ಹೈಲೈಟ್ಸ್:
- ‘ಮುದ್ದುಲಕ್ಷ್ಮೀ’ ಧಾರಾವಾಹಿಯಲ್ಲಿ ಹಳೆಯ ಪಾತ್ರಗಳು ಅಂತ್ಯ?
- ಹೊಸ ಕಥೆಯೊಂದಿಗೆ ಆರಂಭವಾಗಲಿದೆಯಾ ‘ಮುದ್ದುಲಕ್ಷ್ಮೀ’ ಧಾರಾವಾಹಿ
- ಇನ್ನೊಂದು ತಲೆಮಾರಿನ ಕಥೆಯನ್ನು ‘ಮುದ್ದುಲಕ್ಷ್ಮೀ’ಯಲ್ಲಿ ನೋಡಬಹುದೇ?
ಹೌದು, ‘ಮುದ್ದುಲಕ್ಷ್ಮೀ’ ಧಾರಾವಾಹಿಯಲ್ಲಿ 2018ರಿಂದ ಪ್ರಸಾರವಾಗುತ್ತಿದೆ. ಲಕ್ಷ್ಮೀ ಎಂಬ ಕಪ್ಪು ವರ್ಣದ ಹುಡುಗಿಯನ್ನು ಡಾಕ್ಟರ್ ಧ್ರುವಂತ್ ಪ್ರೀತಿ ಮಾಡುತ್ತಾನೆ. ತಾಯಿಗೆ ಇಷ್ಟವಿಲ್ಲದಿದ್ದರೂ ಆತ ಅವಳನ್ನು ಮದುವೆಯಾಗುತ್ತಾನೆ. ಲಕ್ಷ್ಮೀ ಗಂಡನ ಮನೆಯಲ್ಲಿ ಸಾಕಷ್ಟು ದುಃಖ ಅನುಭವಿಸುತ್ತಾಳೆ. ಆಮೇಲೆ ಶಾರ್ವರಿ ಎಂಬ ಇನ್ನೊಂದು ಹೆಣ್ಣು ಲಕ್ಷ್ಮೀ, ಧ್ರುವಂತ್ ಲೈಫ್‌ನಲ್ಲಿ ಎಂಟ್ರಿ ಆಗಿ ಅವರ ಸಂಸಾರವನ್ನೇ ಹಾಳು ಮಾಡುತ್ತಾಳೆ. ತನ್ನ ಪತ್ನಿ ಲಕ್ಷ್ಮೀ ನಡತೆಗೆಟ್ಟವಳು ಎಂದು ಧ್ರುವಂತ್ ನಂಬುವ ಹಾಗೆ ಶಾರ್ವರಿ ಕುತಂತ್ರ ಮಾಡುತ್ತಾಳೆ. ಇದರಿಂದ ಈ ದಂಪತಿ ಬೇರೆ ಬೇರೆಯಾಗುತ್ತಾರೆ.
‘ಮುದ್ದುಲಕ್ಷ್ಮೀ’ ಧಾರಾವಾಹಿಯ ಚರಿತ್ ಬಾಳಪ್ಪ ಜಾಗಕ್ಕೆ ಬಂದ ಖ್ಯಾತ ಕಿರುತೆರೆ ನಟ
ಲಕ್ಷ್ಮೀ ಅವಳಿ, ಜವಳಿ ಮಕ್ಕಳಿಗೆ ಜನ್ಮ ಕೊಟ್ಟ ನಂತರವೂ ಧ್ರುವಂತ್ ಅವು ನನ್ನ ಮಕ್ಕಳಲ್ಲ ಎಂದು ವಾದ ಮಾಡುತ್ತಾನೆ. ಹೀಗೆ ಕಥೆ ಸಾಗುತ್ತ ಮುಂದೊಂದು ದಿನ ಧ್ರುವಂತ್‌ಗೆ ತನ್ನ ತಪ್ಪಿನ ಅರಿವಾಗಿ ಲಕ್ಷ್ಮೀ ಬಳಿ ಕ್ಷಮೆ ಕೇಳಿ, ಅವಳೊಂದಿಗೆ ಹೊಸ ಜೀವನ ಶುರು ಮಾಡುತ್ತಾನೆ. ಆ ನಂತರವೂ ಶಾರ್ವರಿ ಅವರಿಬ್ಬರ ಜೀವನ ಹಾಳು ಮಾಡಲು ಏನಾದರೊಂದು ಯೋಜನೆ ಹಾಕುತ್ತಿರುತ್ತಾಳೆ. ಹೀಗೆ ಕಥೆ ಸಾಗುತ್ತಿತ್ತು. ಈಗ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಾರಣಕ್ಕೆ ‘ಮುದ್ದುಲಕ್ಷ್ಮೀ’ ಧಾರಾವಾಹಿಯಲ್ಲಿ ಹೊಸ ಕಥೆ ಶುರುವಾಗಲಿದೆ. ಅವಳಿ, ಜವಳಿ ಮಕ್ಕಳು ಬೆಳೆದು ದೊಡ್ಡವರಾದ ನಂತರದ ಕಥೆಯನ್ನು ‘ಮುದ್ದುಲಕ್ಷ್ಮೀ’ಯಲ್ಲಿ ಕಾಣಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಮುಂದಿನ ಪೀಳಿಗೆ ಪಾತ್ರಗಳಿಗೆ ಬೇಕಾದ ಕಲಾವಿದರನ್ನು ಕೂಡ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.
‘ಮುದ್ದುಲಕ್ಷ್ಮೀ’ ಧಾರಾವಾಹಿಯಿಂದ ಹೊರನಡೆದ ನಟ ಚರಿತ್ ಬಾಳಪ್ಪ; ಕಾರಣ ಏನು?
ಅಜ್ಜಿ ಪಾತ್ರ ಬಿಟ್ಟು ಉಳಿದವರ ಪಾತ್ರ ಇನ್ಮುಂದೆ ‘ಮುದ್ದುಲಕ್ಷ್ಮೀ’ ಧಾರಾವಾಹಿಯಲ್ಲಿ ಇರೋದಿಲ್ವಂತೆ. ಈ ಬಗ್ಗೆ ವಾಹಿನಿ ಸದ್ಯ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ‘ಮುದ್ದುಲಕ್ಷ್ಮೀ’ ಧಾರಾವಾಹಿ ಕಲಾವಿದರು ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗುವ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಹಿಂದಿಯ ಅನೇಕ ಧಾರಾವಾಹಿಗಳು ಸೂಪರ್ ಹಿಟ್ ಆಗಿವೆ, ಮತ್ತೆ ಕಥೆ ಎಳೆದರೆ ಚೆನ್ನಾಗಿರೋದಿಲ್ಲ ಎಂದು ಒಂದು ಪೀಳಿಗೆಯ ನಂತರದಲ್ಲಿ ಇನ್ನೊಂದು ಪೀಳಿಗೆ ಕಥೆ ಹೇಳುವ ಪದ್ಧತಿ ಶುರುವಾಗಿದೆ. yeh rishta kya kehlata hai ಧಾರಾವಾಹಿಯಲ್ಲಿ ಪ್ರಸ್ತುತ ಮೂರನೇ ತಲೆಮಾರಿನ ಕಥೆ ಪ್ರಸಾರವಾಗುತ್ತಿದೆ. ಈ ಸೀರಿಯಲ್ ಆರಂಭವಾಗಿ 13 ವರ್ಷಗಳು ಆಯ್ತು. ‘ಕುಂಕುಮ ಭಾಗ್ಯ’ ಧಾರಾವಾಹಿಯಲ್ಲಿಯೂ ಕೂಡ ಎರಡನೇ ತಲೆಮಾರಿನ ಕಥೆ ಸಾಗುತ್ತಿದೆ. ಒಟ್ಟಿನಲ್ಲಿ ಹಿಂದಿ ಮಾದರಿಯಲ್ಲಿಯೇ ಕನ್ನಡ ಧಾರಾವಾಹಿ ತಂಡ ತಲೆಮಾರಿನ ಕಥೆ ಹೇಳುವ ಹೊಸ ಮಾದರಿ ರೂಢಿಸಿಕೊಳ್ಳುತ್ತಿದೆ.
‘ಮುದ್ದುಲಕ್ಷ್ಮೀ’ ಧಾರಾವಾಹಿಗೆ ಒಳ್ಳೆಯ ಟಿಆರ್‌ಪಿ ಇದೆ, ಈ ಕಾರಣಕ್ಕೆ ಮತ್ತೆ ಹೊಸ ಧಾರಾವಾಹಿ ಶುರುಮಾಡುವ ಬದಲು ಇದೇ ಶೀರ್ಷಿಕೆಯಡಿ ಇನ್ನೊಂದು ಕಥೆ ಹೇಳುವ ಯೋಜನೆ ಧಾರಾವಾಹಿ ತಂಡದ್ದಾಗಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೇಗೆ ಕಥೆ ಮೂಡಿಬರಲಿದೆ ಎಂದು ಕಾದು ನೋಡಬೇಕಿದೆ. ನಟಿ ಅಶ್ವನಿ, ಚರಿತ್ ಬಾಳಪ್ಪ, ಕಾರ್ತಿಕ್ ಸಾಮಗ್, ಅನು ಪೂವಯ್ಯ ಮುಂತಾದವರು ನಟಿಸಿದ್ದರು.
Read more
[wpas_products keywords=”deal of the day party wear dress for women stylish indian”]