Karnataka news paper

2021 ರಲ್ಲಿ ಭಾರತಕ್ಕೆ ಎಂಟ್ರಿ ನೀಡಲು ವಿಫಲವಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು!


ಸ್ಮಾರ್ಟ್‌ಫೋನ್‌

ಹೌದು, ಈ ವರ್ಷ ಸಾಕಷ್ಟು ನಿರೀಕ್ಷೆಯ ನಡುವೆಯೂ ಕೆಲವು ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆ ಆಗಿಲ್ಲ. ಜಾಗತಿಕ ಮಾರುಕಟ್ಟೆಗೆ ಎಂಟ್ರಿ ನೀಡಿದ್ದರೂ ಭಾರತವನ್ನು ಪ್ರವೇಶಿಸುವಲ್ಲಿ ವಿಫಲವಾಗಿವೆ. ಆದರೂ ಈ ಸ್ಮಾರ್ಟ್‌ಫೋನ್‌ಗಳು ಮುಂದಿನ ವರ್ಷ ಭಾರತಕ್ಕೆ ಎಂಟ್ರಿ ನೀಡುವ ಸಾದ್ಯತೆ ಇದೆ. ಹಾಗಾದ್ರೆ ಈ ವರ್ಷ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿ ಬಿಡುಗಡೆ ಆಗದ ಕೆಲವು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್ ಪಿಕ್ಸೆಲ್ 6

ಗೂಗಲ್ ಪಿಕ್ಸೆಲ್ 6

ಈ ವರ್ಷ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ನೀಡಿ ಭಾರತದಲ್ಲಿ ಬಿಡುಗಡೆ ಆಗದ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿ ಗೂಗಲ್ ಸ್ಮಾರ್ಟ್‌ಫೋನ್‌ ಕೂಡ ಸೇರಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಗೂಗಲ್‌ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರುವ ಪಿಕ್ಸೆಲ್ 6 ಸರಣಿ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಲಾಗಿತ್ತು. ಇದು ಗೂಗಲ್‌ನ ಸ್ವಂತ ಟೆನ್ಸರ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಆದರೆ ಗೂಗಲ್ ಭಾರತದಲ್ಲಿ ಪಿಕ್ಸೆಲ್ 6 ಸರಣಿಯನ್ನು ಇನ್ನು ಬಿಡುಗಡೆ ಮಾಡಿಲ್ಲ. ಇದಕ್ಕೆ ಜಾಗತಿಕ ಪೂರೈಕೆ ಮತ್ತು ಬೇಡಿಕೆಯ ಸಮಸ್ಯೆಗಳನ್ನು ಕಂಪನಿಯು ಉಲ್ಲೇಖಿಸಿದೆ.

ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುವೋ 2

ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುವೋ 2

ಮೈಕ್ರೋಸಾಫ್ಟ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಸರ್ಫೇಸ್ ಡ್ಯುವೋ 2 ಅನ್ನು ಬಿಡುಗಡೆ ಮಾಡಿತು. ಆದರೆ ಭಾರತದಲ್ಲಿ ಇನ್ನು ಕೂಡ ಈ ಫೋನ್ ಲಭ್ಯವಿಲ್ಲ. ಇನ್ನುಈ ಫೋನ್‌ 8.1 ಇಂಚಿನ ಅಮೋಲೆಡ್‌ ಪ್ರೈಮರಿ ಡಿಸ್ಪ್ಲೇ ಮತ್ತು 5.6-ಇಂಚಿನ ಅಮೋಲೆಡ್‌ ಸೆಕೆಂಡರಿ ಡಿಸ್ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 855 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ 6GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 3,577mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಶಿಯೋಮಿ ಮಿ ಮಿಕ್ಸ್ ಫೋಲ್ಡ್

ಶಿಯೋಮಿ ಮಿ ಮಿಕ್ಸ್ ಫೋಲ್ಡ್

ಶಿಯೋಮಿ ಕಂಪೆನಿ ತನ್ನ ಫೋಲ್ಡಬಲ್ ಡಿಸ್ಪ್ಲೇ ಸ್ಮಾರ್ಟ್‌ಫೋನ್ Mi ಮಿಕ್ಸ್ ಫೋಲ್ಡ್ ಅನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿತ್ತು. ಆದರೆ ಈ ಸ್ಮಾರ್ಟ್‌ಫೋನ್‌ ಇನ್ನೂ ಕೂಡ ಭಾರತಕ್ಕೆ ಬಂದಿಲ್ಲ. ಈ ಫೋನ್ ಈಗಾಗಲೇ ಚೀನಾದಲ್ಲಿ ಲಭ್ಯವಿದೆ. ಆದರೆ ಕಂಪನಿಯು ಇದನ್ನು ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಿಗೆ ತರಲು ಯೋಜಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹುವಾವೇ P50 ಪ್ರೊ

ಹುವಾವೇ P50 ಪ್ರೊ

ಹುವಾವೇ ಕಂಪೆನಿ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಪಡೆದುಕೊಂಡಿದೆ. ಆದರಂತೆ ಈ ವರ್ಷ ಕೂಡ ಕೆಲವು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ವರ್ಷ ತನ್ನ ಹೊಸ ಹುವಾವೇ P50 ಪ್ರೋ ಅನ್ನು ಲಾಂಚ್‌ ಮಾಡಿದೆ. ಆದರೆ ಈ ಫೋನ್‌ ಇನ್ನು ಕೂಡ ಭಾರತದ ಮಾರುಕಟ್ಟೆಗೆ ಬಂದಿಲ್ಲ. ಇನ್ನು ಈ ಸ್ಮಾರ್ಟ್‌ಫೋನ್‌ 6.6-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. ಈ ಫೋನ್‌ ಚೀನಾದಲ್ಲಿ 6,488 ಯುವಾನ್ ಬೆಲೆಯಲ್ಲಿ ಲಭ್ಯವಿದೆ.



Read more…