರೇ ಇದ್ದಾರೆ. ಆಶಾ ಸಿಂಗ್ ಅವರು ಶಹಜಹಾನ್ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.
ಏನಿದು ಉನ್ನಾವ್ ಅತ್ಯಾಚಾರ ಘಟನೆ?
2017ರಲ್ಲಿ ಬಿಜೆಪಿ ಶಾಸಕನಾಗಿದ್ದ ಕುಲ್ದೀಪ್ ಸಿಂಗ್ ಸೆಂಗಾರ್, ತನ್ನ ಬಳಿ ಸಹಾಯ ಯಾಚಿಸಿ ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಈತನ ಬಗ್ಗೆ ದೂರು ನೀಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿಗೆ ಸಂತ್ರಸ್ತೆ ಬಂದಿದ್ದಳು. ಈ ವೇಳೆಯೂ ಆಕೆಯ ಸರಿಯಾದ ನ್ಯಾಯ ಸಿಕ್ಕಿರಲಿಲ್ಲ. ಹೀಗಾಗಿ ಸಿಎಂ ಮನೆಯ ಮುಂದೆಯೇ ಸಂತ್ರಸ್ತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಳು.
ಈ ಸುದ್ದಿ ಇಡೀ ರಾಷ್ಟ್ರಾದ್ಯಂತ ಭಾರೀ ಸದ್ದು ಮಾಡಿತು. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಕೂಡ ಘಟನೆಯ ಕುರಿತು ಹಲವು ವರದಿಗಳು ಪ್ರಸಾರವಾದವು.
ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆದ ಘಟನೆಯ ತನಿಖೆಯಲ್ಲಿ, ಕುಲ್ದೀಪ್ ಮೇಲಿದ್ದ ಆರೋಪ ಸಾಬೀತಾಗಿ ಆತನಿಗೆ 2019ರಲ್ಲಿ ಜೀವಾವಧಿ ಶಿಕ್ಷೆ ಪ್ರಕಟವಾಯ್ತು.
ಆತನ ಮೇಲಿರು ಆರೋಪ ಸಾಬೀತಾಗುವುದಕ್ಕೂ ಮುನ್ನ, ಸಂತ್ರಸ್ತೆಯ ಕುಟುಂಬದ ಮೇಲೆ ಶಾಸಕನ ಬೆಂಬಲಿಗನಿಂದ ಭಾರೀ ದೌರ್ಜನ್ಯಗಳು ನಡೆದವು. ಪ್ರಕರಣ ವಿಚಾರಣೆ ನಡೆಯುವ ವೇಳೆಯೇ ಸಂತ್ರಸ್ತೆಯ ತಂದೆಯನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಯ್ತು. ಪೊಲೀಸ್ ಕಷ್ಟಡಿಯಲ್ಲೇ ಅವರು ಸಾವಿಗೀಡಾಗಿದ್ದರು. ಪೊಲೀಸರ ದೌರ್ಜನ್ಯದಿಂದಾಗಿಯೇ ಸಂತ್ರಸ್ತೆಯ ತಂದೆ ಅಸುನೀಗಿದರು ಎನ್ನುವ ವಾದಗಳೂ ಕೇಳಿ ಬಂದವು.
ಇನ್ನು ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣ ಸಂಬಂಧ ಕುಲ್ದೀಪ್ ಸೆಂಗರ್ಗೆ 10 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ದಂಡ ಶಿಕ್ಷೆ ಕೂಡ ವಿಧಿಸಲಾಗಿದೆ.
Read more
[wpas_products keywords=”deal of the day sale today offer all”]