Karnataka news paper

ಚಿನ್ನ ಖರೀದಿಸುವ ಮುನ್ನ ನಿಮ್ಮ ನಗರದ ಬೆಳ್ಳಿ-ಬಂಗಾರದ ದೈನಂದಿನ ಬೆಲೆ ವಿವರ ಇಲ್ಲಿದೆ


ಬೆಂಗಳೂರು : ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಹೀಗಾಗಿ ಸಹಜವಾಗಿಯೇ ಬಂಗಾರ ಪ್ರಿಯರು 2022ರ ಹೊಸವರ್ಷದಲ್ಲಿ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದರು.

ಇಂದು ಜನವರಿ 13 ಗುರುವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹4,894 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ ₹4,888 ರೂ ನಿಗದಿಯಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ದೈನಂದಿನ ಬೆಲೆಯಲ್ಲಿ ಇಳಿಕೆ ಆಗಿದೆಯೇ? ಇಲ್ಲಿದೆ ವಿವರ
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹44,800 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹48,880 ರೂಪಾಯಿ ದಾಖಲಾಗಿದೆ.

ಬೆಳ್ಳಿ ದರ
ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹65,000 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹61,000 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ ₹61,000 ರೂ. ನಿಗದಿಯಾಗಿದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ,
ಬೆಂಗಳೂರು: ₹44,800 (22 ಕ್ಯಾರಟ್‌) – ₹48,880 (24 ಕ್ಯಾರಟ್‌)
ಚೆನ್ನೈ: ₹45,000 (22 ಕ್ಯಾರಟ್‌) – ₹49,010 (24 ಕ್ಯಾರಟ್‌)
ದಿಲ್ಲಿ: ₹46,950 (22 ಕ್ಯಾರಟ್‌) – ₹51,210 (24 ಕ್ಯಾರಟ್‌)
ಹೈದರಾಬಾದ್‌: ₹44,800 (22 ಕ್ಯಾರಟ್‌) – ₹48,880 (24 ಕ್ಯಾರಟ್‌)

ಕೋಲ್ಕತಾ: ₹47,100 (22 ಕ್ಯಾರಟ್‌) – ₹49,800 (24 ಕ್ಯಾರಟ್‌)
ಮಂಗಳೂರು: ₹44,800 (22 ಕ್ಯಾರಟ್‌) – ₹48,880 (24 ಕ್ಯಾರಟ್‌)
ಮುಂಬಯಿ: ₹46,940 (22 ಕ್ಯಾರಟ್‌) – ₹48,940 (24 ಕ್ಯಾರಟ್‌)
ಮೈಸೂರು: ₹44,800 (22 ಕ್ಯಾರಟ್‌) – ₹48,880 (24 ಕ್ಯಾರಟ್‌)

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಕೆಲವು ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದರೆ ಬೆಳ್ಳಿ ಬೆಲೆಯಲ್ಲಿಯೂ ಕೆಲವು ಕಡೆಗಳಲ್ಲಿ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ.

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ನಿಮ್ಮ ನಗರಗಳಲ್ಲಿ ಇಂದಿನ ದಿನ ಚಿನ್ನ ಮತ್ತು ಬೆಳಿಗೆ ಎಷ್ಟು ದರ ಇವೆ ಅನ್ನೋದನ್ನು ಇಲ್ಲಿ ನೀವು ಪ್ರತಿ ದಿನ ತಿಳಿದುಕೊಳ್ಳಬಹುದು.



Read more

[wpas_products keywords=”deal of the day sale today offer all”]