Karnataka news paper

ಕಿಚ್ಚೆಬ್ಬಿಸಿದ ಕ್ರಿಕೆಟರ್ ರವೀಂದ್ರ ಜಡೇಜಾ ‘ಬೆಂಕಿ’ ಲುಕ್: ‘ತಗ್ಗೆದೆ ಲೇ’ ಎಂದ ಅಲ್ಲು ಅರ್ಜುನ್!


ಹೈಲೈಟ್ಸ್‌:

  • ‘ಪುಷ್ಪ’ ಅವತಾರ ತಾಳಿದ ರವೀಂದ್ರ ಜಡೇಜಾ
  • ರವೀಂದ್ರ ಜಡೇಜಾ ಲುಕ್ ಕಂಡು ‘ತಗ್ಗೆದೆ ಲೇ’ ಎಂದ ಅಲ್ಲು ಅರ್ಜುನ್
  • ರವೀಂದ್ರ ಜಡೇಜಾ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್

ಟಾಲಿವುಡ್‌ನ ಐಕಾನ್ ಸ್ಟಾರ್, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ: ದಿ ರೈಸ್’ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿದೆ. ಈವರೆಗೂ 300 ಕೋಟಿಗೂ ಅಧಿಕ ರೂಪಾಯಿಯನ್ನು ‘ಪುಷ್ಪ: ದಿ ರೈಸ್’ ಸಿನಿಮಾ ಬಾಚಿಕೊಂಡಿದೆ. ‘ಪುಷ್ಪ: ದಿ ರೈಸ್’ ಸಿನಿಮಾದಲ್ಲಿ ಕೂಲಿಯಾಳು ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಬಾಡಿ ಲ್ಯಾಂಗ್ವೇಜ್ ಮತ್ತು ಮ್ಯಾನರಿಸಂ ಕಂಡು ಪ್ರೇಕ್ಷಕರು ಮನಸೋತಿದ್ದಾರೆ. ಹಾಗೇ, ಅವರ ‘ತಗ್ಗೆದೆ ಲೇ’ ಡೈಲಾಗ್ ಕೂಡ ಪಾಪ್ಯುಲರ್ ಆಗಿದೆ.

ಎಲ್ಲೆಲ್ಲೂ ‘ಪುಷ್ಪ’ ಹವಾ ಜೋರಾಗಿದ್ದು, ಭಾರತದ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಥೇಟ್ ಅಲ್ಲು ಅರ್ಜುನ್‌ರಂತೆಯೇ ಕಾಣಿಸಿಕೊಂಡಿದ್ದಾರೆ. ಹೌದು, ‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಹೇಗಿದ್ದಾರೋ.. ಅದೇ ಅವತಾರ ತಾಳಿದ್ದಾರೆ ರವೀಂದ್ರ ಜಡೇಜಾ. ‘ಪುಷ್ಪ’ ಸ್ಟೈಲ್‌ನಲ್ಲೇ ಗುಂಗರು ಕೂದಲು, ಗಡ್ಡ ಬಿಟ್ಟು ಬೀಡಿ ಹಚ್ಚಿ ರವೀಂದ್ರ ಜಡೇಜಾ ಖಡಕ್ ಪೋಸ್ ಕೊಟ್ಟಿದ್ದಾರೆ.

ಸೇಮ್ ಟು ಸೇಮ್ ‘ಪುಷ್ಪರಾಜ್’ ರೀತಿಯೇ ಕಾಣಿಸಿಕೊಂಡಿರುವ ರವೀಂದ್ರ ಜಡೇಜಾ, ತಮ್ಮ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮತ್ತೆ ಧೂಳೆಬ್ಬಿಸಿದ ಅಲ್ಲು ಅರ್ಜುನ್ – ಸಮಂತಾ: ಟ್ರೆಂಡಿಂಗ್ ಆಗುತ್ತಿದೆ ‘ಊ ಅಂಟಾವಾ ಮಾವ’ ಹಾಡು
ರವೀಂದ್ರ ಜಡೇಜಾ ಟ್ವೀಟ್
‘’ಪುಷ್ಪ’ ಅಂದ್ರೆ ಫ್ಲವರ್ ಅಂದುಕೊಂಡಿದ್ದೀರಾ ಫೈಯರು’’ ಎಂಬ ‘ಪುಷ್ಪ: ದಿ ರೈಸ್’ ಸಿನಿಮಾದ ಡೈಲಾಗ್ ಅನ್ನು ಟ್ವೀಟ್ ಮಾಡಿ, ಅದರ ಜೊತೆಗೆ ‘’ಧೂಮಪಾನ ಮತ್ತು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ. ನಾನು ಯಾವುದೇ ರೀತಿಯ ಧೂಮಪಾನವನ್ನು ಉತ್ತೇಜಿಸುವುದಿಲ್ಲ. ಧೂಮಪಾನ ಮಾಡದಿರಿ. ಚಿತ್ರದಲ್ಲಿ ಬಳಸಲಾದ ಬೀಡಿ ಗ್ರಾಫಿಕ್ ಉದ್ದೇಶಗಳಿಗಾಗಿ ಮಾತ್ರ’’ ಎಂದು ರವೀಂದ್ರ ಜಡೇಜಾ ಟ್ವೀಟಿಸಿದ್ದಾರೆ.

ಹೊಸ ಇತಿಹಾಸ ಸೃಷ್ಟಿಸಿದ ‘ಪುಷ್ಪ’: 5 ಮಿಲಿಯನ್ ಟಿಕೆಟ್ಸ್ ಸೋಲ್ಡ್ ಔಟ್!
ಅಲ್ಲು ಅರ್ಜುನ್ ಪ್ರತಿಕ್ರಿಯೆ
ರವೀಂದ್ರ ಜಡೇಜಾ ಅವರ ಬೆಂಕಿ ಲುಕ್ ಕಂಡು ಅಲ್ಲು ಅರ್ಜುನ್ ಖುಷಿ ಪಟ್ಟಿದ್ದಾರೆ. ರವೀಂದ್ರ ಜಡೇಜಾ ಅವರ ಲುಕ್‌ಗೆ ‘ತಗ್ಗೆದೆ ಲೇ’ ಎಂದು ಅಲ್ಲು ಅರ್ಜುನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

‘ಪುಷ್ಪ’ ಚಿತ್ರಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಭರ್ಜರಿ ಗಿಫ್ಟ್ ನೀಡಿದ ನಿರ್ದೇಶಕ!
ವೈರಲ್ ಆಗಿದೆ ಫೋಟೋ

ರವೀಂದ್ರ ಜಡೇಜಾ ಅವರ ‘ಪುಷ್ಪ’ ಅವತಾರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರವೀಂದ್ರ ಜಡೇಜಾ ಅವರ ಬೆಂಕಿ ಲುಕ್‌ಗೆ 15 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

‘ಪುಷ್ಪ: ದಿ ರೈಸ್’
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಧನಂಜಯ, ಫಹಾದ್ ಫಾಸಿಲ್, ಸುನೀಲ್ ಮುಂತಾದ ದೊಡ್ಡ ತಾರಾಬಳಗ ಹೊಂದಿರುವ ‘ಪುಷ್ಪ: ದಿ ರೈಸ್’ ಚಿತ್ರಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಬಿಡುಗಡೆಯಾದ 15 ದಿನಗಳಲ್ಲಿ ‘ಪುಷ್ಪ: ದಿ ರೈಸ್’ ಸಿನಿಮಾ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಒಟ್ಟಾರೆಯಾಗಿ ವಿಶ್ವದಾದ್ಯಂತ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹಾಗೇ, ಬುಕ್ ಮೈ ಶೋ ವೆಬ್‌ತಾಣದಲ್ಲಿ ‘ಪುಷ್ಪ: ದಿ ರೈಸ್’ ಚಿತ್ರದ 5 ಮಿಲಿಯನ್ ಟಿಕೆಟ್‌ಗಳು ಸೇಲ್ ಆಗಿ ದಾಖಲೆ ಬರೆದಿತ್ತು.



Read more

[wpas_products keywords=”deal of the day party wear dress for women stylish indian”]