ಹೈಲೈಟ್ಸ್:
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿ.
- ವಿದೇಶಿ ನೆಲದಲ್ಲಿ ಮುಂದುವರಿದ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ವೈಫಲ್ಯ.
- ಕೊನೆಯ 14 ಇನಿಂಗ್ಸ್‌ಗಳಲ್ಲಿ 13ರಲ್ಲಿ ವೈಫಲ್ಯ ಅನುಭವಿಸಿರುವ ಅಗರ್ವಾಲ್.
- ಈ ಟೆಸ್ಟ್ ಸರಣಿಯಲ್ಲಿ ಮಯಾಂಕ್ 6 ಇನಿಂಗ್ಸ್‌ಗಳಿಂದ ಕೇವಲ 135 ರನ್ ಗಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಮೂರನೇ ಹಾಗೂ ಸರಣಿ ನಿರ್ಣಾಯಕ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 7 ರನ್‌ಗೆ ವಿಕೆಟ್ ಒಪ್ಪಿಸಿದ್ದ ಮುಯಾಂಕ್ ಅಗರ್ವಾಲ್, ದ್ವಿತೀಯ ಇನಿಂಗ್ಸ್‌ನಲ್ಲಿ ಎಲ್‌ಬಿಡಬ್ಲ್ಯು ಔಟ್‌ನಿಂದ ಪಾರಾಗಿದ್ದರ ಹೊರತಾಗಿಯೂ ಮಾರ್ಕೊ ಯೆನ್ಸನ್ ಅವರ ಎಸೆತದಲ್ಲಿ ಕಕ್ಕಾಬಿಕ್ಕಿಯಾಗಿ ಸ್ಲಿಪ್‌ಗೆ ಕ್ಯಾಚ್ ಕೊಟ್ಟಿದ್ದರು. ಆ ಮೂಲಕ ಈ ಸರಣಿಯಲ್ಲಿನ ತಮ್ಮ ಅಭಿಯಾನ ಅಂತ್ಯಗೊಳಿಸಿದರು.
ಅಂದಹಾಗೆ ಭಾರತ ಟೆಸ್ಟ್ ತಂಡದ ಆರಂಭಿಕ ಸ್ಥಾನಕ್ಕೆ ರೋಹಿತ್ ಶರ್ಮಾ, ಶುಭಮನ್ ಗಿಲ್, ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅವರ ನಡುವೆ ತೀವ್ರ ಪೈಪೋಟಿ ಇದೆ. ಇಂಥಾ ಸನ್ನಿವೇಶದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ತಮ್ಮ ಸ್ಥಾನವನ್ನು ಸಾಬೀತುಪಡಿಸಲು ಮಯಾಂಕ್‌ಗೆ ಅತ್ಯುತ್ತಮ ಅವಕಾಶವಿತ್ತು. ಆದರೆ, 60, 4, 26, 23, 15 ಹಾಗೂ 7 ರನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ವಿದೇಶಿ ನೆಲದಲ್ಲಿ ವಿಫಲರಾದರು.
ಬುಮ್ರಾ ದಾಳಿಗೆ ಆಫ್ರಿಕಾ 210ಕ್ಕೆ ಆಲ್‌ಔಟ್: ಭಾರತಕ್ಕೆ 70 ರನ್ ಮುನ್ನಡೆ!
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಮಯಾಂಕ್ ಅಗರ್ವಾಲ್ ನ್ಯೂಜಿಲೆಂಡ್ ವಿರುದ್ಧ ತವರು ಟೆಸ್ಟ್ ಸರಣಿಯಲ್ಲಿ ಶತಕ ಸೇರಿದಂತೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆದರೆ ಇದೇ ಲಯವನ್ನು ಹರಿಣಗಳ ನಾಡಿನಲ್ಲಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲದೆ ವಿದೇಶಿ ನೆಲದಲ್ಲಿ ಸತತ 14 ಇನಿಂಗ್ಸ್‌ಗಳಲ್ಲಿ ಮಯಾಂಕ್ ಅಗರ್ವಾಲ್ ಸತತ ವೈಫಲ್ಯ ಅನುಭವಿಸಿದಂತಾಗಿದೆ.
ಕಳೆದ 14 ಟೆಸ್ಟ್ ಇನಿಂಗ್ಸ್‌ಗಳಲ್ಲಿ ಮಯಾಂಕ್ ಅಗರ್ವಾಲ್ ಕ್ರಮವಾಗಿ 7, 15, 23, 26, 4, 60, 9,38, 5, 0, 9, 17, 3, 7 ರನ್ ಮಾತ್ರ ಗಳಿಸಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ವಿದೇಶಿ ನೆಲದಲ್ಲಿನ ವೇಗಿಗಳ ಸ್ನೇಹಿ ವಿಕೆಟ್‌ನಲ್ಲಿ ಮಯಾಂಕ್ ಅಗರ್ವಾಲ್ ತಮ್ಮ ಬ್ಯಾಟಿಂಗ್ ಕೌಶಲವನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳಬೇಕೆಂಬುದು ಇಲ್ಲಿ ಸಾಬೀತಾಗಿದೆ.
ಸ್ಪಿನ್ ಬೌಲಿಂಗ್‌ನಲ್ಲಿ ಬಲಿಷ್ಠವಾಗಿರುವ ಮಯಾಂಕ್ ಅಗರ್ವಾಲ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಗಳಿಸಿರುವ 1407 ರನ್‌ಗಳಲ್ಲಿ ಬಹುತೇಕ ರನ್ ತವರು ಟೆಸ್ಟ್ ಸರಣಿಗಳಲ್ಲಿ ಗಳಿಸಿದ್ದಾರೆ. ಹಾಗಾಗಿ ಅವರು ವಿದೇಶಿ ಟೆಸ್ಟ್ ಸರಣಿಗಳಲ್ಲಿ ತಮ್ಮ ಬ್ಯಾಟಿಂಗ್ ಅನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ.
ಇನ್ನು ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಂದ ಸಮಬಲದ ಹೋರಾಟ ಮುಂದುವರಿದಿದೆ. ಬುಧವಾರ ಒಂದು ವಿಕೆಟ್ ನಷ್ಟಕ್ಕೆ 17 ರನ್‌ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ್ದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಜಸ್‌ಪ್ರಿತ್ ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ನಲುಗಿ 210 ರನ್‌ಗಳಿಗೆ ಆಲ್‌ಔಟ್ ಆಗಿತ್ತು.
ಭಾರತ Vs ದಕ್ಷಿಣ ಆಫ್ರಿಕಾ 3ನೇ ಟೆಸ್ಟ್ ಸ್ಕೋರ್‌ಕಾರ್ಡ್
ಭಾರತಕ್ಕೆ 70 ರನ್ ಮುನ್ನಡೆ: ಬಳಿಕ 13 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಭಾರತ ತಂಡ ಬಹುಬೇಗ ಆರಂಭಿಕರಾದ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಕಠಿಣ ಹೋರಾಟ ನಡೆಸುವ ಮೂಲಕ ತಮ್ಮ ಬ್ಯಾಟಿಂಗ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಅಂದಹಾಗೆ ಎರಡನೇ ದಿನದಾಟದ ಅಂತ್ಯಕ್ಕೆ 17 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿರುವ ಭಾರತ 70 ರನ್ ಮುನ್ನಡೆಯಲ್ಲಿದೆ.
Read more
[wpas_products keywords=”deal of the day gym”]